ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೊಳಿಸಿರುವಂತಹ ಐದು ಗ್ಯಾರಂಟಿಗಳಲ್ಲಿ (5 guarantees) ಗೃಹಲಕ್ಷ್ಮಿ ಯೋಜನೆಯು ಪ್ರಮುಖವಾದದ್ದು, ಈ ಯೋಜನೆಯ ಮುಖಾಂತರ ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ಹಣವನ್ನು ಜಮೆ ಮಾಡಲಾಗುತ್ತಿತ್ತು. ಸಣ್ಣಪುಟ್ಟ ಖರ್ಚುಗಳಿಗೆ (Expenses) ತಮ್ಮ ಮನೆಯವರ ಬಳಿ ಕೈ ಚಾಚದೆ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕೆಂಬುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದ್ದು, 10 ಕಂತುಗಳವರೆಗೂ ಸರ್ಕಾರ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Scheme)ಯ ಹಣವನ್ನು ತಪ್ಪದೆ ಜಮೆ ಮಾಡುತ್ತಾ ಬಂದರು, ಆದರೆ ಕಳೆದ ಕೆಲವು ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಹಣವನ್ನು ಹಾಕಿಲ್ಲ ಈ ಕುರಿತು ಬೇಸರಗೊಂಡಂತಹ ಫಲಾನುಭವಿ ಮಹಿಳೆಯರು ಸರ್ಕಾರವನ್ನು ಪ್ರಶ್ನೆ ಮಾಡಲು ಮುಂದಾಗಿದ್ದಾರೆ.
Gruha Lakshmi Scheme: ಒಟ್ಟಿಗೆ ₹6000 ಹಣವನ್ನು ಜಮೆ ಮಾಡುವ ಭರವಸೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್!
ಕಳೆದೆರಡು ಕಂತುಗಳ ಹಣವು ಇನ್ನೂ ಜಮೆಯಾಗಿಲ್ಲ ಅದಾಗಲೇ ಮುಂದಿನ ತಿಂಗಳು ಕೂಡ ಬರುತ್ತಿದೆ, ಯಾವಾಗ ಗೃಹಲಕ್ಷ್ಮಿ ಯೋಜನೆಯ ಹಣ ನಮ್ಮ ಖಾತೆಗೆ ಜಮೆ ಆಗಲಿದೆ ಎಂಬ ಪ್ರಶ್ನೆಯನ್ನು ಫಲಾನುಭವಿ ಮಹಿಳೆಯರು ಮೇಲಿಂದ ಮೇಲೆ ಸರ್ಕಾರಕ್ಕೆ ಕೇಳುತ್ತಿದ್ದರು, ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಅವರು 11, 12 ಹಾಗೂ 13 ಕಂತುಗಳ ₹6,000 ಹಣವನ್ನು ಒಟ್ಟಿಗೆ ಕರ್ನಾಟಕದಾದ್ಯಂತ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರ ಖಾತೆಗೂ ಜಮೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಗ್ಯಾರೆಂಟಿ ಪೂರೈಕೆಯ ಕುರಿತು ಸರ್ಕಾರದ ಸ್ಪಷ್ಟನೆ
ಹಲವು ತಿಂಗಳಿಂದ ಗೃಹಲಕ್ಷ್ಮಿ ಯೋಜನೆಯ ಹಣವು ಮಹಿಳೆಯರ ಖಾತೆಗೆ ಜಮೆಯಾಗದ ಕಾರಣ ಹಲವರು ಸರ್ಕಾರ ಯೋಜನೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಮುಂದೆ ಯಾವ ಫಲಾನುಭವಿ ಮಹಿಳೆಯರಿಗೂ ಎರಡು ಸಾವಿರ ರೂಪಾಯಿ ಹಣ ದೊರಕುವುದಿಲ್ಲ ಎಂಬ ನಾನಾ ರೀತಿಯ ಚರ್ಚೆಗಳು ಮುಗಿಲೆದ್ದಿವೆ, ಈ ಕುರಿತು ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಆದ ಲಕ್ಷ್ಮಿ ಹೆಬ್ಬಾಳ್ಕರ್(Lakshmi Hebbalkar) ಅವರು ಸುದ್ದಿಗೋಷ್ಠಿಯಲ್ಲಿ ‘‘ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವವರೆಗೂ ಗೃಹಲಕ್ಷ್ಮಿ ಆಗಲಿ ಅಥವಾ ಇನ್ನಿತರ ಯಾವುದೇ ಗ್ಯಾರಂಟಿಗಳಾಗಲಿ ಸ್ಥಗಿತಗೊಳ್ಳುವುದಿಲ್ಲ, ಹಣ ನಿಮ್ಮ ಖಾತೆಗೆ ಬರುವುದು ತಡವಾಗಬಹುದಷ್ಟೇ ಆದರೆ ಎಲ್ಲವನ್ನೂ ಸದ್ಯದಲ್ಲೇ ನಿಮಗೆ ತಲುಪಿಸುತ್ತೇವೆ’’ ಎಂದಿದ್ದಾರೆ.
ಸದ್ಯದಲ್ಲೇ ಎಲ್ಲ ಮಹಿಳೆಯರ ಖಾತೆಗೂ ಜಮೆ ಆಗಲಿದೆ ₹6000!
ಹೀಗೆ ಸರ್ಕಾರದ ಭರವಸೆಯಂತೆ ಈ ತಿಂಗಳಾಂತ್ಯದಲ್ಲಿ ಅಥವಾ ಮುಂದಿನ ತಿಂಗಳ ಆರಂಭದಲ್ಲಿ ಗೃಹಲಕ್ಷ್ಮಿ ಯೋಜನೆಯ (Gruha Lakshmi scheme) ಒಟ್ಟು 6,000 ಹಣವು ಪಲಾನುಭವಿ ಮಹಿಳೆಯರ ಖಾತೆಗೆ ಖಂಡಿತವಾಗಿಯೂ ಜಮೆಯಾಗಲಿದೆ. ಹೀಗಾಗಿ ಯಾರೆಲ್ಲಾ ಇಂದಿಗೂ ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರಕ್ರಿಯೆಯಲ್ಲಿ ತಾಂತ್ರಿಕ ಸಮಸ್ಯೆಯನ್ನು (Technical Issues) ಎದುರಿಸುತ್ತಿರುವಿರೋ ಅವರು ಈ ಕೂಡಲೇ ಸಂಬಂಧಪಟ್ಟ ಕಚೇರಿ ಅಥವಾ ಅಂಗನವಾಡಿ ಕಾರ್ಯಕರ್ತೆಯರನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಯನ್ನು ಬಗೆಹರಿಸಿಕೊಂಡು ಅರ್ಜಿ ಸಲ್ಲಿಸಿದರೆ ಯೋಜನೆಯ ಫಲವನ್ನು ಪಡೆಯಬಹುದು