Karnataka Times
Trending Stories, Viral News, Gossips & Everything in Kannada

Gruha Lakshmi: ಗೃಹಲಕ್ಷ್ಮೀ ಯೋಜನೆ ಕೊಟ್ಟ 24 ಗಂಟೆಯೊಳಗೆ ಇನ್ನೊಂದು ಭಾಗ್ಯ ತಂದ ಸರ್ಕಾರ!

Advertisement

ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಅವರು ವಿವಿಧ ವಿಚಾರದ ಮೂಲಕ ಆಗಾಗ ಸದ್ದಾಗುತ್ತಲೇ ಇದ್ದಾರೆ. ಈ ಮೂಲಕ ರಾಜ್ಯಾದ್ಯಂತ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಇನ್ನಿತರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಾ ಸರಕಾರದ ನೀತಿ ನಿಯಮವನ್ನು ಪ್ರಚಾರ ಪಡಿಸಿದ್ದಾರೆ. ಈ ಮೂಲಕ ಪ್ರಚಾರ ಕಾರ್ಯಕ್ಕಾಗಿ ಮಾಡುವ ಕೆಲಸ ಕಾರ್ಯ ಸದ್ಯ ಎಲ್ಲೆಡೆ ಜನ ಮಾನ್ಯತೆ ಸಹ ಪಡೆಯುತ್ತಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮಕ್ಕಳು, ಹಿರಿಯನಾಗರಿಕರಿಗೆ ಹಾಗೂ ಮಹಿಳಾ ಪರವಾದ ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತರಲು ಸರಕಾರ ತೀರ್ಮಾನ ಕೈ ಗೊಂಡಿದೆ‌ ಎಂಬ ಬಗ್ಗೆ ಮಹತ್ವದ ಮಾಹಿತಿಯೊಂದನ್ನು ತಿಳಿಸಿದ್ದಾರೆ. ಅವರು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಮೈಸೂರಿನ ಮಹಾರಾಜ ಕಾಲೇಜಿನ ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಅವರು ಮಾತಾಡಿದ್ದಾರೆ.

ಏನಂದ್ರು ಸಚಿವೆ?

ಸಚಿವೆ ಹೆಬ್ಬಾಳ್ಕರ್ (Hebbalkar) ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಜನತೆಗೆ ಹಲವಾರು ಅಭಿವೃದ್ಧಿ ಕಾರ್ಯಕ್ರಮ ನೀಡಿದ್ದಾರೆ. ಮೈಸೂರಿನಲ್ಲಿ ಈ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದಿಂದ ಜಾರಿಗೆ ತರುವುದು ಒಂದು ಹೆಮ್ಮೆ. ಮುಂದಿನ ದಿನದಲ್ಲಿ ಹಿರಿಯ ನಾಗರಿಕರಿಗೆ ಮಹಿಳೆಯರಿಗೆ, ಮಕ್ಕಳಿಗೆ, ವಿಕಲ ಚೇತನರಿಗೆ ಹಲವಾರು ಜನಪರ ಯೋಜನೆ ಜಾರಿಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳಿದ್ದಾರೆ.

ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಯ ಮೂಲಕ ರಾಜ್ಯದ ಜನತೆಗೆ ಅದರಲ್ಲೂ ಮಹಿಳೆಯರಿಗೆ ತಿಂಗಳಿಗೆ ಎರಡು ಸಾವಿರ ಮೊತ್ತ ಬರಲಿದೆ. ಇದು ಒಂದು ಕುಟುಂಬಕ್ಕೆ ಒಂದು ಆರ್ಥಿಕ ನೆರವು ಸಿಗಲಿದೆ. ಅದೇ ರೀತಿ ಈ ಹಣ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೂ ಸಾಕ್ಷಿಯಾಗಲಿದೆ ಎನ್ನಬಹುದು. ಯೋಜನೆಗೆ ಈಗಷ್ಟೇ ಜಾರಿಗೆ ಬಂದಿದ್ದು ಎಲ್ಲರಿಗೂ ಅರ್ಹರಿಗೆ ಸೌಲಭ್ಯ ಇರಲಿದೆ.

ಶಕ್ತಿ ಯೋಜನೆ ರಾಜ್ಯದಲ್ಲಿ ಯಶಸ್ವಿ ಆಗಿದ್ದು ಅನ್ನಭಾಗ್ಯ, ಗೃಹಜ್ಯೋತಿ ಗೂ ಉತ್ತಮ ಸ್ಪಂದನೆ ಸಿಕ್ಕಿದೆ. ಬಳಿಕ ಡಿಸೆಂಬರ್ ಅವಧಿಯಲ್ಲಿ ಯುವನಿಧಿ ಬರಲಿದೆ.

Leave A Reply

Your email address will not be published.