Daughter Rights: ಹೆಣ್ಣು ಮಕ್ಕಳಿಗೆ ತಂದೆಯ ಆಸ್ತಿ ಯಾವಾಗ ಸಿಗೋದಿಲ್ಲ, ಇಲ್ಲಿದೆ ಮಾಹಿತಿ

Advertisement
ಇಂದು ಗಂಡಿನಷ್ಟೆ ಹೆಣ್ಣು ಕೂಡ ಸಮಾನಳು, ಅದೇ ರೀತಿ ಆಸ್ತಿ ವಿಚಾರದಲ್ಲೂ ಅಷ್ಟೆ ಹೆಣ್ಣು ಮಕ್ಕಳಿಗೂ ಸಮಾನ ಹಕ್ಕನ್ನು ಕೋರ್ಟ್ ನಿರ್ಧಾರ ಮಾಡಿದೆ, ಹಿಂದೂ ಅವಿಭಕ್ತ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಸಮಪಾಲು ಪಡೆಯುವ ಹಕ್ಕನ್ನು ಹೊಂದಿರುವವರು ಎಂದು 2005ರ ಸೆ. 9ರಂದು ಸುಪ್ರೀಂ ಕೋರ್ಟ್ ತೀರ್ಪು (Supreme court) ಆದೇಶ ನೀಡಿತ್ತು. ಈ ಆದೇಶ ದಂತೆ ಹೆಣ್ಣು ಮಕ್ಕಳು ಕೂಡ ಸರಿಯಾದ ಆಸ್ತಿ ಪಾಲನ್ನು ಪಡೆಯಬಹುದಾಗಿದೆ.
ಹೆಣ್ಣು ಮಕ್ಕಳಿಗೆ ಸಮಾನ ಆಸ್ತಿ ಹಕ್ಕು:
ಗಂಡಿಗೆ ನೀಡುವಷ್ಟೆ ಆಸ್ತಿಯ ಹಕ್ಕನ್ನು ಹೆಣ್ಣಿಗೆ ನೀಡಬೇಕು, 2005 ರ ಹಿಂದೂ ಆನುವಂಶಿಕ ಕಾಯ್ದೆ ಜಾರಿಗೆ ಬರುವ ಮೊದಲೇ ತಂದೆ ತೀರಿಕೊಂಡಿದ್ದರೂ ಕೂಡ, ಪೋಷಕರ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಕೂಡ ಸಮಾನ ಹಕ್ಕಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
ಯಾವಾಗ ಆಸ್ತಿ ಕೇಳಲು ಬರುವುದಿಲ್ಲ:
- ತಂದೆ ಜೀವಂತ ಇದ್ದಾಗ ಆಸ್ತಿಯಲ್ಲಿ ಮಗ, ಮಗಳು ಯಾರಿಗೂ ಪಾಲು ಇರುವುದಿಲ್ಲ. ತಂದೆ ಮಾಡಿದಂತಹ ತನ್ನ ಸ್ವಂತ ದುಡಿಮೆಯಿಂದ ಗಳಿಸಿದ ಆಸ್ತಿ ಅವರದ್ದಾಗಿರುತ್ತದೆ, ತಂದೆ ತನ್ನ ಆಸ್ತಿಯನ್ನು ಮಾರಾಟ ಮಾಡಬಹುದು, ತಂದೇ ಆಸ್ತಿ ವಿಲೇವಾರಿ ಮಾಡಬಹುದು, ಒಂದು ವೇಳೆ ಮಗಳಿಗೆ ಆಸ್ತಿ ಕೊಡುವುದಿಲ್ಲ ಅಂತಾದರೆ ಯಾರ ಹೆಸರಿಗೆ ಆಸ್ತಿ ಬರೆಯಾಬೇಕೋ ಅವರಿಗೆ ಬರೆಯಬಹುದು, ಆವಾಗ ಹೆಣ್ಣಿಗೆ ಆಸ್ತಿ ಪಡೆಯಲು ಸಾಧ್ಯವಿಲ್ಲ, ಆದರೆ ವಿಲೇವಾರಿ ಮಾಡದೆ ಹಾಗೇ ತಂದೆ ಮರಣ ಹೊಂದಿದ್ದರೆ ಆತನ ಉತ್ತರಾಧಿಕಾರಿಗಳಾದ ಮಗ, ಮಗಳು, ಹೆಂಡತಿ, ತಾಯಿಗೆ ಸಮಾನವಾದ ಪಾಲು ಇರುತ್ತದೆ.
- ಸ್ವಂತವಾಗಿ ದುಡಿಯುತ್ಯಿರುವಾಗ,ತಂದೆ ತಾಯಿ ವರದಕ್ಷಿಣೆ ಹಣ ನೀಡಿದ್ದಾರೆ, ಅಂತ ಆಸ್ತಿಯನ್ನು ಹೆಣ್ಣು ಮಕ್ಕಳು ತಂದೆಯ ಜೀವಿತಾವಧಿಯಲ್ಲಿ ಹಕ್ಕನ್ನು ಕೇಳುವುದಕ್ಕೆ ಬರುವುದಿಲ್ಲ. ತಂದೆಗೆ ಬಿಟ್ಟ ನಿರ್ಧಾರ ವನ್ನು ತೆಗೆದುಕೊಳ್ಳುತ್ತಾರೆ.
- ಕೆಲವೊಂದು ಸಮಯದಲ್ಲಿ ತಂದೆಯು ಅವರ ಆಸ್ತಿಯನ್ನು ಅವರ ಗಂಡು ಮಕ್ಕಳಿಗೆ ಮಾತ್ರ ಬರೆದು ಇಟ್ಟರೆ ಅದನ್ನು ಹೆಣ್ಣು ಮಕ್ಕಳಿಗೆ ಕೊಡಬೇಕು ಅನ್ನೋ ವಿಚಾರ ಬರುವುದಿಲ್ಲ. ಆಸ್ತಿ ಪಾಲು ಸಂದರ್ಭದಲ್ಲಿ ಹೆಣ್ಣು ಮಕ್ಕಳು ಹಕ್ಕು ಬಿಡುಗಡೆ ಪತ್ರದ ಮೂಲಕ ಬಿಟ್ಟುಕೊಟ್ಟಿದ್ದರೆ ಬಿಟ್ಟುಕೊಟ್ಟ ಮೇಲೆ ಮತ್ತೆ ಕೇಳುವುದಕ್ಕೆ ಬರುವುದಿಲ್ಲ.
- ಇನ್ನೂ ಕೆಲವೊಮ್ಮೆ ಮನೆಯ ಯಜಮಾನತೆಗೆ ಹೋದಾಗ ಆಸ್ತಿಯನ್ನು ಪಾರ್ಟ್ ಮೂಲಕ ಭಾಗ ಮಾಡಿಕೊಳ್ಳಬೇಕು ಅಂತ ಇರುತ್ತದೆ. ಆಗ ಬಾಯಿ ಮಾತಿನ ಮೂಲಕ ಹೆಣ್ಣು ಮಕ್ಕಳು ನಮಗೆ ಬೇಡ ಅಂತ ಹೇಳಿರುತ್ತಾರೆ ಈ ಮೂಲಕ ಆಸ್ತಿ ಕೂಡ ಹೆಣ್ಣು ಮಕ್ಕಳು ಪಡೆಯುದಿಲ್ಲ.
- 2005 ರ ಮೊದಲನೇ ಪಾರ್ಟಿಶನ್ ಆಗಿರುವಂತಹ ಆಸ್ತಿಯ ಮೇಲೆ ಹೆಣ್ಣು ಮಕ್ಕಳಿಗೆ ಆಸ್ತಿ ಕೇಳುವ ಹಕ್ಕು ಇರುವುದಿಲ್ಲ ಗಂಡು ಮಕ್ಕಳಿಗೆ ಬದಲಾವಣೆ ಆಗಿರುತ್ತದೆ ತುಂಬಾ ವರ್ಷಗಳ ನಂತರ ಕೇಳಲು ಸಾಧ್ಯವಾಗುವುದಿಲ್ಲ, ಮೊದಲೇ ನಿರ್ಧರಿಸಿ ಆಸ್ತಿ ಪಡೆದುಕೊಳ್ಳಬೇಕು.