Free Bus: ಫ್ರೀ ಬಸ್ ಹತ್ತುವ ಮಹಿಳೆಯರಿಗೆ ಸಿಹಿಸುದ್ದಿ! ಸರ್ಕಾರದಿಂದ ಅಧಿಕೃತವಾಗಿ ಇನ್ನೊಂದು ನಿರ್ಧಾರ ಪ್ರಕಟ
90s ನಲ್ಲಿ ಬೆಂಗಳೂರಿಗೆ ಬಂದವರು ಡಬಲ್ ಡೆಕ್ಕರ್ ಬಸ್ ಹತ್ತಿದೆ ಮರಳಿ ಹೋಗುತ್ತಿರಲಿಲ್ಲ. ಆದ್ರೆ ಈಗ ಆ ರೀತಿಯ ಬಸ್ ಗಳು ಕಾಣಲು ಸಾಧ್ಯವಿಲ್ಲ. ಕೆಲವು ತಾಂತ್ರಿಕ ಕಾರಣಗಳಿಂದ ಈ ಬಸ್ ಗಲಬ್ನು ಎಲ್ಲಿಯೂ ಕಾಣಲು ಸಾಧ್ಯವಿಲ್ಲ. ಆದ್ರೆ ಈ ವರ್ಷದ ಅಂತ್ಯಕ್ಕೆ ನಗರದಲ್ಲಿ ಸಂಚರಿಸುವ ಸಾಧ್ಯತೆಗಳಿವೆ. ಅದಕ್ಕಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳ ಪೂರೈಕೆಗೆ ಗುತ್ತಿಗೆ ಸಂಸ್ಥೆ ನೇಮಿಸಲು ಬಿಎಂಟಿಸಿ ಮುಂದಿನ 15 ದಿನದ ಒಳಗಾಗಿ ಟೆಂಡರ್ ಪ್ರಕ್ರಿಯೆ ನಡೆಸಲಿದೆ.
ಹೌದು, ಬೆಂಗಳೂರಿನಲ್ಲಿ 26 ವರ್ಷಗಳ ನಂತರ ಮತ್ತೆ ಡಬ್ಬಲ್ ಡೆಕ್ಕರ್ ಬಸ್ ಸೇವೆ ಒದಗಿಸಲು ಬಿಎಂಟಿಸಿ ಸಿದ್ಧವಾಗಿದೆ. ಡಬಲ್ ಡೆಕ್ಕರ್ ಬಸ್ ನಲ್ಲಿ ಬೆಂಗಳೂರು ಸುತ್ತುವುದೆ ಒಂದು ಮಜವಾಗಿದೆ . ಅದರಲ್ಲಿಯೂ. ಈ ಬಸ್ ಹಿತಿಹಾಸವಂತು ಇನ್ನೂ ರೋಚಕ . 1970-80ರ ವೇಳೆಯಲ್ಲಿ ಸೇವೆ ಆರಂಭಿಸಿದ್ದ ಡಬ್ಬಲ್ ಡೆಕ್ಕರ್ ಬಸ್‌ಗಳ ಓಡಾಟವನ್ನು ಬಿಎಂಟಿಸಿ 1997ರಲ್ಲಿ ಸ್ಥಗಿತಗೊಳಿಸಿತ್ತು. ರಸ್ತೆಗಳ ವಿಸ್ತೀರ್ಣ, ರಸ್ತೆಗಳ ಮೇಲ್ಭಾಗದಲ್ಲಿ ತಂತಿಗಳು ಹೆಚ್ಚಳ, ಬಸ್‌ಗಳ ನಿರ್ವಹಣೆ ಕೊರತೆ ಹೀಗೆ ಹಲವು ಕಾರಣಗಳಿಂದಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳ ಸೇವೆಯನ್ನು ನಿಲ್ಲಿಸಲಾಗಿತ್ತು. ಆದರೆ, ಕಳೆದ ಮೂರ್ನಾಲ್ಕು ವರ್ಷಗಳಿಂದ ಡಬ್ಬಲ್ ಡೆಕ್ಕರ್ ಬಸ್ ಸೇವೆ ಆರಂಭಿಸುವ ಕುರಿತಂತೆ ಚರ್ಚೆಗಳು ನಡೆಯುತ್ತಿದ್ದವು. ಇದೀಗ ಆ ಬಸ್ ಅನ್ನು ಮರಳಿ ತರಬೇಕು ಎಂಬ ಕಾರಣದಿಂದ ಅನೇಕ ಚರ್ಚೆಗಳು ನಡೆಯುತ್ತಿವೆ. ಅದಕ್ಕಾಗಿ ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ಕೂಡ ನಡೆಸಲಾಗುತ್ತಿದೆ. ಮೊದಲ ಹಂತದಲ್ಲಿ 10 ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸಿ ಕಾರ್ಯಾಚರಣೆಗೊಳಿಸುವ ಬಗ್ಗೆ ಯೋಜನೆ ರೂಪಿಸಲಾಗಿದೆ.
ಹಿಂದೆ ಬಿಜೆಪಿ ಮಾಡಿದ್ದ ಟೆಂಡರ್ ರದ್ದು:
- ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಳೆದ ಜನವರಿಯಲ್ಲಿ 5 ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ಖರೀದಿಸುವ ಸಲುವಾಗಿ ಟೆಂಡರ್ ಪ್ರಕ್ರಿಯೆ ನಡೆಸಲಾಗಿತ್ತು.
- ಆ ಸಂದರ್ಭದಲ್ಲಿ ಒಂದು ಸಂಸ್ಥೆ ಮಾತ್ರ ಬಿಡ್ ಸಲ್ಲಿಸಿತ್ತು. ಅದರಿಂದಾಗಿ ಆ ಸಂಸ್ಥೆಗೆ ಕಾರ್ಯಾದೇಶ ನೀಡಿರಲಿಲ್ಲ, ಬದಲಿಗೆ ಸಂಸ್ಥೆ ಜತೆಗೆ ಬಿಎಂಟಿಸಿಯಿಂದ ಮಾತುಕತೆ ನಡೆಸಲಾಗಿತ್ತು.
- ಆದರೆ, ಇದೀಗ 10 ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಬಿಎಂಟಿಸಿ ನಿರ್ಧರಿಸಿದ್ದು, ಅದಕ್ಕಾಗಿ ಶೀಘ್ರದಲ್ಲಿ ಟೆಂಡರ್ ಕರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
- ಅಲ್ಲದೆ ಮತ್ತೊಂದು ವಿಶೇಷ ಎಂದರೆ ಈ ಡಬ್ಬಲ್ ಡೆಕ್ಕರ್ ಬಸ್‌ಗಳಲ್ಲಿ ಬಹುತೇಕವು ಎಲೆಕ್ಟ್ರಿಕ್ ವಾಹನಗಳಾಗಿರಲಿವೆ.
- ಈ ಯೋಜನೆಗಾಗಿ 24 ಕೋಟಿಗಳನ್ನು ಒದಗಿಸುವುದಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಸೂಚಿಸಲಾಗಿತ್ತು. ಅದರಂತೆ ಡಬ್ಬಲ್ ಡೆಕ್ಕರ್ ಬಸ್‌ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಈ ವರ್ಷದ ಕೊನೆಯಲ್ಲಿ ಬಸ್‌ಗಳನ್ನು ರಸ್ತೆಗಿಳಿಸುವ ಸಾಧ್ಯತೆ ಹೆಚ್ಚಿದೆ.
- ಆದ್ರೆ ಇದರಲ್ಲಿ ಇರುವ ಪ್ರಮುಖ ಸಮಸ್ಯೆ ಎಂದರೆ ಬೆಂಗಳೂರಿನ ಒಳಭಾಗದಲ್ಲಿ ಡಬ್ಬಲ್ ಡೆಕ್ಕರ್ ಬಸ್‌ಗಳ ಸಂಚಾರಕ್ಕೆ ಸೂಕ್ತ ರಸ್ತೆಗಳಿಲ್ಲ.
- ಡಬ್ಬಲ್ ಡೆಕ್ಕರ್ ಬಸ್‌ಗಳು ಸಾಮಾನ್ಯ ಬಸ್‌ಗಳಿಗಿಂತ ಸಾಕಷ್ಟುಎತ್ತರ ಇಲ್ಲಿರುವ ಕಾರಣ, ನಗರದೊಳಗೆ ಸಂಚರಿಸಲು ಸಾಧ್ಯವಿಲ್ಲ.
ಹೀಗಾಗಿ ಡಬ್ಬಲ್ ಡೆಕ್ಕರ್ ಬಸ್‌ಗಳು ಯಾವ ಮಾರ್ಗದಲ್ಲಿ ಸಂಚರಿಸಬಹುದು ಎಂದು ಬಿಎಂಟಿಸಿ ಈಗಾಗಲೇ ಸರ್ವೇಯನ್ನೂ ನಡೆಸಿದೆ. ಅದರ ಪ್ರಕಾರ ಹೊರವರ್ತುಲ ರಸ್ತೆಯಲ್ಲಿ ಡಬ್ಬಲ್ ಡೆಕ್ಕರ್ ಬಸ್ ಸೇವೆ ನೀಡುವುದಕ್ಕೆ ನಿರ್ಧಾರ ಮಾಡಲಾಗಿದೆ. ಅದರ ಜತೆಗೆ ಡಬ್ಬಲ್ ಡೆಕ್ಕರ್ ಬಸ್‌ಗಳು ಸಂಚರಿಸಬಹುದಾದ ಇನ್ನಿತರ ಮಾರ್ಗಗಳನ್ನೂ ಹುಡುಕಲಾಗುತ್ತಿದೆ.