RBI: 100, 10 ಹಾಗೂ 5 ರೂಪಾಯಿ ನೋಟುಗಳ ಬಗ್ಗೆ ದೊಡ್ಡ ಅಪ್ಡೇಟ್ ನೀಡಿದ ಆರ್‌ಬಿಐ

Advertisement
RBI ಬಗ್ಗೆ ನಿಮಗೆಲ್ಲರಿಗೂ ತಿಳಿದಿರಬಹುದು ಈ ಸಂಸ್ಥೆ ಭಾರತ ದೇಶದ ಆರ್ಥಿಕ ವ್ಯವಸ್ಥೆಯನ್ನು ಸಂತುಲನದಲ್ಲಿಟ್ಟುಕೊಳ್ಳುವಂತಹ ಜವಾಬ್ದಾರಿಯನ್ನು ಹೊಂದಿದ್ದು ಪ್ರತಿಯೊಂದು ಬ್ಯಾಂಕಿಂಗ್ ವ್ಯವಸ್ಥೆಗಳು ಹಾಗೂ ನಿಯಮಗಳು ಮತ್ತು ಬ್ಯಾಂಕುಗಳು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ(Reserve Bank Of India) ನಿಯಮಾವಳಿಗಳ ಅಡಿಯಲ್ಲಿ ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಆರ್‌ಬಿಐ ಮೂಲಕ ಕೆಲವೊಂದು ಘೋಷಣಾವಳಿಗಳು ಕೇಳಿ ಬರುವ ಸಾಧ್ಯತೆ ಇದ್ದು ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಸುದ್ದಿ ಕೇಳಿ ಬರುತ್ತಿದೆ. ಬನ್ನಿ ಆ ಸುದ್ದಿ ಏನೆಂಬುದನ್ನು ತಿಳಿಯೋಣ.
ಕೇಳಿ ಬಂದಿರುವ ಮಾಹಿತಿಯ ಪ್ರಕಾರ ಹಳೆ 100 10 5 ರೂಪಾಯಿಗಳ ನೋಟನ್ನು ವಾಪಸು ಪಡೆದುಕೊಳ್ಳುವಂತಹ ನಿರ್ಧಾರವನ್ನು ಮಾಡಿದೆ ಎಂಬುದಾಗಿ ತಿಳಿದು ಬಂದಿದೆ. ಮಾರುಕಟ್ಟೆಯಲ್ಲಿ ಹೆಚ್ಚಾಗುತ್ತಿರುವ ಅಂತಹ ನಕಲಿ ನೋಟುಗಳ ಪ್ರಮಾಣವನ್ನು ಕಡಿಮೆ ಮಾಡಲು ಹಾಗೂ ಅವುಗಳ ವಿರುದ್ಧ ಕಟ್ಟುನಿಟಿನ ಕ್ರಮವನ್ನು ಕೈ ತೆಗೆದುಕೊಳ್ಳುವ ಕಾರಣದಿಂದಾಗಿಯೇ ಈ ರೀತಿಯ ನಿರ್ಧಾರವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೈಗೊಂಡಿದೆ ಎಂಬುದಾಗಿ ತಿಳಿದು ಬಂದಿದೆ. ಈ ನೋಟುಗಳನ್ನು ಬ್ಯಾಂಕುಗಳಿಗೆ ಜವ ಮಾಡಬೇಕು ಹಾಗೂ ಅದರಿಂದ ಯಾರು ಜಮಾ ಮಾಡಿದ್ದಾರೋ ಅವರ ಖಾತೆಗೆ ಈ ಹಣ ವರ್ಗಾವಣೆ ಆಗುತ್ತದೆ ಹಾಗೂ ನೋಟುಗಳನ್ನು ಹೊಸ ಶ್ರೇಣಿಯ ನೋಟುಗಳ ರೂಪದಲ್ಲಿ ಮರು ಮುದ್ರಣ ಮಾಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಹೊಸ ನೂರು ರೂಪಾಯಿ ನೋಟುಗಳನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾರುಕಟ್ಟೆಯಲ್ಲಿ ತಂದಿದ್ರು ಕೂಡ ಹಳೆಯ ನೂರು ರೂಪಾಯಿ ನೋಟುಗಳು ಅಧಿಕೃತವಾಗಿ ಚಲಾವಣೆಯಲ್ಲಿವೆ. ರೂ. 10 ನಾಣ್ಯಗಳ(RBI about 10rs Coins) ಬಗ್ಗೆ ಕೂಡ ಆರ್‌ಬಿಐ ತಲೆಕೆಡಿಸಿಕೊಂಡಿದೆ ಯಾಕೆಂದರೆ ಇದು ಮಾರುಕಟ್ಟೆಗೆ ಇಳಿದು 15 ವರ್ಷಗಳಾಗಿದ್ದರೂ ಕೂಡ ಕೆಲವೊಂದು ಅಂಗಡಿಯವರು ಒಪ್ಪಿಕೊಳ್ಳಲು ಸಿದ್ದರಿಲ್ಲ. ಈ ಕುರಿತಂತೆ ಕೂಡ ಹೇಳಿಕೆ ನೀಡಿರುವ ಆರ್ಬಿಐ ಹತ್ತು ರೂಪಾಯಿ ನಾಣ್ಯಗಳನ್ನು ನಾವು ಯಾವತ್ತೂ ಕೂಡ ಅನಧಿಕೃತ ಎಂಬುದಾಗಿ ಘೋಷಿಸಿಲ್ಲ ಅಧಿಕೃತವಾಗಿ ಚಲಾವಣೆಯಲ್ಲಿರುವಂತಹ ನಾಣ್ಯವಾಗಿದೆ. ಈ ನಾಣ್ಯಗಳನ್ನು ಪಡೆಯುವುದಕ್ಕೆ ಯಾರು ಕೂಡ ಹಿಂಜರಿಯಬೇಕಾದ ಅಗತ್ಯವಿಲ್ಲ ಎಂಬುದಾಗಿ ಕೂಡ ಹೇಳಲಾಗಿದೆ.
RBI ಕೂಡ ಸಾಮಾನ್ಯ ಜನರ ನಡುವೆ ರೂ.10 ನಾಣ್ಯಗಳ ಬಗ್ಗೆ ಮಹತ್ವವನ್ನು ತಿಳಿಸುವಂತಹ ಕೆಲಸವನ್ನು ಮಾಡುತ್ತಿದೆ. ಅಧಿಕೃತವಾಗಿ ಹಾಗೂ ಎಲ್ಲರಿಗೂ ತಿಳಿಯುವಂತೆ ಸದ್ಯದ ಮಟ್ಟಿಗೆ ಯಾವುದೇ ಕಾರಣಕ್ಕೂ ಕೂಡ ಹತ್ತು ರೂಪಾಯಿ ನಾಣ್ಯಗಳನ್ನು ನಿಷ್ಕ್ರಿಯಗೊಳಿಸುವಂತಹ ಉದ್ದೇಶ ಇಲ್ಲ ಎಂಬುದನ್ನು ಕೂಡ ಸ್ಪಷ್ಟಪಡಿಸಿದೆ. ಇದರ ಜೊತೆಗೆ ಮಾರುಕಟ್ಟೆಯಲ್ಲಿ ಇರುವಂತಹ ನಕಲಿ ನೋಟುಗಳನ್ನು ತೆಗೆಯುವಂತಹ ಸಂಪೂರ್ಣ ಕಾರ್ಯ ಜಾರಿಯಲ್ಲಿದೆ ಎಂಬುದನ್ನು ಕೂಡ ದೃಢೀಕರಿಸಿದೆ.