ಕಾಂಗ್ರೆಸ್ (Congress) ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲು ಸಿದ್ದತೆ ಜೊರಾಗಿಯೇ ನಡೆಯುತ್ತಿದೆ, ಈ ಮೂಲಕ ಮಹಿಳೆಯರು ಬಹಳಷ್ಟು ಖುಷಿ ಯಲ್ಲಿದ್ದಾರೆ, ಮಹಿಳೆಯರ ಸಬಲೀಕರಣದ ದೃಷ್ಟಿಯಿಂದ ಮಹಿಳೆ ಪರವಾದ ಯೋಜನೆಗಳನ್ನು ಸರ್ಕಾರ ಜಾರಿಗೆ ತಂದಿದೆ, ಈ ಮೂಲಕ ಈ ಯೋಜನೆಯನ್ನು , ಪ್ರತಿಯೊಬ್ಬರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ, ನಾಳೆ ಯಷ್ಟೆ ಈ ಯೋಜನೆ ಗೆ ಚಾಲನೆ ಸಿಗಲಿದ್ದು, ಗೃಹಲಕ್ಷ್ಮೀ (Gruha Lakshmi) ಯೋಜನೆಗೆ ಇದುವರೆಗೆ ಶೇ. 86 ರಷ್ಟು ಫಲಾನುಭವಿಗಳು ನೋಂದಣಿಯಾಗಿದ್ದಾರೆ, ಇನ್ನು ಕೂಡ ಮಹಿಳೆ ಯರು ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ
ಏಕ ಕಾಲಕ್ಕೆ ಚಾಲನೆ:
ರಾಜ್ಯಾದ್ಯಂತ ಏಕಕಾಲಕ್ಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಆನ್‌ಲೈನ್ (Online) ಮೂಲಕ ನೋಡಲು ಅವಕಾಶ ಕೂಡ ಇದೆ, ಮೈಸೂರು, ಮಂಡ್ಯ, ಹೀಗೆ ಹಲವಾರು ಜಿಲ್ಲೆಗಳ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ, ಈ ಮೂಲಕ ಮಹಿಳೆಯರ ಖಾತೆಗೆ ಹಣ ಜಮೆ ಯಾಗಲಿದೆ.
ಎಷ್ಟು ಮಹಿಳೆಯರಿಗೆ:
ಸುಮಾರು , 1.10 ಕೋಟಿ ಮಹಿಳೆಯರ ಖಾತೆಗೆ 2,000 ರೂ. ಹಣ ಜಮಾ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ, ಕಾರ್ಯ ಕ್ರಮಕ್ಕೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಭಾಗಿಯಾಗಲಿದ್ದಾರೆ.
ಕಡ್ಡಾಯ ಆಗಿರಬೇಕು:
ಈ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ (Aadhaar Card Number) ಮತ್ತು ಬ್ಯಾಂಕ್ ಖಾತೆಯ ಪಾಸ್ ಬುಕ್ (Bank Pass Book) ಮಾಹಿತಿ ನೀಡಬೇಕು. ಇದರ ಅಪ್ ಡೇಟ್ ಕೂಡ ಆಗಲಿದ್ದು, ಇಕೆವೈಸಿ ಮಾಡುವುದು ಕೂಡ ಕಡ್ಡಾಯ ವಾಗಿದೆ, ಈ ಯೋಜನೆಗೆ ಅರ್ಜಿ ಸಲ್ಲಿಸಲು ಇನ್ನು ಕೂಡ ಅವಕಾಶ ಇದ್ದು ಮುಂದೆ ಯು ಅರ್ಜಿ ಸಲ್ಲಿಸ ಬಹುದಾಗಿದೆ
ನಾಳೆಯಿಂದಲೇ ಹಣ:
ಹೌದು ಈ ಯೋಜನೆಗೆ ಆಗಸ್ಟ್ 30 ರಂದು ಚಾಲನೆ ಸಿಗಲಿದ್ದು, ಫಲಾನುಭವಿಗಳ ಮೊಬೈಲ್ ನಂಬರ್‌ಗೆ ಮಾಹಿತಿ ಬರಲಿದ್ದು, ನಾಳೆ ಯಿಂದಲೇ ಗೃಹಲಕ್ಷ್ಮಿ (Gruha Lakshmi) ಹಣ ವರ್ಗಾವಣೆ ಆಗಲಿದೆ, ಒಂದು ವೇಳೆ ಸರ್ವರ್ ಸಮಸ್ಯೆ ಬಂದರೆ ಕೆಲವೇ ದಿನದಲ್ಲಿ ಮನೆಯ ಯಜಮಾನಿ ಖಾತೆಗೆ ಹಣ ವರ್ಗಾವಣೆಯಾಗುತ್ತದೆ.