2000 Rupee Note: ಒಂದೇ ಒಂದು 2000 ರೂ ನೋಟು ಬಾಕಿ ಇದ್ದವರಿಗೂ ಸರ್ಕಾರದ ಹೊಸ ಸೂಚನೆ!

Advertisement
ಸಾವಿರ ರೂಪಾಯಿಗಳ ನೋಟುಗಳನ್ನು ಬ್ಯಾಂಕ್ ಗೆ ಹೋಗಿ ನೀವು ಇನ್ನೂ ಬದಲಾಯಿಸಿಕೊಂಡಿಲ್ಲ ಅಂದರೆ ತಕ್ಷಣವೇ ಬದಲಾಯಿಸಿಕೊಳ್ಳಿ ಯಾಕೆಂದರೆ ರಿಸರ್ವ್ ಬ್ಯಾಂಕ್ ಹೇಳಿರುವ ಪ್ರಕಾರ 2,000 ರೂ (2000 Rupee Note). ಗಳನ್ನು ಸೆಪ್ಟೆಂಬರ್ ತಿಂಗಳಿನ ನಂತರ ಚಲಾವಣೆಯಲ್ಲಿ ಇರುವುದಿಲ್ಲ. ಸೆಪ್ಟೆಂಬರ್ 30ನೇ ತಾರೀಕಿನವರೆಗೆ ಆರ್ ಬಿ ಐ (RBI) 2000 ರೂ. ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ಸೆಪ್ಟೆಂಬರ್ ತಿಂಗಳಿನಲ್ಲಿ 19 ದಿನ ಬ್ಯಾಂಕ್ ರಜಾ:
ಹೌದು ಇನ್ನು ಕೇವಲ ಒಂದು ತಿಂಗಳು ಮಾತ್ರ 2,000 ನೋಟು (2000 Rupee Note) ಗಳನ್ನು ಬದಲಾಯಿಸಿಕೊಳ್ಳಲು ಅವಕಾಶವಿದೆ. ಆದ್ರೆ ಸಂಪೂರ್ಣ ಒಂದು ತಿಂಗಳು ಕೂಡ ಬ್ಯಾಂಕ್ ತೆರೆದಿರುವುದಿಲ್ಲ ಸೆಪ್ಟೆಂಬರ್ ತಿಂಗಳಿನಲ್ಲಿ 16 ರಿಂದ 19 ದಿನಗಳವರೆಗೆ ಬ್ಯಾಂಕ್ ಮುಚ್ಚಲ್ಪಟ್ಟಿರುತ್ತದೆ. ಬ್ಯಾಂಕ್ ನಲ್ಲಿ ವಿವಿಧ ಹಬ್ಬಗಳು ಭಾನುವಾರ ಎರಡನೇ ಶನಿವಾರ ನಾಲ್ಕನೇ ಶನಿವಾರ ಈ ರಜಾ ದಿನಗಳನ್ನು ಹೊರತುಪಡಿಸಿ ಬ್ಯಾಂಕ್ ಕಾರ್ಯ ನಿರ್ವಹಿಸುವುದು ಕೇವಲ 15 ರಿಂದ 16 ದಿನಗಳ ವರೆಗೆ ಮಾತ್ರ. ಹಾಗಾಗಿ ನೀವು ಬ್ಯಾಂಕ್ ನ ಯಾವುದೇ ವ್ಯವಹಾರ ಇದ್ದರೂ ಕೂಡ ತಕ್ಷಣವೇ ಮಾಡಿಕೊಳ್ಳಿ. ವಿಳಂಬ ಮಾಡಿದರೆ ಬ್ಯಾಂಕ್ ರಜಾ ದಿನಗಳು ನಿಮ್ಮ ಹಣಕಾಸಿನ ವ್ಯವಹಾರಕ್ಕೆ ತೊಂದರೆ ಉಂಟು ಮಾಡಬಹುದು.
ಬ್ಯಾಂಕ್ ನಲ್ಲಿ 2000 ನೋಟುಗಳನ್ನು ವಿನಿಮಯ ಮಾಡಿಕೊಳ್ಳುವುದು ಹೇಗೆ:
ಸಾವಿರ ರೂಪಾಯಿಗಳ ನೋಟುಗಳು ಬ್ಯಾನ್ ಆಗುತ್ತಿರುವ ಹಿನ್ನೆಲೆಯಲ್ಲಿ ನೀವು ನಿಮ್ಮ ಬಳಿ 2,000 ನೋಟು (2000 Rupee Note) ಗಳು ಇದ್ದರೆ ತಕ್ಷಣವೇ ಅದನ್ನು ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ ಬದಲಾಯಿಸಿಕೊಳ್ಳಬೇಕು. ನೀವು ಈ ಹಂತವನ್ನು ಅನುಸರಿಸಿ.
- ಮೊದಲನೆಯದಾಗಿ ನಿಮ್ಮ ಬಳಿ ಎಷ್ಟು ಎರಡು ಸಾವಿರ ರೂಪಾಯಿಗಳ ನೋಟುಗಳು ಇವೆಯೋ ಅವೆಲ್ಲವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗೆ ಹೋಗಿ.
- ನಂತರ ಅಲ್ಲಿ ಒಂದು ಸ್ಲಿಪ್ ನೀಡಲಾಗುತ್ತದೆ ಅದರಲ್ಲಿ ಇರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು.
- ನೀವು ಭರ್ತಿ ಮಾಡಿದ ಸ್ಲಿಪ್ ಜೊತೆಗೆ ಎರಡು ಸಾವಿರ ರೂಪಾಯಿಗಳ ನೋಟುಗಳನ್ನು ಕೂಡ ಬ್ಯಾಂಕ್ ಗೆ ಕೊಡಬೇಕು.
- 2000 ರೂಪಾಯಿಗಳ ನೋಟುಗಳ ವಿನಿಮಯದ ಸಂದರ್ಭದಲ್ಲಿ ಬ್ಯಾಂಕ್ ಅದರದ್ದೇ ಆದ ಪ್ರಕ್ರಿಯೆ ಹಾಗೂ ಮಾನದಂಡವನ್ನು ಹೊಂದಿರುತ್ತದೆ ಹಾಗಾಗಿ ಅದರ ಅನುಸಾರ ನೀವು ಹಣವನ್ನು ಬದಲಾವಣೆ ಮಾಡಿಕೊಳ್ಳಬಹುದು.
ಬ್ಯಾಂಕ್ ನ ರಜಾ ದಿನಗಳು:
ಇನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಸುಮಾರು 16 ದಿನಗಳಷ್ಟು ಬ್ಯಾಂಕ್ ರಜೆ ಇರುತ್ತದೆ ಅದರಲ್ಲೂ ವಿಶೇಷವಾಗಿ ಗಣೇಶ ಚತುರ್ಥಿ ಮೊದಲಾದ ಹಬ್ಬಗಳು ಬಂದಿರುವುದರಿಂದ ಹೆಚ್ಚಿನ ದಿನ ಬ್ಯಾಂಕ್ ಮುಚ್ಚಿರುತ್ತದೆ. ಸೆಪ್ಟೆಂಬರ್ ತಿಂಗಳಿನ ಬ್ಯಾಂಕ್ ರಜಾ ದಿನಗಳು ಇಂತಿವೆ.
- ಸೆಪ್ಟೆಂಬರ್ 6 – ಶ್ರೀ ಕೃಷ್ಣ ಜನ್ಮಾಷ್ಟಮಿ
- ಸೆಪ್ಟೆಂಬರ್ 7 – ಶ್ರೀ ಕೃಷ್ಣ ಅಷ್ಟಮಿ
- ಸೆಪ್ಟೆಂಬರ್ 18, 19, 20- ಗಣೇಶ ಚತುರ್ಥಿ
- ಸೆಪ್ಟೆಂಬರ್ 22- ಶ್ರೀ ನಾರಾಯಣ ಗುರು ಸಮಾಧಿ ದಿವಸ್
- ಸೆಪ್ಟೆಂಬರ್ 23- ಮಹಾರಾಜ ಹರಿ ಸಿಂಗ್ ಜನ್ಮದಿನ
- ಸೆಪ್ಟೆಂಬರ್ 25- ಶ್ರೀಮಂತ ಶಂಕರ್ ದೇವ್ ಅವರ ಜನ್ಮದಿನ
- ಸೆಪ್ಟೆಂಬರ್ 27- ಮಿಲಾದ್-ಎ-ಷರೀಫ್
- ಸೆಪ್ಟೆಂಬರ್ 29- ಈದ್-ಇ-ಮಿಲಾದ್-ಉಲ್-ನಬಿ (ರಜಾ ದಿನಗಳು ಸ್ಥಳೀಯ ಆಯ್ಕೆಯ ಆದಾರದ ಮೇಲೆ ಬದಲಾಗಬಹುದು) ಈ ರಜಾ ದಿನಗಳನ್ನು ಹೊರತು ಪಡಿಸಿ, ಎರಡು ಶನಿವಾರ ಹಾಗೂ ನಾಲ್ಕು ಭಾನುವಾರ ರಜಾ ದಿನಗಳು.