Property: 99 ವರ್ಷಗಳ ಲೀಸ್ ಅವಧಿ ಮುಗಿದ ನಂತರ ನೀವು ಆಸ್ತಿಯನ್ನು ಬಿಟ್ಟು ಕೊಡಬೇಕೆ? ಏನಿದೆ ಭಾರತದ ಲೀಸ್ ನಿಯಮಗಳು
ನಾವು ವಾಸಿಸಲು ಮನೆ ಅಥವಾ ನಮ್ಮ ಇತರ ಉಪಯೋಗಗಳಿಗಾಗಿ ಭೂಮಿಯನ್ನು ಬೇರೆಯವರಿಂದ ಬಾಡಿಗೆ ಪಡೆಯಬಹುದು ಅಥವಾ ಅದನ್ನು ಗುತ್ತಿಗೆ ಆಧಾರದ ಮೇಲೆ ತೆಗೆದುಕೊಳ್ಳಬಹುದು. ಗುತ್ತಿಗೆ ಆಧಾರದ ಮೇಲೆ ಒಂದು ಆಸ್ತಿ (Property) ಯನ್ನು ತೆಗೆದುಕೊಂಡಿದ್ದರೆ ಅದಕ್ಕೆ 99 ವರ್ಷಗಳ ವರಗೆ ಗುತ್ತಿಗೆ ನೀಡಬಹುದು. 99 ವರ್ಷ ಆದ ಬಳಿಕ ಗುತ್ತಿಗೆ ಅವಧಿ ಮುಗಿದ ನಂತರ ಆ ಜಾಗವನ್ನು ಖಾಲಿ ಮಾಡಬೇಕೆ ಅಥವಾ ಒಪ್ಪಂದವನ್ನು ನವೀಕರಿಸಿಕೊಳ್ಳಬಹುದೇ ಎನ್ನುವ ಪ್ರಶ್ನೆ ಹಲವರಲ್ಲಿ ಇರುತ್ತೆ ಇದಕ್ಕೆ ಸರಿಯಾದ ರೀತಿಯ ಕಾನೂನು ಕೂಡ ಇದೆ ಅದರ ಆಧಾರದ ಮೇಲೆ ನೀವು 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ಒಂದು ಜಾಗವನ್ನು ತೆಗೆದುಕೊಂಡಿದ್ದರೆ ನಂತರದ ದಿನಗಳಲ್ಲಿ ಏನಾಗಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಆಸ್ತಿ ವ್ಯವಹಾರಗಳಲ್ಲಿ ಎರಡು ವಿಧ:
ಭಾರತದಲ್ಲಿ ಇರುವ ಆಸ್ತಿ ವ್ಯವಹಾರಗಳನ್ನು ನೋಡಿದರೆ ಫ್ರೀ ಹೋಲ್ಡ್ ಆಸ್ತಿ ಹಾಗೂ ಗುತ್ತಿಗೆ ಆಸ್ತಿ ಎಂದು ಎರಡು ವಿಧದಲ್ಲಿ ಆಸ್ತಿ ವ್ಯವಹಾರ ನಡೆಯುತ್ತದೆ. ಫ್ರೀ ಹೋಲ್ಡ್ ಆಸ್ತಿಯಲ್ಲಿ ಒಬ್ಬ ವ್ಯಕ್ತಿ ಆಸ್ತಿಯನ್ನು ಖರೀದಿಸಿದ ದಿನಾಂಕದಿಂದ ಆ ಆಸ್ತಿಯ ಮಾಲಿಕನಾಗುತ್ತಾನೆ. ಆದರೆ ಗುತ್ತಿಗೆ ಆಸ್ತಿಯಲ್ಲಿ 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ಮಾತ್ರ ಆಸ್ತಿ (Property) ಯನ್ನು ಪಡೆದುಕೊಂಡಿರಬಹುದು.
ಆಸ್ತಿ ವರ್ಗಾವಣೆ ಪದೇ ಪದೇ ನಡೆಯುತ್ತಿದ್ದಂತೆ ಸಮಸ್ಯೆ ಉಂಟಾಗಿ ಗುತ್ತಿಗೆ ಪದ್ಧತಿಯನ್ನು ಜಾರಿಗೆ ತರಲಾಯಿತು ಇದರಿಂದ ಆಸ್ತಿಯನ್ನು ಗುತ್ತಿಗೆ ಆಧಾರದ ಮೇಲೆ ಜನರಿಗೆ ನೀಡುವ ಪರಿಪಾಠ ಆರಂಭವಾಯಿತು. ಗುತ್ತಿಗೆ ಆಧಾರದ ಮೇಲೆ ಆಸ್ತಿ (Property) ನೀಡುವುದರಿಂದ ಯಾವುದೇ ಆಸ್ತಿ 99 ವರ್ಷಗಳವರೆಗೆ ಆ ವ್ಯಕ್ತಿಯ ಸಂಪೂರ್ಣ ಹಕ್ಕಾಗುವುದಿಲ್ಲ.
ಗುತ್ತಿಗೆ ಅವಧಿ ಮುಗಿದ ನಂತರ ಏನು ಮಾಡಬೇಕು:
ಸರ್ಕಾರದ ಆಸ್ತಿ (Property) ಗೆ ಫ್ರೀ ಹೋಲ್ಡ್ ಪರಿವರ್ತನೆ ಯೋಜನೆ ಜಾರಿಯಲ್ಲಿ ಇದೆ ಹಾಗಾಗಿ ಗುತ್ತಿಗೆ ಅವಧಿ ಮುಗಿದ ನಂತರ ಆ ಆಸ್ತಿ ಫ್ರೀಹೋಲ್ಡ್ ಎಂದು ಘೋಷಣೆ ಆಗುತ್ತದೆ. ಫ್ರೀ ಹೋಲ್ಡ್ ಆಸ್ತಿ ಅಗ್ಗವಾಗಿ ನಿಮಗೆ ಸಿಗುತ್ತದೆ ಆದರೆ ಇದು ಶುಲ್ಕ ಭರಿತವಾಗಿದ್ದು, ನೀವು ಲೀಸ್ ಆಸ್ತಿಯನ್ನು ಫ್ರೀ ಹೋಲ್ಡ್ ಆಧಾರದ ಮೇಲೆ ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಫ್ರೀ ಹೋಲ್ಡ್ ಆಸ್ತಿ (Property) ಯಾಗಿ 99 ವರ್ಷಗಳ ಭೋಗ್ಯ ಮುಗಿದ ನಂತರ ಆ ಆಸ್ತಿ ಪರಿವರ್ತನೆ ಆಗುತ್ತದೆ. ಫ್ರೀ ಹೋಲ್ಡ್ ಗೆ ನೀವು ಶುಲ್ಕವನ್ನು ಪಾವತಿ ಮಾಡಿ ಗುತ್ತಿಗೆ ಅವಧಿ ಮುಗಿದ ನಂತರ ಆ ಆಸ್ತಿಯನ್ನು ಖರೀದಿ ಮಾಡಬಹುದು. ಇಲ್ಲಿಯೂ ಕೂಡ ಕಾನೂನು ಬದ್ಧವಾಗಿರುವ ಸಾಕಷ್ಟು ನಿಯಮಗಳು ಅನ್ವಯವಾಗುತ್ತವೆ. ಹಾಗಾಗಿ ಇಂತಹ ವ್ಯವಹಾರಗಳಲ್ಲಿ ನಿಯಮಗಳನ್ನು ತಿಳಿದುಕೊಂಡು ವ್ಯವಹಾರ ನಡೆಸಬೇಕು. ಇಲ್ಲವಾದರೆ ಸಮಸ್ಯೆ ಉಂಟಾಗಬಹುದು.