Marriage: ಮದುವೆ ವಿಷಯದಲ್ಲಿ ಐತಿಹಾಸಿಕ ತೀರ್ಪು ಕೊಟ್ಟ ಕೋರ್ಟ್! ಬೆಳಿಗ್ಗೆ 7 ಗಂಟೆಗೆ ಆದೇಶ
ಸಾಮಾನ್ಯವಾಗಿ 18 ವರ್ಷ ಕಳೆದ ಗಂಡು, ಹೆಣ್ಣು ತಮಗೆ ಇಚ್ಛೆಯ ಅನುಸಾರವಾಗಿ ವಿವಾಹ (Marriage) ಆಗಬಹುದು ಆದರೆ ಆ ವಿವಾಹ ಮಾನ್ಯ ಎನಿಸಿಕೊಳ್ಳುವುದು ಕಾನೂನಿನ ಪ್ರಕಾರ ರಿಜಿಸ್ಟರ್ ಆದಾಗ ಮಾತ್ರ. ಹಾಗಾಗಿ ಮನೆಯವರ ಸಮ್ಮುಖದಲ್ಲಿ ಮದುವೆಯಾಗಲು ಸಾಧ್ಯವಾಗದೇ ಇದ್ದಲ್ಲಿ ಸಾಕಷ್ಟು ಜನ ಕಾನೂನಾತ್ಮಕವಾಗಿ ರಿಜಿಸ್ಟರ್ ಮ್ಯಾರೇಜ್ ಆಗುತ್ತಾರೆ. ಇದಕ್ಕೆ ನೀವು ರಿಜಿಸ್ಟರ್ ಕಚೇರಿಗೆ ಹೋಗಿ ನೋಂದಣಿ ಮಾಡಿಸಿಕೊಂಡು ವಿವಾಹ ಮಾಡಿಕೊಳ್ಳಬೇಕಾಗುತ್ತದೆ.
ಈಗ ಸುಪ್ರೀಂ ಕೋರ್ಟ್ (Supreme Court) ಮತ್ತೊಂದು ಪ್ರತಿಪಾದನೆ ಮಾಡಿದ್ದು ಹಿಂದೂ ವಿವಾಹ (Marriage) ಕಾಯ್ದೆಯ ಅಡಿಯಲ್ಲಿ ವಕೀಲರ ಕೊಠಡಿಯಲ್ಲಿ ಯಾವುದೇ ಗಂಡು ಹೆಣ್ಣು ಹಾರ ಬದಲಾಯಿಸಿಕೊಂಡು ಅಥವಾ ಉಂಗುರ ತೊಡಿಸಿಕೊಳ್ಳುವುದರ ಮೂಲಕ ಪರಸ್ಪರ ಒಪ್ಪಿಗೆಯಿಂದ ಮದುವೆ ಆಗಲು ನಿರ್ಧರಿಸಿದರೆ ಅದು ಕಾನೂನಾತ್ಮಕವಾಗಿ ಮಾನ್ಯ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ಹೌದು ಅಪರಿಚಿತರ ಸಮ್ಮುಖದಲ್ಲಿ ರಹಸ್ಯವಾಗಿ ವಿವಾಹ ಮಾಡಿದರೆ ಅದು ಮಾನ್ಯ ಎನಿಸಿಕೊಳ್ಳುವುದಿಲ್ಲ ಹಿಂದೂ ವಿವಾಹ (Marriage) ಕಾಯ್ದೆ ಸೆಕ್ಷನ್ 7 ಮತ್ತು 7(ಎ) ಅಡಿಯಲ್ಲಿ ಇದು ಕಾನೂನು ಬದ್ಧ ಮದುವೆ ಎಂದು ಹೇಳಲು ಸಾಧ್ಯವಿಲ್ಲ ಎಂಬುದಾಗಿ ಮದ್ರಾಸ್ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ವಜಾ ಗೊಳಿಸಿದೆ.
ಯಾಕಂದ್ರೆ ಒಂದು ಪ್ರಕರಣದ ಅರ್ಜಿ ಸಲ್ಲಿಕೆಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರವೀಂದ್ರ ಭಟ್ ಹಾಗೂ ಅರವಿಂದ ಕುಮಾರ್ ಅವರ ವಿಭಾಗೀಯ ನ್ಯಾಯ ಪೀಠ, ಯಾವುದೇ ಗಂಡು-ಹೆಣ್ಣು ವಕೀಲರು ಸಮ್ಮುಖದಲ್ಲಿ ಮದುವೆ ಆದರೆ ಅದು ಕಾನೂನು ಬದ್ಧ ಎಂದು ಘೋಷಣೆ ಮಾಡಿದ್ದಾರೆ. “ನ್ಯಾಯಾಲಯದಲ್ಲಿ ಕೆಲಸ ನಿರ್ವಹಿಸುವುದು ಮಾತ್ರ ವಕೀಲರ ಸಾಮರ್ಥ್ಯ ಅಲ್ಲ ಅವರ ಸಾಮರ್ಥ್ಯ ಇಷ್ಟಕ್ಕೆ ಸೀಮಿತಗೊಂಡಲ ಸ್ನೇಹಿತ ಸಂಬಂಧಿಕರು ಅಥವಾ ಸಾಮಾಜಿಕ ಕಾರ್ಯಕರ್ತನ ಸ್ಥಾನದಲ್ಲಿ ನಿಂತುಕೊಂಡು ಮದುವೆಯನ್ನು ಮಾಡಿಸಬಹುದು” ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 7 (ಎ) ಅಡಿಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದು ತಮಿಳುನಾಡು ಸರ್ಕಾರದ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ಬರುತ್ತದೆ.
ಯಾವುದೇ ಪ್ರೇಮಿಗಳು ತಾವು ಮದುವೆ ಆಗಲು ಇಚ್ಛಿಸಿದರೆ, ಮನೆಯವರ ಒಪ್ಪಿಗೆ ಇಲ್ಲದಿದ್ದರೂ ಒಬ್ಬ ವಕೀಲರ ಸಮ್ಮುಖದಲ್ಲಿ ಮದುವೆ ಆಗಬಹುದು. ಶಾಸ್ತ್ರೋಕ್ತವಾಗಿ ಸಂಪ್ರದಾಯ ಬದ್ಧವಾಗಿ ಸಂಬಂಧಿಕರು, ಸ್ನೇಹಿತರು ಹಾಗೂ ಸಾಮಾನ್ಯರ ಸಮ್ಮುಖದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ನಡೆದರೆ ಅದನ್ನು ಸೆಕ್ಷನ್ 7 (ಎ) ಅಡಿಯಲ್ಲಿ ಮಾನ್ಯ ಮಾಡಲಾಗುತ್ತದೆ. ಒಂದು ಮದುವೆ ಅಂದರೆ ಅದು ಬಹಳ ದೊಡ್ಡ ವಿಷಯ ಎಲ್ಲರ ಸಮ್ಮುಖದಲ್ಲಿ ಅರ್ಚಕರ ಉಪಸ್ಥಿತಿಯಲ್ಲಿ ಮಂತ್ರ ಕೋಶಗಳ ನಡುವಿನಲ್ಲಿ ಮದುವೆ ಆದರೆ ಆ ವಿವಾಹ ಸಂಬಂಧಕ್ಕೆ ಹೆಚ್ಚು ತೂಕ ಇರುತ್ತದೆ. ಆದರೆ ಎಲ್ಲರೂ ಜೀವನದಲ್ಲಿಯೂ ಇದು ಸಾಧ್ಯವಿಲ್ಲ ಕೆಲವೊಮ್ಮೆ ಕೆಲವರ ಮನೆಯಲ್ಲಿ ಮದುವೆಗೆ ಒಪ್ಪದೇ ಇದ್ದಾಗ ಪ್ರೇಮಿಗಳು ಅರ್ಚಕರ ಅನುಪಸ್ಥಿತಿಯಲ್ಲಿಯೂ ಕೂಡ ವಿವಾಹ ಬೇಕಾಗುತ್ತದೆ. ಇಂತಹ ವಿವಾಹವನ್ನು ಕೂಡ ಕಾನೂನಿನ ಪ್ರಕಾರ ಮುನ್ನಡೆ ನೀಡುವುದಕ್ಕೆ ಈ ಸೆಕ್ಷನ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ನ್ಯಾಯಪೀಠ ತಿಳಿಸಿದೆ.