ಈ ಮಾರ್ಚ್ 31 ಎನ್ನುವುದು ಈ ವರ್ಷದ ಆರ್ಥಿಕ ವರ್ಷದ ಕೊನೆಯ ದಿನಾಂಕ ವಾಗಿದ್ದು ಏಪ್ರಿಲ್ 1ರಿಂದ ಹೊಸ ಆರ್ಥಿಕ ವರ್ಷ(Economical Year) ಪ್ರಾರಂಭವಾಗಲಿದೆ. ಹೀಗಾಗಿ ಮಾರ್ಚ್ 31ರ ಒಳಗಡೆ ಸಾಕಷ್ಟು ಕೆಲಸಗಳನ್ನು ನೀವು ಪೂರ್ಣಗೊಳಿಸಬೇಕು ಇಲ್ಲದಿದ್ದರೆ ಸರ್ಕಾರಿ ದಾಖಲೆಗಳಿಂದ ಆಗುವಂಥ ಹಲವಾರು ಕೆಲಸಗಳಲ್ಲಿ ತೊಡಕು ಉಂಟಾಗುವದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಬನ್ನಿ ಆ ಪ್ರಮುಖ ಕಾರ್ಯಗಳು ಯಾವುವು ಎಂಬುದನ್ನು ಸಂಪೂರ್ಣ ವಿವರಣೆಯೊಂದಿಗೆ ತಿಳಿಯೋಣ.
ಮೊದಲನೇದಾಗಿ ಆಧಾರ್ ಕಾರ್ಡ್(Aadhar Card) ಅನ್ನು ಪಾನ್ ಕಾರ್ಡ್ ಜೊತೆಗೆ ಲಿಂಕ್ ಮಾಡುವಂತಹ ಪ್ರಕ್ರಿಯೆ ಮಾರ್ಚ್ 31ರಂದು ಕೊನೆಗೊಳ್ಳಲಿದ್ದು ಇದಾದ ನಂತರ ಒಂದು ವೇಳೆ ನೀವು ಆಧಾರ್ ಅನ್ನು ಪಾನ್ ಕಾರ್ಡ್ (Pan Card) ಜೊತೆಗೆ ಲಿಂಕ್ ಮಾಡಿಲ್ಲ ಎಂದರೆ ಖಂಡಿತವಾಗಿ ನಿಮ್ಮ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ. ಇದರಿಂದಾಗಿ ಐಟಿ ರಿಟರ್ನ್ (IT Return) ಫೈಲ್ 5 ಲಕ್ಷಕ್ಕಿಂತ ಅಧಿಕ ಹಣವನ್ನು ಜಮೆ ಮಾಡುವುದು ಸೇರಿದಂತೆ ಆರ್ಥಿಕ ಹಾಗೂ ಕೆಲವೊಂದು ಸರ್ಕಾರಿ ಕೆಲಸಗಳಲ್ಲಿ ಕೂಡ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳುವುದರ ಮುಖಾಂತರ ನಿಮ್ಮ ಕೆಲಸಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿದೆ.
ಹೀಗಾಗಿಯೇ ಪಾನ್ ಕಾರ್ಡ್ ಅನ್ನು ಲೇಟ್ ಫೈನ್ ರೂಪದಲ್ಲಿ 1000 ರೂಪಾಯಿ ದಂಡ ಕಟ್ಟಿ ನಿಮ್ಮ ಆಧಾರ್ ಹಾಗೂ ಪಾನ್ ಅನ್ನು ಲಿಂಕ್ ಮಾಡುವ ಮೂಲಕ ಎಲ್ಲಾ ಬ್ಯಾಂಕಿಂಗ್ ಸೇವೆಗಳನ್ನು ಜಾರಿಯಲ್ಲಿರಿಸಿ. ಇವುಗಳ ಜೊತೆಗೆ ಪ್ರಧಾನಮಂತ್ರಿ ವಯ ವಂದನ ಯೋಜನಾ (Pradhan Mantri Vayavandhana Yojana) ಯೋಜನೆ ಕೂಡ ಇದೇ ಮಾರ್ಚ್ 31ಕ್ಕೆ ಮುಗಿಯಲಿದ್ದು ಇದನ್ನು ನವೀಕರಿಸಲು ಕೂಡ ಮಾರ್ಚ್ 31 ಕೊನೆಯ ದಿನಾಂಕವಾಗಿದೆ.
ಇದರ ವ್ಯಾಲಿಡಿಟಿ ಹತ್ತು ವರ್ಷ ಆಗಿದ್ದು ಹಣವನ್ನು ಉಳಿಸಲು ಬಯಸುವವರು ಈ ಯೋಜನೆಗೆ ಸೇರಬಹುದಾಗಿದೆ. ಅವಧಿ ಮುಗಿದ ನಂತರ ತಿಂಗಳಿಗೆ ಒಂದು ಸಾವಿರದಿಂದ ಪ್ರಾರಂಭವಾಗಿ 9500ಗೂ ಕೂಡ ಪಿಂಚಣಿಯ (Pension) ರೂಪದಲ್ಲಿ ಹಣವನ್ನು ನೀವು ಪಡೆಯಬಹುದಾಗಿದೆ. ಒಂದು ವೇಳೆ ನೀವು ತೆರಿಗೆ ಹಣದಲ್ಲಿ(Tax Money) ಉಳಿತಾಯ ಮಾಡಬೇಕು ಎನ್ನುವ ಆಸೆಯನ್ನು ಹೊಂದಿದ್ದರೆ ಮಾರ್ಚ್ 31ರ ಒಳಗೆ ನೀವು ಹೂಡಿಕೆ ಮಾಡಬೇಕಾಗುತ್ತದೆ. 2022 ಹಾಗೂ 23 ವರ್ಷದ ಮಾರ್ಚ್ 31 ಕೊನೆಯ ದಿನಾಂಕವಾಗಿದೆ. ಹೀಗಾಗಿ ಆರ್ಥಿಕ ಸ್ಥಿತಿಗತಿಗೆ ಸಂಬಂಧಿಸಿದ ಈ ಎಲ್ಲಾ ಕೆಲಸಗಳನ್ನು ಕೂಡ ನೀವು ಈ ಸಂದರ್ಭದಲ್ಲಿ ಮಾಡಿ ಮುಗಿಸುವುದು ಒಳ್ಳೆಯದು.