Govt Bank: ಸರ್ಕಾರಿ ಬ್ಯಾಂಕಿನಲ್ಲಿ ಅಕೌಂಟ್ ಇದ್ದವರಿಗೆ ಸಿಹಿಸುದ್ದಿ! ಬಂತು ಹೊಸ ರೂಲ್ಸ್
RBI ಗವರ್ನರ್ ಶಕ್ತಿಕಾಂತ್ ದಾಸ್ (Shaktikanta Das) ರವರು ಸರ್ಕಾರಿ ಬ್ಯಾಂಕಿನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಬ್ಯಾಂಕಿಂಗ್ ಸೇವೆಗಳನ್ನು ನೀಡುವ ಕುರಿತಂತೆ ಯೋಚಿಸಲಾಗಿದೆ ಎಂಬುದಾಗಿ ಹೇಳಿದ್ದಾರೆ. ಬ್ಯಾಂಕಿನ ಗ್ರಾಹಕರಿಗೆ ಇರುವಂತಹ ಸಮಸ್ಯೆಗಳನ್ನು ಪರಿಹರಿಸಲು CMS ಹೋಟೆಲ್ಗಳನ್ನು ಕೂಡ ತೆರೆಯುವುದರ ಕುರಿತಂತೆ ಮಾಹಿತಿ ನೀಡಿದ್ದಾರೆ. ಗವರ್ನೆನ್ಸ್ ಅನ್ನು ಬುಡಮಟ್ಟದಿಂದ ಭಾರತ ಪ್ರತಿಯೊಂದು ಬ್ಯಾಂಕಿಂಗ್ ವ್ಯವಸ್ಥೆ ಹಾಗು ಸೇವೆಯಲ್ಲಿ ಇನ್ನಷ್ಟು ಸುಧಾರಣೆ ತರುವಂತಹ ಕೆಲಸವನ್ನು ಮಾಡುವ ಬಗ್ಗೆ ಗವರ್ನರ್ ಹೇಳಿದ್ದಾರೆ. ಈಗಾಗಲೇ ಇರುವಂತಹ ವ್ಯವಸ್ಥೆ ಸರಿ ಇಲ್ಲ ಎಂದಲ್ಲ ಇದನ್ನು ಇನ್ನಷ್ಟು ಉತ್ತಮೀಕರಣ ಮಾಡುವಂತಹ ಪ್ರಯತ್ನ ನಡೆಯುತ್ತಿದೆ ಎಂಬುದಾಗಿ ಅವರು ಹೇಳಿದ್ದಾರೆ.
ಬ್ಯಾಂಕಿಂಗ್ ನಲ್ಲಿ ನಮಗೆ ಕಾಣುವಂತಹ ಪ್ರತಿಯೊಂದು ಸಮಸ್ಯೆ ಅಥವಾ ಕುಂದುಕೊರತೆಗಳನ್ನು ನಾವು ಆಯಾಯ ಬ್ಯಾಂಕ್ಗಳಿಗೆ ತಿಳಿಸುತ್ತೇವೆ ಹಾಗೂ ಅವುಗಳನ್ನು ಸುಧಾರಿಸಲು ಸಹಾಯ ಮಾಡುವ ಮೂಲಕ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಉತ್ತಮ ಗೊಳಿಸುವಂತಹ ಕೆಲಸವನ್ನು ಮಾಡುತ್ತೇವೆ ಎಂಬುದಾಗಿ ಹೇಳಿದ್ದಾರೆ. ಆಡಿಟಿಂಗ್ (Auditing) ಹಾಗೂ ನಿರ್ಧಾರ ತೆಗೆದುಕೊಳ್ಳುವಂತಹ ಪ್ರಕ್ರಿಯೆ ಸೇರಿದಂತೆ ಇನ್ನೂ ಹಲವಾರು ಪ್ರಕ್ರಿಯೆಗಳಲ್ಲಿ ಬ್ಯಾಂಕುಗಳು ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವಂತೆ ಮಾಡುತ್ತೇವೆ. ಸಾರ್ವಜನಿಕರಿಗೆ ಸಿಗಬೇಕಾಗಿರುವಂತಹ ಬ್ಯಾಂಕಿಂಗ್ ಸೇವೆ ಸೇರಿದಂತೆ ಇನ್ನು ಹಲವಾರು ಯೋಜನೆಗಳನ್ನು ಅವರಿಗೆ ತಲುಪಿಸುವಂತಹ ಕೆಲಸ ನಮ್ಮ ಪ್ರಾಥಮಿಕ ಕೆಲಸವಾಗಿರುತ್ತದೆ, ಬ್ಯಾಂಕುಗಳಿಗೆ ಈ ಕುರಿತಂತೆ ಹೆಚ್ಚಿನ ಗಮನವನ್ನು ವಹಿಸಲು ಕೂಡ ಹೇಳಲಾಗಿದೆ ಎಂಬುದಾಗಿ ಕೂಡ ದಾಸ್ ಹೇಳಿದ್ದಾರೆ.
ಈ ವಿಚಾರವನ್ನು ತಲೆಯಲ್ಲಿ ಇಟ್ಟುಕೊಂಡು Integrated Ombudsman ಯೋಜನೆಯನ್ನು ಜಾರಿಗೆ ತಂದಿದ್ದು CMS ಪೋರ್ಟಲ್ ಅನ್ನು ಇದೇ ಕಾರಣಕ್ಕಾಗಿ ಜಾರಿಗೆ ತರಲಾಗಿದೆ. ಇಲ್ಲಿ ನೀವು ನಿಮ್ಮ ದೂರನ್ನು ದಾಖಲಿಸಬಹುದಾಗಿದ್ದು, ಇದಾದ ನಂತರ ನಿಮ್ಮ ದೂರಿನ ಬಗ್ಗೆ ತನಿಖಾಧಿಕಾರಿ ತನಿಖೆಯನ್ನು ನಡೆಸಿ ಅಲ್ಲಿ ಯಾವ ರೀತಿಯ ಕೊರತೆ ಇದೆ ಎಂಬುದನ್ನು ಪರಿಗಣಿಸಿ ಅದಕ್ಕೆ ಸರಿಯಾದ ಪರಿಹಾರವನ್ನು ನೀಡುತ್ತಾರೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಕೂಡ ನೀವು RBI ಅಧಿಕೃತ ವೆಬ್ ಸೈಟ್ ಗೆ ಹೋಗಿ ಅಲ್ಲಿಂದ CMS ಪೋರ್ಟಲ್ ಗೆ ಹೋಗಬಹುದಾಗಿದೆ. ಅಲ್ಲಿಗೆ ಹೋದ ನಂತರ ನೀವು ನಿಮ್ಮ ಬ್ಯಾಂಕಿಂಗ್ ಸಮಸ್ಯೆಯನ್ನು ಸಂಪೂರ್ಣ ವಿವರಗಳೊಂದಿಗೆ ಅಲ್ಲಿ ಬರೆದು ಸಮಸ್ಯೆ ಪರಿಹಾರವನ್ನು ಕೇಳಬಹುದಾಗಿದೆ. ಪ್ರತಿಯೊಂದು ಬ್ಯಾಂಕುಗಳಲ್ಲಿ ಕೂಡ ಅಲ್ಲಿನ ಸಮಸ್ಯೆಯನ್ನು ರಿಪೋರ್ಟ್ ಮಾಡುವಂತಹ ಪೋರ್ಟಲ್ ಗಳು ಇರುತ್ತವೆ. ಒಂದು ವೇಳೆ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂದಾದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಈ ಪೋರ್ಟಲ್ಲಿ ಹೋಗಿ ನೇರವಾಗಿ ದೂರು ನೀಡುವ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆದುಕೊಳ್ಳಬಹುದಾಗಿದೆ.