Retirement: ಸರ್ಕಾರಿ ನೌಕರರ ನಿವೃತ್ತಿ ಅವಧಿಯಲ್ಲಿ ದೊಡ್ದ ಬದಲಾವಣೆ; ಏನಿದು ಹೊಸ ರೂಲ್ಸ್!

Advertisement
ಸಾರ್ವಜನಿಕ ಬ್ಯಾಂಕು ವಲಯಗಳಲ್ಲಿ ಕೆಲಸ ಮಾಡುವವರಿಗೆ ಗುಡ್ ನ್ಯೂಸ್ ನೀಡಿದೆ ಸರ್ಕಾರ. ಪಿ ಎಸ್ ಬಿಯಲ್ಲಿ ಕೆಲಸದಲ್ಲಿ ತೊಡಗಿರುವ ಜನರು ಇನ್ನು ಹೆಚ್ಚು ಸಮಯ ಕೆಲಸ ಮಾಡಬಹುದು ಎಂದು ಸರ್ಕಾರ ಗಮನಿಸಿದೆ ಹಾಗಾಗಿ ಎಲ್ಐಸಿ (LIC) ಹಾಗೂ ಎಸ್ ಬಿ ಐ (SBI) ನಂತಹ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ಗಳಲ್ಲಿ ಉನ್ನತ ಅಧಿಕಾರದಲ್ಲಿ ಸೇವೆ ಸಲ್ಲಿಸುತ್ತಿರುವವರು 62 ವರ್ಷಕ್ಕೆ ನಿವೃತ್ತಿ (Retirement) ಹೊಂದುತ್ತಿದ್ದರು. 65 ವರ್ಷಕ್ಕೆ ಮುಂದೂಡಲು ಚಿಂತನೆ ನಡೆಸಲಾಗಿದೆ.
ಹಣಕಾಸು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಈ ವಿಷಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು ಪಿ ಎಸ್ ಬಿ ಗಳಲ್ಲಿ ಅಧಿಕಾರಿಗಳ ಅಧಿಕಾರ ಅವಧಿಯನ್ನು ವಿಸ್ತರಿಸಲು ಸಲಹೆ ನೀಡಲಾಗಿದೆ ಎಂದಿದ್ದಾರೆ. ಎಲ್ಐಸಿ ಹಾಗೂ ಎಸ್ ಬಿ ಐ (SBI) ಅಧ್ಯಕ್ಷರು ನಿವೃತ್ತಿ ವಯಸ್ಸನ್ನು 62 ವರ್ಷದಿಂದ 65ಕ್ಕೆ ಹೆಚ್ಚಿಸುವಂತೆ ಕೋರಲಾಗಿದೆ. ಹಿರಿಯ ಹುದ್ದೆಗಳಲ್ಲಿ ಇರುವ ಅಧಿಕಾರಿಗಳ ನಿವೃತ್ತಿ (Retirement) ವಯಸ್ಸನ್ನು ಹೆಚ್ಚಿಸುವ ಸಾಧ್ಯತೆ ಇದೆ.
ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಮುಖ್ಯಸ್ಥರ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವವರ ನಿವೃತ್ತಿ ವಯಸ್ಸನ್ನು 62ರಿಂದ 65ಕ್ಕೆ ಹೆಚ್ಚಿಸುವ ಸಾಧ್ಯತೆ ಇದೆ. ಅಂದ್ರೆ ಅಧಿಕಾರಿಗಳಿಗೆ ಒಂದರಿಂದ ಎರಡು ವರ್ಷಗಳ ಕಾಲ ಹೆಚ್ಚುವರಿ ಸೇವೆ ನಡೆಸಲು ಅವಕಾಶ ನೀಡಲಾಗುವುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಅಧ್ಯಕ್ಷರ ಅಧಿಕಾರಾವಧಿ ಮುಂದುವರಿಯುತ್ತಾ:
ಈ ನಿಯಮ ಸದ್ಯದಲ್ಲಿಯೇ ಜಾರಿಯಾದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದ ಪ್ರಸ್ತುತ ಅಧ್ಯಕ್ಷರಾಗಿರುವ ದಿನೇಶ್ ಖಾರ ಅವರು ಇನ್ನೂ ಎರಡು ವರ್ಷ ಅಧಿಕಾರ ನಡೆಸಬಹುದು. ಅಂದರೆ ಆಗಸ್ಟ್ 23 ರಲ್ಲಿ ಅವರು 63 ನೇ ವಯಸ್ಸಿಗೆ ಕಾಲಿಡುತ್ತಾರೆ ಹಾಗಾಗಿ ಅವರು ನಿವೃತ್ತಿ (Retirement) ಯನ್ನು ತೆಗೆದುಕೊಳ್ಳಬೇಕು. ಆದರೆ ಈ ಹೊಸ ರೂಲ್ಸ್ ಏನಾದ್ರೂ ಜಾರಿಗೆ ಬಂದರೆ ಅವರು ಎರಡು ವರ್ಷಗಳ ಕಾಲ ತನ್ನ ಕೆಲಸವನ್ನು ವಿಸ್ತರಿಸಿಕೊಂಡು 65 ನೇ ವರ್ಷದವರೆಗೂ ಕೂಡ ಸೇವೆ ಸಲ್ಲಿಸಬಹುದು. ಇನ್ನು ಎಲ್ಐಸಿ ಅಧ್ಯಕ್ಷ ಸಿದ್ಧಾರ್ಥ ಮೋಹಾಂತಿ ಅವರ ಅಧಿಕಾರ ಅವಧಿ ಕೂಡ ಜೂನ್ 29 2024ರಕ್ಕೆ ಮುಗಿಯಲಿದೆ ಇಲ್ಲಿಯೂ ನಿವೃತ್ತಿ (Retirement) ವಯಸ್ಸು ಹೆಚ್ಚಿಸಿದರೆ ಎಲ್ ಐ ಸಿ ಅಧ್ಯಕ್ಷರು ಕೂಡ ಇನ್ನು ಸ್ವಲ್ಪ ಸಮಯ ಮುಂದುವರಿಯಲಿದ್ದಾರೆ.
ಸರ್ಕಾರದ ಈ ನಿರ್ಧಾರಕ್ಕೆ ಕಾರಣ ಏನು:
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿರ್ಧಾರಗಳಲ್ಲಿ ಸ್ಥಿರತೆಯನ್ನು ಕಾಪಾಡುವುದಕ್ಕಾಗಿ ಸರ್ಕಾರ ಈ ರೀತಿ ನಿವೃತ್ತಿ ಅವಧಿಯನ್ನು ವಿಸ್ತರಿಸುವ ಕ್ರಮ ಕೈಗೊಂಡಿದೆ ಎಂದು ಹೇಳಬಹುದು. ಇದರಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಲು ಸುಲಭವಾಗುತ್ತದೆ. ಬಹುಶ: ಎಸ್ ಬಿ ಐ ಅಧ್ಯಕ್ಷ ದಿನೇಶ್ ಖಾರಾ ಅವರಿಗೆ 10 ತಿಂಗಳ ವಿಸ್ತರಣೆ ಸಿಗಬಹುದು. 2021 ರಲ್ಲಿ ಲೈಫ್ ಇನ್ಸೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿಯಮದ ಪ್ರಕಾರ 1960ರ ತಿದ್ದುಪಡಿ ಮಾಡಲಾಗಿತ್ತು. ಬಳಿಕ ಎಲ್ಐಸಿ ಅಧ್ಯಕ್ಷರ ನಿವೃತ್ತಿ (Retirement) ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಲಾಗಿತ್ತು. ಈ ವಯಸ್ಸನ್ನು 65 ವರ್ಷಗಳಿಗೆ ಏರಿಸುವ ಸಾಧ್ಯತೆ ಇದೆ.
Also Read: Govt Job: ಸರ್ಕಾರಿ ಕೆಲಸಕ್ಕೆ ಸೇರಬೇಕು ಎನ್ನುವವರು ಈ ತಪ್ಪು ಮಾಡಲೇ ಬೇಡಿ..!