Karnataka Times
Trending Stories, Viral News, Gossips & Everything in Kannada

Gas Cylinder: ಗ್ಯಾಸ್ ಸಿಲಿಂಡರ್ ಬೆಲೆ ಇಳಿದ 24 ಗಂಟೆ ಬೆನ್ನಲ್ಲೇ ಸರ್ಕಾರದ ಮತ್ತೊಂದು ನಿರ್ಧಾರ!

Advertisement

ದೇಶದಲ್ಲಿ ಬಿಜೆಪಿ ಸರಕಾರ ಎಷ್ಟು ಬಲಿಷ್ಟವಾಗಿದ್ದರೂ ಮುಂಬರುವ ಚುನಾವಣೆಯ ಬಗ್ಗೆ ಗೊಂದಲ ಸಮಸ್ಯೆ ಎಲ್ಲ ಇದ್ದಿದ್ದೇ ಆಗಿದೆ. ಬಿಜೆಪಿ (BJP) ಸರಕಾರವನ್ನು ಹೇಗಾದರೂ ಈ ಬಾರಿ ಸೋಲಿಸಲೇ ಬೇಕೆಂದು ಪಣತೊಟ್ಟ ಕಾಂಗ್ರೆಸ್ ಸರಕಾರ ಇದೇ ಕಾರಣಕ್ಕೆ ಇಂಡಿಯಾ ಮೈತ್ರಿ ಕೂಟ ಮಾಡಿ ಪ್ರಬಲ ಪೈಪೋಟಿ ನೀಡಲು ಅಣಿಯಾಗಿದೆ. ಹಾಗಾಗಿ ಈ ಬಾರಿ ಬಿಜೆಪಿ ಕೂಡ ನಿರ್ಲಕ್ಷ್ಯ ಮಾಡದೆ ಅನೇಕ ನೀತಿ ನಿಯಮ ಜಾರಿಗೆ ತರಲು ಮುಂದೆ ಬಂದಿದೆ.

ಸಬ್ಸಿಡಿ ನೀಡಿದೆ:

ದೇಶಿಯ ಮಟ್ಟದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಬೆಲೆಯನ್ನು ತಗ್ಗಿಸುವ ಮೂಲಕ ಸಹಾಯಧನ ಸಬ್ಸಿಡಿ ನೀಡಲು ಮುಂದಾದ ಸರಕಾರ ಈ ಮೂಲಕ 200ರೂ. ಸಾಮಾನ್ಯರಿಗೆ ಹಾಗೂ 400ರೂ. ಉಜ್ವಲ್ ಯೋಜನೆಯ (Ujjwala Yojana) ಫಲಾನುಭವಿಗಳಿಗೆ ನೀಡಲು ಮುಂದಾಗಿದೆ. ತರಕಾರಿ ಬೆಲ ಏರಿಕೆ ಯಿಂದ ಹೈರಾಣಾದ ಜನರಿಗೆ ಈಗ ತರಕಾರಿ ಬೆಲೆ ತಗ್ಗಿದ್ದು ಖುಷಿ ಇದೆ‌ ಅದರ ಬೆನ್ನಲ್ಲೆ ಸಬ್ಸಿಡಿ ಮೊತ್ತ ಏರಿಕೆಗೆ ಸರಕಾರ ಕ್ರಮಕೈಗೊಂಡದ್ದು ಜನರ ಮಿಶ್ರ ಪ್ರತಿ ಕ್ರಿಯೆಗೆ ಕಾರಣ ಆಗಿದೆ.

ಅಭಿಪ್ರಾಯವೇನು:

ಮೂರು ವರ್ಷಗಳಿಂದ ಸಬ್ಸಿಡಿ ನೀಡಿಲ್ಲ ಈಗ ನೀಡಲು ಕಾರಣ ಚುನಾವಣೆ ಅಷ್ಟೇ ಎಂದು ಜನರು ಬಿಜೆಪಿ ವಿರುದ್ಧ ಕೆಲವರು ಕಿಡಿ ಕಾರಿದ್ದಾರೆ ಉಳಿದಂತೆ ಬಿಜೆಪಿ ಬೆಂಬಲಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನದಲ್ಲಿ ವಾಹನಗಳ ಅಗತ್ಯ ತೈಲಗಳಾದ ಪೆಟ್ರೋಲ್ (Petrol, Diesel) ಡಿಸೇಲ್ ದರ ಇಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತದೆ.

ಕಡಿಮೆ ಯಾಗುತ್ತಾ?

ಕೇಂದ್ರ ವಸತಿ ಮತ್ತು‌ ನಗರ ವ್ಯವಹಾರಗಳ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಈ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ. ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಗೆ ಕೆಲವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳಲು ಸರಕಾರ ತೀರ್ಮಾನಿಸಿದೆ. ಬೆಲೆ ಇಳಿಕೆಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳುವುದಾಗಿ ಸಚಿವರು ತಿಳಿಸಿದ್ದಾರೆ.

ಲೋಕಸಭಾ (Lokasabha Election)ಚುನಾವಣೆಯ ಆರಂಭಕ್ಕೂ ಮುನ್ನವೇ ಕಾವು ದೇಶಕ್ಕೆ ಹಬ್ಬುತ್ತಿದ್ದು ಎಲ್ಲ ರಾಜಕೀಯ ಪ್ರಮುಖ ಪಕ್ಷಗಳು ಚುನಾವಣೆಯನ್ನು ಬಲವಾಗಿ ಎದುರಿಸಲು ಸಕಲ ಸಿದ್ಧತೆ ನಡೆಸುತ್ತಿದೆ. ಕರ್ನಾಟಕದಲ್ಲಿ ಗ್ಯಾರೆಂಟಿ ಮಾನ್ಯತೆ ಪಡೆದಂತೆ ದೇಶದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರೆಂಟಿ ಯೋಜನೆ ಬರುತ್ತಾ ಎಂದು ಕಾದು ನೋಡಬೇಕಿದೆ.

Also Read: Gas Cylinder: ದೇಶಾದ್ಯಂತ 200 ರೂಗೆ ಸಿಗಲಿದೆ ಗ್ಯಾಸ್ ಸಿಲಿಂಡರ್!

Leave A Reply

Your email address will not be published.