Ration Card: ಹೊಸದಾಗಿ ರೇಷನ್ ಕಾರ್ಡ್ ಮಾಡಿಕೊಂಡವರಿಗೆ ಸಿಹಿಸುದ್ದಿ

Advertisement
ಇಂದು ಅನ್ನಭಾಗ್ಯ ಯೋಜನೆಯ ಸೌಲಭ್ಯ ವನ್ನು ಹಲವಾರು ಜನ ಬಳಸಿ ಕೊಳ್ತಾ ಇದ್ದಾರೆ, ಈ ಮೂಲಕ ಬಡ ವರ್ಗದ ಜನರಿಗಾಗಿ ಮಾಡಿರುವ ಸೌಲಭ್ಯ ಇದಾಗಿದ್ದು ಹೊಸ ಕಾರ್ಡ್ ಗೆ ಕೂಡ ಅರ್ಜಿ ಸಲ್ಲಿಕೆ ಮಾಡಲು ಜನರುಕಾಯ್ತಾ ಇದ್ದಾರೆ, ರಾಜ್ಯ ಸರ್ಕಾರವು ಜುಲೈ ತಿಂಗಳಿನಿಂದ ಆದ್ಯತಾ ಪಡಿತರ ಚೀಟಿ (Ration Card) ಹೊಂದಿರುವ ಫಲಾನುಭವಿಗಳಿಗೆ ಹೆಚ್ಚುವರಿ ಅಕ್ಕಿಯ ಬದಲು ಹಣ ವಿತರಿಸುವುದಾಗಿ ಘೋಷಣೆ ಮಾಡಿತ್ತು, ಅದೇ ರೀತಿ ಹಲವು ಫಲಾನುಭವಿಗಳಿಗೆ ಹಣ ಕೂಡಜಮೆ ಯಾಗಿದೆ, ನಿರೀಕ್ಷೆಗೆ ತಕ್ಕಂತೆ ರಾಜ್ಯ ಸರಕಾರಕ್ಕೆ ಅಕ್ಕಿ ಸಿಗದ ನಿಟ್ಟಿನಲ್ಲಿ ಸರ್ಕಾರ ಫಲಾನುಭವಿಗಳ ಖಾತೆಗೆ 5 ಕೆಜಿ ಅಕ್ಕಿ ಬದಲು ರೂ.170 ಜಮೆ ಮಾಡಿದೆ. ಇದೀಗ ಹೊಸ ಫಲಾನುಭವಿಗಳಿಗೂ ದೊರೆಯಲಿದೆ
ಜಮೆ ಯಾಗಲಿದೆ:
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ (BPL) ಅಂತ್ಯೋದಯ ಕಾರ್ಡ್ ಹೊಂದಿರು ವವರ ಖಾತೆಗೆ ಆಗಸ್ಟ್ ತಿಂಗಳಿನ 2ನೇ ಕಂತು ಹಣ ಜಮೆ ಆಗಲಿದೆ, ಈಗಾಗಲೆ ಒಂದಯ ಕಂತಿನ ಹಣ ಕೂಡ ಜಮೆ ಯಾಗಿದೆ, ಸುಮಾರು 1.03 ಕೋಟಿ ಕಾರ್ಡ್ ಹೊಂದಿರುವ 3.69 ಕೋಟಿ ಫಲಾನುಭವಿಗಳಿಗೆ 606 ಕೋಟಿ ರೂ. ಜಮೆಯಾಗಲಿದೆ ಎನ್ನಲಾಗಿದೆ
ಮಾಹಿತಿ ಪಡೆದುಕೊಳ್ಳಿ:
https://ahara.kar.nic.in/status1/status_of_dbt.aspx ಈ ಲಿಂಕ್ ಬಳಸಿ ಅನ್ನ ಭಾಗ್ಯ ದ ಹಣ ಬಂದಿದೆಯಾ ನೀವು ಚೆಕ್ ಮಾಡ ಬಹುದಾಗಿದೆ, ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಸರಜರಾಜು ಇಲಾಖೆಗೆ ಭೇಟಿ ನೀಡಿ ಅಲ್ಲಿ ಅನ್ನಭಾಗ್ಯ ಹಣ ಬಗ್ಗೆ ಮಾಹಿತಿ ಪಡೆದು ಕೊಳ್ಳಿ
ಲಿಂಕ್ ಮಾಡಿಸಿ:
ರೇಷನ್ ಕಾರ್ಡ್ (Ration Card) ಸ್ಟೇಟಸ್ ಅನ್ನು ನೀವು ಇಂದು ಸುಲಭವಾಗಿ ಪರಿಶೀಲನೆ ಕೂಡಮಾಡ ಬಹುದಾಗಿದ್ದು, ನೇರ ಲಾಭ ವರ್ಗಾವಣೆ (ಡಿಬಿಟಿ) ಮೂಲಕ ಹಣ ಕೂಡಜಮೆ ಯಾಗಲಿದೆ, ಹೆಚ್ಚುವರಿ 5 ಕೆಜಿ ಅಕ್ಕಿಯ ಹಣವನ್ನು ನೇರವಾಗಿ ನಿಮ್ಮ ಖಾತೆಗೆ ಜಮೆ ಮಾಡಲಾಗುತ್ತದೆ . ಆದರೆ ರೇಷನ್ ಕಾರ್ಡ್ (Ration Card) ಆಧಾರ್ ಕಾರ್ಡ್ ಗೆ ನೀವು ಲಿಂಕ್ ಮಾಡುವುದು ಕಡ್ಡಾಯ ವಾಗಿದೆ, ಈ ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾಯಿಸಲಾಗುತ್ತದೆ ಒಟ್ಟಿನಲ್ಲಿ 25 ಲಕ್ಷ ಹೊಸ ಫಲಾನುಭವಿಗಳಿಗೆ ಅನ್ನಭಾಗ್ಯ ಹಣ ಜಮೆ ಯಾಗಲಿದ್ದು , ಕಾರ್ಡ್ ದಾರರಿಗೆ ಇದು ಶುಭ ಸುದ್ದಿ ಯಾಗಿದೆ ಎನ್ನಬಹುದು.