ನಗರ ಪ್ರದೇಶಗಳಲ್ಲಿ ಕೆಲಸಕ್ಕಾಗಿ ಅಥವಾ ವಿದ್ಯಾಭ್ಯಾಸಕ್ಕಾಗಿ ಬೇರೆ ಸ್ಥಳಗಳಿಂದ ಬಂದು ಉಳಿದುಕೊಂಡರೆ ಬಾಡಿಗೆ ಮನೆಯಲ್ಲಿ ವಾಸಿಸುವುದು ಸಾಮಾನ್ಯ. ಒಂದೊಂದು ಬಾಡಿಗೆ ಮನೆ (Rented House) ಯ ದರ ಒಂದೊಂದು ರೀತಿಯಲ್ಲಿ ಇರುತ್ತದೆ ಆದರೆ ಕೆಲವು ಬಾಡಿಗೆ ಮನೆಗಳು ಅತಿ ದುಬಾರಿಯೂ ಆಗಿದ್ದು ಕೆಲವರಿಗೆ ಪ್ರತಿ ತಿಂಗಳ ಹಣ ಪಾವತಿ ಮಾಡುವುದಕ್ಕೂ ಕಷ್ಟವಾಗುತ್ತದೆ ಅಂತದ್ರಲ್ಲಿ ಪ್ರತಿ ವರ್ಷ 5 ರಿಂದ 10% ವರೆಗೆ ಬಾಡಿಗೆ ಹೆಚ್ಚಿಸಲಾಗುತ್ತದೆ ಇದರಿಂದ ಬಾಡಿಗೆದಾರರಿಗೆ ಸಾಕಷ್ಟು ಹೊರೆ ಕೂಡ ಆಗುತ್ತದೆ. ಹೊಸ ರೂಲ್ಸ್ ಒಂದನ್ನು ಸರ್ಕಾರ ಶಿಫಾರಸು ಮಾಡಿದೆ.
ದೇಶಾದ್ಯಂತ ಮೂರು ವರ್ಷಗಳ ಮನೆ ಮಾಲೀಕರು ಬಾಡಿಗೆಯನ್ನು ಏರಿಸುವಂತಿಲ್ಲ ಎಂದು ಸರ್ಕಾರ ಶಿಫಾರಸು ಮಾಡಿದ ಆದರೆ ಇದು ನಮ್ಮ ದೇಶದಲ್ಲಿ ಅಲ್ಲ ಜರ್ಮನಿಯಲ್ಲಿ ಬಾಡಿಗೆ ಮನೆಗಳ ಬೆಲೆ ವಿಪರೀತ ಜಾಸ್ತಿ ಆಗುತ್ತಿರುವ ಹಿನ್ನೆಲೆಯಲ್ಲಿ ಜರ್ಮನಿಯ ಆಡಳಿತಾರೂಢ ಸೋಶಿಯಲ್ ಡೆಮಾಕ್ರೆಟಿಕ್ ಪಕ್ಷ ಇನ್ನು ಮೂರು ವರ್ಷಗಳ ಕಾಲ ಮನೆ ಮಾಲೀಕರು ಬಾಡಿಗೆದಾರವನ್ನು ಹೆಚ್ಚಿಸುವ ಹಾಗಿಲ್ಲ ಎಂದು ಹೇಳಿದೆ.
ಯುರೋಪ್ನ ಶಕ್ತಿಶಾಲಿ ರಾಷ್ಟ್ರ ಎನಿಸಿಕೊಂಡಿರುವ ಜರ್ಮನಿಯಲ್ಲಿ ವಸತಿ ವೆಚ್ಚ ಅಧಿಕವಾಗಿದ್ದು ಜನರಿಗೆ ನಿಭಾಯಿಸಲು ಕೂಡ ಕಷ್ಟವಾಗುತ್ತಿದೆ. ಹಾಗಾಗಿ ಮುಂದಿನ ಮೂರು ವರ್ಷಗಳ ಕಾಲ ರೆಂಟ್ (Rented House) ಫ್ರಿಸ್ ಮಾಡಬೇಕು ಎಂದು ನಾವು ಪ್ರಸ್ತಾಪಿಸುತ್ತಿವೆ ಎಂಬುದಾಗಿ ಡೆಮಾಕ್ರೆಟಿಕ್ ಪಕ್ಷ ತಿಳಿಸಿದೆ. ಈ ಬಗ್ಗೆ ಮಾತನಾಡಿರುವ ಹಿರಿಯ ಎಸ್ ಪಿ ಡಿ ಶಾಸಕ ವೇರೆನಾ ಮಾತನಾಡಿ, ದೇಶದ ಜನರ ಜೀವನದಲ್ಲಿ ಉಂಟಾಗುತ್ತಿರುವ ಆರ್ಥಿಕ ಬಿಕಟನೋ ನಿಭಾಯಿಸಲು ಈ ಕ್ರಮ ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾಖಲೆ ಮಟ್ಟದಲ್ಲಿ ಜಾಸ್ತಿಯಾಗಿರುವ ಬಾಡಿಗೆ ದರ
ಜರ್ಮನ್ ನಲ್ಲಿ ಈ ಹಿಂದೆ ಒಂದು ಕುಟುಂಬ ಜೀವನಪೂರ್ತಿ ಬಾಡಿಗೆ ಮನೆ (Rented House) ಯಲ್ಲಿಯೇ ವಾಸಿಸುವುದು ಕೂಡ ಅವರಿಗೆ ಆರ್ಥಿಕವಾಗಿ ಸಮಸ್ಯೆ ಆಗುತ್ತಿರಲಿಲ್ಲ ಯಾಕೆಂದರೆ ಜರ್ಮನ್ ನಲ್ಲಿ ವಾಸಿಸುವ 41 ಮಿಲಿಯನ್ ಕುಟುಂಬಗಳಲ್ಲಿ ಸುಮಾರು ಶೇಕಡ 60% ಜನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು ಬಾಡಿಗೆ ಮನೆಗೆ ಪಾವತಿಸುವ ದರ 6.2 ಶೇಕಡ ಯುರೋಜೋನ್ ಏರಿಕೆಯಾಗಿದೆ. ಇದನ್ನು ನಿಯಂತ್ರಣ ಮಾಡದೇ ಇದ್ದಲ್ಲಿ ಮುಂದಿನ ಮೂರು ವರ್ಷಗಳಲ್ಲಿ 20 ರಷ್ಟು ಜಾಸ್ತಿ ಆಗಬಹುದು. ಹಾಗಾಗಿ ಜರ್ಮನಿಯ ಸಮ್ಮಿಶ್ರ ಸರ್ಕಾರ ಈ ಮಿತಿಯನ್ನು 11% ಗೆ ಇಳಿಸಲು ನಿರ್ಧರಿಸಿದ್ದರೂ ಇದರಿಂದ ಜನರ ಜೀವನ ಸುಧಾರಿಸಲು ಸಾಧ್ಯವಿಲ್ಲ ಎಂಬುದು ಹಲವರ ವಾದ.
ವರದಿಯ ಪ್ರಕಾರ ಬರ್ಲಿನ್ ಮತ್ತು ಲಿಪ್ಜಿಗ್ ನಗರಗಳಲ್ಲಿ ಬಾಡಿಗೆ (Rented House) ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿದೆ ಕಳೆದ ವರ್ಷ ಸರಾಸರಿ ಬಾಡಿಗೆ ತರ 18% ನಷ್ಟು ಏರಿಕೆಯಾಗಿದೆ. ಆದರೆ ಇನ್ನು ಮುಂದೆ ನಿಯಮ ಬಾಹಿರವಾಗಿ ಬಾಡಿಗೆ ದರ ಏರಿಸಿದರೆ, ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಸರ್ಕಾರ ತಿಳಿಸಿದೆ. ಉಕ್ರೇನ್ ಜೊತೆಗಿನ ಯುದ್ಧದ ಕಾರಣ ಜರ್ಮನಿಯಲ್ಲಿ ಹೌಸಿಂಗ್ ಮಾರ್ಕೆಟ್ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸುತ್ತಿದೆ ಆಹಾರ ಹಾಗೂ ಇಂಧನದಲ್ಲಿ ಹಣ ದುಬ್ಬರ ಕೂಡ ಏರಿಕೆಯಾಗಿದೆ. ಇದರ ಜೊತೆಗೆ ಕ್ರೀಮ್ ನಿಂದ ಒಂದು ಮಿಲಿಯನ್ ಅಷ್ಟು ನಿರಾಶ್ರಿತರು ಜರ್ಮನಿಗೆ ವಾಪಸ್ ಆಗಿರುವುದರಿಂದ ವಸತಿಗೆ ಅಗ್ಗದ ಫ್ಲ್ಯಾಟ್ಗಳು ಸಿಗುತ್ತಿಲ್ಲ. ಹಾಗಾಗಿ ವಸತಿ ಕಟ್ಟಡ ಹೆಚ್ಚು ದುಬಾರಿಯಾಗಿದೆ. ಈ ವರ್ಷದ ಅಧ್ಯಯನದ ಪ್ರಕಾರ ಜರ್ಮನ್ ನಲ್ಲಿ ಏಳು ಲಕ್ಷ ಫ್ಲ್ಯಾಟ್ ಗಳ ಕೊರತೆ ಕಂಡು ಬಂದಿದೆ. ಇದರಿಂದಾಗಿ ಇರುವ ಫ್ಲ್ಯಾಟ್ಗಳಲ್ಲಿ ವಾಸಿಸಲು ಅತಿ ಹೆಚ್ಚು ಹಣವನ್ನು ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.