Govt Notification: ಸೆಪ್ಟೆಂಬರ್ ತಿಂಗಳಿನಲ್ಲಿ ಎಲ್ಲರೂ ಈ 7 ಕೆಲಸ ಮಾಡಲೇಬೇಕು!

Advertisement
2000 ಮುಖ ಬೆಲೆಯ ನೋಟು ಬಳಕೆ ಮರು ನೀಡಲು ಇಂತಿಷ್ಟು ಕಾಲ ಎಂದು ಈ ಹಿಂದೆ ನೀಡಿದ್ದರೂ ಆ ಪ್ರಕಾರ ಸೆಪ್ಟೆಂಬರ್ (September) ತಿಂಗಳಿನಂದು ಆ ಗಡುವು ಎಲ್ಲರಿಗೂ ಸಹ ಅನ್ವಯವಾಗಲಿದೆ ಇದರ ಹೊರತು ಸಹ ಅನೇಕ ಆರ್ಥಿಕ ವ್ಯವಸ್ಥೆ ಸೆಪ್ಟೆಂಬರ್ ತಿಂಗಳಿನಂದು ಕೆಲ ಅಂಶ ಬದಲಾಗಲಿದೆ. ಹಾಗಾದರೆ ಯವೆಲ್ಲ ವಿಚಾರ ಗಮನಿಸಿ ವ್ಯವಹರಿಸಬೇಕೆಂದು ಈ ಲೇಖನದ ಮುಂದೆ ತಿಳಿಸಿದ್ದೇವೆ.
ಸರಕಾರ ಹಾಗೂ ಅದರ ಕ್ರಮಗಳು ಕಾಲ ಕಾಲಕ್ಕೆ ಬದಲಾಗುತ್ತಿದ್ದು ಕೆಲ ಹೊಸ ನಿಯಮ ಅನುಷ್ಠಾನ ಹಾಗೂ ಇದ್ದ ಹಳೆ ನಿಯಮಕ್ಕೆ ಹೊಂದಿಕೊಳ್ಳಲು ಕೆಲ ಅವಧಿ ಸಹ ನೀಡುತ್ತಾರೆ. ಸೆಪ್ಟೆಂಬರ್ ತಿಂಗಳಿನಲ್ಲಿ ಏನೆಲ್ಲ ಸಂಗತಿ ನೆನಪಿಡಬೇಕು ಎಂಬುದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.
- ಸಣ್ಣ ಉಳಿತಾಯ ಯೋಜನೆಗೆ ಆಧಾರ್ ಕಾರ್ಡ್ ಸಲ್ಲಿಕೆ ಕಡ್ಡಾಯವಾಗಿದೆ.PPF, ಸುಕನ್ಯಾ ಸಮೃದ್ಧಿ ಯೋಜನೆ (Sukanya Samrudhi Yojana), ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗೆ ಇದ್ದವರು EKYC ನವೀಕರಣಕ್ಕೆ ಆಧಾರ್ ಸಲ್ಲಿಕೆ ಕಡ್ಡಾಯ ಮಾಡಿದ್ದು ಸೆಪ್ಟೆಂಬರ್ 30ರ ಒಳಗೆ ಮಾಡಬೇಕು. ಮಾಡದಿದ್ದಲ್ಲಿ ಅಕ್ಟೋಬರ್ ಒಂದರಿಂದ ಖಾತೆ ಸ್ಥಗಿತವಾಗಲಿದೆ.
- ಭಾರತೀಯ ವಿಶೀಷ್ಟ ಗುರುತಿನ ಪ್ರಾಧಿಕಾರವು ಆಧಾರ್ ನವೀಕರಣ ತಿದ್ದುಪಡಿ ಮಾಡಲು ಉಚಿತ ಅವಕಾಶ ನೀಡಿದ್ದು ಸೆಪ್ಟೆಂಬರ್ 14 ರವರೆಗೆ ಗಡುವು ವಿಸ್ತರಿಸಲಾಗಿದೆ.
- ಎರಡು ಸಾವಿರ ನೋಟು ವಿನಿಮಯ ಮಾಡಿಕೊಳ್ಳಲು ಸರಕಾರ ಈ ಹಿಂದೆ ಅವಧಿ ನಿಗಧಿ ಮಾಡಿತ್ತು. ಮೇ19ರಿಂದ ಚಲಾವಣೆಯಲ್ಲಿ ಇದ್ದ ನೋಟುಗಳನ್ನು ಹಿಂಪಡೆಯುವುದಾಗಿ RBI ತಿಳಿಸಿತ್ತು. ಸುಮಾರು ನಾಲ್ಕು ತಿಂಗಳವರೆಗೂ ಬ್ಯಾಂಕಿನಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ನೀಡಿದ್ದು ಸೆಪ್ಟೆಂಬರ್ 30ರ ಒಳಗೆ ಹಣ ವಿನಿಮಯ ಮಾಡಿಕೊಳ್ಳದಿದ್ದರೆ ಸಮಸ್ಯೆ ಇರುವುದಂತು ಪಕ್ಕವಾಗಿದೆ.
- ಆ್ಯಕ್ಸಿಸ್ ಬ್ಯಾಂಕಿನ ವಾರ್ಷಿಕ ಶುಲ್ಕ 10ಸಾವಿರ ಶುಲ್ಕ ಹಾಗೂ ಜಿಎಸ್ಟಿ ಯಿಂದ 12,500 ಸೆಪ್ಟೆಂಬರ್ ಒಂದರಿಂದ ಆನ್ ಬೋರ್ಡ್ ಮಾಡಿದ್ದ ಗ್ರಾಹಕರಿಂದ ನವೀಕರಿಸಲಾಗುವುದು ಎಂದು ಮಾಹಿತಿ ನೀಡಿದೆ. ಈ ಮೂಲಕ ಹತ್ತು ಸಾವಿರದ ವಾರ್ಷಿಕ ಓಚರ್ ಪ್ರಯೋಜನ ಸ್ಥಗಿತಗೊಳಿಸಲಾಗಿದೆ. ಸೆಪ್ಟೆಂಬರ್ ಒಂದರಿಂದ ಈ ಸೇವೆ ಇರಲಾರದು.
- IDBI ಬ್ಯಾಂಕಿನಲ್ಲಿ ಅಮೃತ್ ಮಹೋತ್ಸವದ ದಂದು ಮಾನ್ಯತೆ ಮಾಡಿದ್ದ ಅವಧಿ ವಿಸ್ತರಿಸಲಾಗಿದೆ. ಇದರಲ್ಲಿ 7.10%ದಿಂದ 7.65ರ ವರೆಗೆ ಬಡ್ಡಿದರ ನೀಡಲಾಗುತ್ತದೆ. ಈ ಮೂಲಕ ಅಮೃತ್ ಮಹೋತ್ಸವ FD ಅನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗುವುದು.
- ಸೆಕ್ಯೂರಿಟಿ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ (security and exchange board of India) ಇಂಡಿಯಾ ಮಾರ್ಚ್ ಅಸ್ತಿತ್ವದಲ್ಲಿರುವ ಅರ್ಹ ವ್ಯಾಪಾರ ಮತ್ತು ಡಿಮ್ಯಾಟ್ ಖಾತೆದಾರರಿಗೆ ತಮ್ಮ ಖಾತೆಯನಾಮನಿರ್ದೇಶನ ಮಾಡಲು ಕೊನೆ ದಿನ ಸೆಪ್ಟೆಂಬರ್ 30ಕೊನೆ ದಿನವಾಗಿದೆ.
- SBI ತಮ್ಮ ನಿಶ್ಚಿತ ಠೇವಣಿ ಯೋಜನೆಯ ಗಡುವು ವಿಸ್ತರಿಸಿದೆ. SBI we care ಮೂಲಕ ಹಿರಿಯ ನಾಗರಿಕರಿಗೆ 5ರಿಂದ 10ವರ್ಷಗಳ ವರೆಗಿನ ಠೇವಣಿ ಮೇಲೆ ಹೆಚ್ಚಿನ ಬಡ್ಡಿದರ ವಿಧಿಸಲಾಗುವುದು. ಇದು ಅವರಿಗೆ ಲಾಭವಾಗಲಿದೆ. ಈ ಯೋಜನೆ ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ.
ಸೆಪ್ಟೆಂಬರ್ ತಿಂಗಳಿನಂದು ಈ ಎಲ್ಲ ಪ್ರಕ್ರಿಯೆಯ ಬಗ್ಗೆ ಜನಸಾಮಾನ್ಯರು ಗಮನಿಸಬೇಕಿದ್ದು ಎಲ್ಲ ವಿಚಾರದಲ್ಲಿ ತಿರಸ್ಕಾರ ಮನೋಭಾವನೆ ತೊರೆದು ಮೊದಲೇ ಯೋಜನೆ ರೂಪಿಸುವುದು ಉತ್ತಮ.