Karnataka Times
Trending Stories, Viral News, Gossips & Everything in Kannada

Shakti Yojana: ಶಕ್ತಿ ಯೋಜನೆ ಆಯ್ತು ಈಗ ಸರ್ಕಾರದಿಂದ ಮತ್ತೊಂದು ನಿರ್ಧಾರ!

Advertisement

ಇಂದು ರಾಜ್ಯದಲ್ಲಿ ಕಾಂಗ್ರೆಸ್ (Congress Government) ಆಡಳಿತದ ಏಕಮಾತ್ರ ಸರಕಾರ ಜನಪರ ಧೋರಣೆ ಇಟ್ಟುಕೊಂಡು ಜನರ ಒಳಿತಿಗಾಗಿ ನಾನಾವಿಧವಾದ ಕೆಲಸಗಳನ್ನು ಅಭಿವೃದ್ಧಿ ಕಾರ್ಯವನ್ನು ಮಾಡುತ್ತಲೇ ಇದೆ. ರಾಜ್ಯದ ಮಹತ್ವದ ಯೋಜನೆಗಳಿಗೆ ಮಾನ್ಯತಡಯನ್ನು ಸಹ ನೀಡುತ್ತಿದೆ‌. ಅದೇ ರೀತಿ ಹೊಸದೊಂದು ಪರಿಕಲ್ಪನೆಯೂ ಜಾರಿಗೆ ಬರಲಿದ್ದು ಈ ಬಗ್ಗೆ ಸ್ವತಃ ಸಾರಿಗೆ ಸಚಿವರಾದ ರಾಮಲಿಂಗ ರೆಡ್ಡಿ ಅವರು ಈ ಬಗ್ಗೆ ಮಾತಾಡಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಶಕ್ತಿ ಯೋಜನೆ (Shakti Yojana) ಯಶಸ್ವಿಯಾದ ಬಳಿಕ ಒಂದೊಂದೆ ಪರಿಕಲ್ಪನೆಯಲ್ಲಿ ಸರಕಾರ ಬೆಳಕು ಚೆಲ್ಲಿದ್ದು ನಮಗೆಲ್ಲ ಗೊತ್ತಿದ್ದವಿಚಾರ ಆಗಿದೆ. ಈ ಶಕ್ತಿ ಯೋಜನೆಯಿಂದ ಖಾಸಗಿ ಅವರು ತಮಗೆ ದೊಡ್ಡ ನಷ್ಟ ಆಗಿದೆ ಪರಿಹಾರ ನೀಡಿ ಎಂದು ಸರಕಾರಕ್ಕೆ ಮನವಿ ಮಾಡುತ್ತಿದ್ದ ಬೆನ್ನಲ್ಲೆ ಜನ ಸಾಮಾನ್ಯರಿಗೆ ಅನುಕೂಲ ಆಗುವ ಹೊಸ ಆ್ಯಪ್ ಒಂದನ್ನು ಸರಕಾರ ಜಾರಿಗೆ ತರಲು ಮುಂದಾಗಿದೆ.

ಯಾವುದು ಈ ಆ್ಯಪ್:

ಇಂದು ಓಲಾ, ಉಬರ್ (Ola and Ubar) ಆ್ಯಪ್ ಜನರಿಗೆ ಸುಲಭವಾಗಿ ಕ್ಯಾಬ್ ಇತರ ವಾಹನ ಬುಕ್ ಮಾಡಿ ಪ್ರಯಾಣ ಬೆಳೆಸಲು ಸುಲಭವಾದರೂ ಅದರಿಂದ ಜನರಿಗೆ ಕಿರಿ ಕಿರಿ ಸಹ ಆದದ್ದು ಬೆಳಕಿಗೆ ಬಂದಿದೆ. ಈ ಮೂಲಕ ಇಂತಹ ಕಿರಿ ಕಿರಿ ತಪ್ಪಿಸಲು ಸರಕಾರ ವಿನೂತನ ಕ್ರಮ ತೆಗೆದುಕೊಂಡಿದೆ. ಸರಕಾರ ತನ್ನ ಸ್ವಾಧೀನದ ಅಡಿಯಲ್ಲೇ ಒಂದು ಆ್ಯಪ್ ಅನ್ನು ಬಿಡುಗಡೆ ಮಾಡಲು ಮುಂದಾಗಿದ್ದು ಸಾರಿಗೆ ಸಚಿವರು ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿದ್ದಾರೆ.

ರಾಯಚೂರಿನಲ್ಲಿ ಕಲ್ಯಾಣ ರಥ ಸಾರಿಗೆ ಚಾಲನೆ ನೀಡಿದ್ದ ಅವರು ಮಾತಾಡಿದ್ದಾರೆ. ಓಲಾ, ಉಬರ್ ಆ್ಯಪ್ ಮಾದರಿಯಲ್ಲೇ ಹೊಸ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ. ಕಿರಿಕಿರಿ ತಪ್ಪಿಸಲು ಈ ಆ್ಯಪ್ ಸರಕಾರಿ ಮಟ್ಟದಲ್ಲಿ ಕಾರ್ಯನಿರ್ವಹಿಸಲಿದೆ. ಇದರಿಂದ ಎಲ್ಲ ಆಟೋ ಹಾಗೂ ಟ್ಯಾಕ್ಸಿ ಚಾಲಕರಿಗೆ ಸಾಕಷ್ಟು ಉಪಯೋಗ ಆಗುತ್ತದೆ. ಇನ್ನು ನಾಲ್ಕು ತಿಂಗಳ ಒಳಗೆ ಆ್ಯಪ್ ಸಿದ್ಧವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಜನರಿಗೆ ಇದರ ಕಿರಿಕಿರಿ ತಪ್ಪುವ ಜೊತೆಗೆ ಎಲ್ಲ ಖಾಸಗಿ ಕ್ಯಾಬ್ ಹಾಗೂ ಆಟೋ ಚಾಲಕರಿಗೆ ತಮ್ಮ ಗ್ರಾಹಕರ ಸಂಪರ್ಕ ಸಿಗಲು ಈ ವಿನೂತನ ವ್ಯವಸ್ಥೆ ಸಹಕಾರಿಯಾಗಲಿದೆ. ಅಷ್ಟು ಮಾತ್ರವಲ್ಲದೆ ಈ ಹೊಸ ಆ್ಯಪ್ ನಿರ್ವಹಣೆಗೆ ಹೊಸದಾದ ಕೆಲವು ಉದ್ಯೋಗ ಅವಕಾಶ ಕೂಡ ಒದಗಿ ಬರಲಿದೆ.

Also Raed: Shakti Yojana: ಶಕ್ತಿ ಯೋಜನೆಯಿಂದ ಧಾರ್ಮಿಕ ದತ್ತಿ ಇಲಾಖೆಗೆ ಲಾಭ..!

Leave A Reply

Your email address will not be published.