Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗ್ರಹಲಕ್ಹ್ಮಿ ಯೋಜನೆಯ ಹಣ ಹಾಕುವ ಮುನ್ನವೇ ಹೊಸ ವರದಿ ಕೊಟ್ಟ ಸರ್ಕಾರ

Advertisement

ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಕಾಂಗ್ರೆಸ್ (Congress government) ಸರಕಾರ ಹಲವಾರು ಮಹತ್ವದ ಯೋಜನೆ ಘೋಷಣೆ ಮಾಡಿತ್ತು. ಐದು ಗ್ಯಾರೆಂಟಿ ಯೋಜನೆಯ ಬಗ್ಗೆಯೂ ಪ್ರಸ್ತಾವಿಸಿತ್ತು ಆಗೆಲ್ಲ ಬಿಜೆಪಿ ಸರಕಾರವು ಕಾಂಗ್ರೆಸ್ ನಿಲುವನ್ನು ಕಟುವಾಗು ಟೀಕಿಸಿತ್ತು ಆದರೆ ಈಗ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕಾರಣ ಚುನಾವಣಾ ಪೂರ್ವ ಘೋಷಣೆ ಜಾರಿ ಮಾಡುವಂತೆ ತಿಳಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಸರಕಾರ ಕೂಡ ಹಿಂದೆ ಬೀಳದೇ ಒಂದೊಂದೆ ಯೋಜನೆಗೆ ಮಾನ್ಯತೆ ನೀಡುತ್ತಿದೆ.

ಶಕ್ತಿ ಯೋಜನೆ ರಾಜ್ಯದಲ್ಲಿ ಯಶಸ್ವಿ ಆಗಿದ್ದು ಅನ್ನಭಾಗ್ಯ , ಗೃಹಜ್ಯೋತಿ ಗೂ ಉತ್ತಮ ಸ್ಪಂದನೆ ಸಿಕ್ಕಿದೆ. ಬಳಿಕ ಡಿಸೆಂಬರ್ ಅವಧಿಯಲ್ಲಿ ಯುವನಿಧಿ ಬರಲಿದೆ ಆದರೆ ಅದಕ್ಕೂ ಮೊದಲೇ ಗೃಹಲಕ್ಷ್ಮೀ (Gruha Lakshmi Yojana) ಬರಲು ಸಕಲ ಸಿದ್ಧತೆ ನಡೆಸುತ್ತಿದೆ. ಗೃಹಲಕ್ಷ್ಮೀ ಯೋಜನೆಗೆ ಈಗಾಗಲೇ ಎಲ್ಲೆಡೆ ಉತ್ತಮ ಸಿದ್ಧತೆ ನಡೆಸಲಾಗುತ್ತಿದೆ. ಹಾಗಾಗಿ ಮೈಸೂರಲ್ಲಿ ಈ ಸಂಬಂಧಿತ ಉದ್ಘಾಟನೆ ಕಾರ್ಯಕ್ರಮ ಸಹ ನೆರವೇರಲಿದೆ.

ಸಿಎಂ ಮಹತ್ವದ ತೀರ್ಮಾನ:

ಗೃಹಲಕ್ಷ್ಮೀ ಯೋಜನೆಯ ಬಗ್ಗೆ ಮಾಧ್ಯಮದ ಮುಂದೆ ಮಾತಾಡಿದ್ದ ಸಿಎಂ ಸಿದ್ದರಾಮಯ್ಯ (CM Sidharamaiya) ಅವರು ಈ ಬಗ್ಗೆ ಒಂದು ಸ್ಪಷ್ಟನೆ ನೀಡಿದ್ದಾರೆ‌. ನಮ್ಮ ಆಡಳಿತ ಸರಕಾರ ಬಂದು ನೂರು ವರ್ಷ ಪೂರೈಕೆಯಾಗಿದೆ. ಇದು ದೇಶದ ಇತಿಹಾಸದಲ್ಲೇ ಮಹತ್ವದ ಯೋಜನೆಯಾಗಲಿದೆ. ವರ್ಷಕ್ಕೆ 32 ಸಾವಿರ ಕೋಟಿ ರೂಪಾಯಿ ಹಣ ಖರ್ಚು ಆಗಲಿದೆ. ಇದು ದೊಡ್ಡ ಮೊತ್ತದ ಹಣ ಆದರೂ ಜನರಿಗೆ ಇದರ ಪ್ರಯೋಜನ ಸಾಕಷ್ಟು ಸಿಗಲಿದೆ. ಗ್ಯಾರೆಂಟಿ ಯೋಜನೆಗೆ ಜಾರಿ ತರಲು ಸರಕಾರ ಎಂದಿಗೂ ಬದ್ಧವಾಗಿದೆ ನಾವು ನುಡಿದಂತೆ ನಡೆಯುವೆವು ಎಂದಿದ್ದಾರೆ.

ಪ್ರತೀ ಕುಟುಂಬಕ್ಕೂ ಮಹಿಳೆ ಆಧಾರ ಸ್ಥಂಭ ವಾಗಿದ್ದು ಆರ್ಥಿಕ ಸ್ವಾವಲಂಬನೆ ನೀಡಲು ಸರಕಾರ ಈ ಎರಡು ಸಾವಿರ ಮೊತ್ತ ನೀಡಲು ತೀರ್ಮಾನಿಸಿತ್ತು. ಹೀಗಾಗಿ ಗೃಹಲಕ್ಷ್ಮೀ ಯೋಜನೆ ಜಾರಿಗೆ ಅದ್ಧೂರಿ ಕಾರ್ಯಕ್ರಮ ಸಹ ನಡೆಯಲಿದೆ. 1.50ಲಕ್ಷ ಜನ ಈ ಸಭಾ ಕಾರ್ಯಕ್ರಮದಲ್ಲಿ ಸೇರುವ ಸಾಧ್ಯತೆ ಇದೆ. ರಾಜ್ಯದಲ್ಲಿ 13ಸಾವಿರ ಕಡೆ ಯೋಜನೆ ಒಂದೆ ದಿನಕ್ಕೆ ಕಾರ್ಯಕ್ರಮ ಆಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ‌. ಸದ್ಯ ಕಾಂಗ್ರೆಸ್ ಸರಕಾರದ ಇನ್ನೊಂದು ಮಹತ್ವದ ಯೋಜನೆ ಜಾರಿಗೆ ಬರುವ ಜೊತೆಗೆ ಹಲವಾರು ಅಭಿವೃದ್ಧಿ ಕಡೆಗೂ ಮಾನ್ಯತೆ ನೀಡುವುದು ತಿಳಿದು ಬಂದಿದೆ. ಹಾಗಾಗಿ ಸರಕಾರ ಜನಪರ ಕಾರ್ಯಕ್ರಮಕ್ಕೆ ಒತ್ತು ನೀಡುತ್ತಿದೆ‌.

Also Read: Gruha Lakshmi Yojana: ಬ್ಯಾಂಕ್ ಖಾತೆಗೆ 2000 ರೂ. ಬರುವ ಮುನ್ನವೇ ಸರ್ಕಾರ ವಿರುದ್ಧ ಮಹಿಳೆಯರ ಆಕ್ರೋಶ: ಕಾರಣ ಏನು ಗೊತ್ತಾ.?

Leave A Reply

Your email address will not be published.