ಈಗಾಗಲೇ ನಿಮಗೆಲ್ಲ ತಿಳಿದಿರಬಹುದು , ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿಯನ್ನು ಮಾಡುವಲ್ಲಿ ಅವಕಾಶ ನೀಡಿದೆ. ಅದೇ ರೀತಿ ಕೆಲವು ಅನರ್ಹರ ಪಡಿತರ ಚೀಟಿಯನ್ನು ಅದ್ದು ಮಾಡುವ ಕೆಲಸದಲ್ಲಿ ಕೂಡ ಮುಂದಾಗಿದೆ, ಸ್ವಂತ ಉಪಯೋಗಕ್ಕೆ ಕಾರು ಹೊಂದಿರುವವರು , ಹಾಗೂ ತೆರಿಗೆಪಾವತಿ ಮಾಡುವವರು ಹೀಗೆ ಯಾರು ಅಕ್ರಮವಾಗಿ BPL ಕಾರ್ಡ್ (BPL Ration Card) ಮಾಡಿಕೊಂಡಿರುತ್ತಾರೆ ಅವರ ಕಾರ್ಡ್ ಗಳು ರದ್ದಾಗಲಿದೆ.
ಇದರೊಂದಿಗೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಮಾಡಲು ಮುಂದಾದವರಿಗೆ ಬಿಗ್ ಶಾಕ್ ನೀಡಲಾಗಿದೆ.
ಅಲ್ಲದೇ ಈಗಾಗಲೇ ಬಿಪಿಎಲ್ ಕಾರ್ಡ್ ಹೊಂದಿ, ಆರ್ಥಿಕ ಸುಸ್ಥಿತಿಯನ್ನು ಇರುವವರ ಕಾರ್ಡ್ ರದ್ದು ಮಾಡೋದಕ್ಕೂ ಮುಂದಾಗಿ ಬಿಗ್ ಶಾಕ್ ನೀಡಲಾಗಿದೆ, ಹೌದು ಮೇಲೆ ಹೇಳಿದಂತೆ BPL ಕಾರ್ಡ್ (BPL Ration Card) ರದ್ದು ಮಾಡುವ ಸಲುವಾಗಿ ಕೆಲವು ಮಾನದಂಡಗಳನ್ನು ಕೂಡ ಮಾಡಿಕೊಂಡಿದೆ.
ಇದಕ್ಕೆ 6 ಮಾನದಂಡಗಳನ್ನು ಕೂಡ ಆಹಾರ ಇಲಾಖೆ ಫಿಕ್ಸ್ ಮಾಡಿದ್ದು, ಆ ಮಾನದಂಡ ಮೀರಿದಂತ ಬಿಪಿಎಲ್ ಕಾರ್ಡ್ ಗಳನ್ನು ರದ್ದು ಮಾಡುವುದಲ್ಲದೇ, ಅಂತಹ ಬಳಕೆದಾರರಿಗೆ ಭಾರೀ ದಂಡವನ್ನು ವಿಧಿಸೋ ಚಿಂತನೆ ನಡೆಸಿದೆ. ಹಾಗಾದ್ರೇ ನಿಮ್ಮ ರೇಷನ್ ಕಾರ್ಡ್ ರದ್ದಾಗಿದ್ಯಾ? ಚಾಲ್ತಿಯಲ್ಲಿ ಇದ್ಯಾ? ಅಂತ ಚೆಕ್ ಮಾಡೋದು ಹೇಗೆ ಗೊತ್ತಾ..?
ಬಿಪಿಎಲ್ ಕಾರ್ಡ್ ರದ್ದು, ಬದಲಾವಣೆಗಾಗಿ ಆಹಾರ ಇಲಾಖೆಯಿಂದ ಕ್ರಮವಹಿಸಲಾಗಿದೆ. ಈ ಸಂಬಂಧ ಆಹಾರ ಇಲಾಖೆಯು ಅರ್ಹತೆ ಇಲ್ಲದಿದ್ದರೂ ಬಿಪಿಎಲ್ ಕಾರ್ಡ್ ಪಡೆದವ್ರ ಮೇಲೆ ನಿಗಾ ವಹಿಸಿದೆ. ಅಲ್ಲದೇ ಬಿಪಿಎಲ್ ಕಾರ್ಡ್ ದಾರರ ಆರ್ಥಿಕ ಸ್ಥಿತಿ ಬಗ್ಗೆ ಸರ್ವೇ ನಡೆಸೋದಕ್ಕೆ ಮುಂದಾಗಿದೆ. ಈ ಸರ್ವೆಯನ್ನು 6 ಮಾನದಂಡಗಳ ಮೇಲೆ ನಡೆಸುತ್ತಿದೆ.
ವೈಟ್ ಬೋರ್ಡ್ ಕಾರು, ನಿಗದಿತ ವಾರ್ಷಿಕ ಆದಾಯ, ಸರ್ಕಾರಿ ನೌಕರರು, ನಿಗದಿತ ಜಮೀನು ಹೊಂದಿರಬಾರದು. ಈ ಹಿಂದೆ 6 ಮಾನದಂಡಗಳ ವ್ಯಾಪ್ತಿಯಲ್ಲಿದ್ದವರು ಈಗ ಆರ್ಥಿಕ ಸ್ಥಿತಿ ಸುಧಾರಿಸಿದ್ದರೂ ಬಿಪಿಎಲ್ ಕಾರ್ಡ್ ರದ್ದು ಮಾಡುವಂತ ತೀರ್ಮಾನವನ್ನು ಶೀಘ್ರದಲ್ಲೇ ಕೈಗೊಳ್ಳಲಿದೆ.
ವಾರ್ಷಿಕ ಆದಾಯ 1.2 ಲಕ್ಷ ಮೀರಿದವರು, 3 ಹೆಕ್ಟೇರ್ ಗಿಂತ ಹೆಚ್ಚಿನ ಒಣಭೂಮಿ ಹೊಂದಿದ್ದವರು, ನಗರದ ಭಾಗದಲ್ಲಿ ಮನೆಯ ವಿಸ್ತೀರ್ಣ 1000 ಸ್ವಯರ್ ಫೀಟ್ ಗಿಂತ ಹೆಚ್ಚು ಹೊಂದಿರೋರು, ವಾಣಿಜ್ಯ, ಆದಾಯ ತೆರಿಗೆ, ಐಟಿ ರಿಟನ್ರ್ ಪಾವತಿದಾರರ ಬಗ್ಗೆ ಸರ್ವೇ ಮಾಡಿ, ಅವರು ಬಿಪಿಎಲ್ ಕಾರ್ಡ್ (BPL Ration Card) ಪಡೆದಿದ್ದರೇ ರದ್ದು ಮಾಡೋದಕ್ಕೆ ಮುಂದಾಗಿದೆ.
ಬಿಪಿಎಲ್ ಕಾರ್ಡ್ ಹೊಂದಿರೋರು ವೈಟ್ ಬೋರ್ಟ್ ಕಾರು ಹೊಂದಿರುವಂತಿಲ್ಲ, ವಾರ್ಷಿಕ 1.2 ಲಕ್ಷ ಆದಾಯವನ್ನು ಮೀರುವಂತಿಲ್ಲ. 3 ಹೆಕ್ಟೇರ್ ಗಿಂತ ಹೆಚ್ಚು ಕೃಷಿ ಭೂಮಿ ಹೊಂದಿದ್ರೇ ಬಿಪಿಎಲ್ ಕಾರ್ಡ್ ರದ್ದು ನಗರ ಪ್ರದೇಶದಲ್ಲಿ 1000 ಸ್ಕ್ವಯರ್ ಪೀಟ್ ವಿಸ್ತೀರ್ಣಕ್ಕಿಂತ ಹೆಚ್ಚಿನ ಮನೆ ಹೊಂದಿರುವಂತಿಲ್ಲ.
ಬಿಪಿಎಲ್ ಕಾರ್ಡ್ ಹೊಂದಿರೋ ಕುಟುಂಬದಲ್ಲಿ ಯಾರೂ ಸರ್ಕಾರಿ ನೌಕರರ ಆಗಿರುವಂತಿಲ್ಲ, ಬಿಪಿಎಲ್ ಕಾರ್ಡ್ ಹೊಂದಿರೋರು ಆದಾಯ ತೆರಿಗೆ, ಐಟಿ ರಿಟರ್ನ್, ವಾಣಿಜ್ಯ ತೆರಿಗೆ ಪಾವತಿದಾರರು ಆಗಿರುವಂತಿಲ್ಲ, ಈ ನಡುವೆ ವೈಟ್ ಬೋರ್ಡ್ ಕಾರ್ಡ್ ಹೊಂದಿರುವಂತ ಬಿಪಿಎಲ್ ಕಾರ್ಡ್ ದಾರರ ಕಾರ್ಡುಗಳನ್ನು ಸದ್ಯಕ್ಕೆ ರದ್ದುಪಡಿಸೋದಿಲ್ಲ ಎಂಬುದಾಗಿಯೂ ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ ಸ್ಪಷ್ಟ ಪಡಿಸಿದ್ದರು.
ಹಾಗಾದ್ರೇ ನಿಮ್ಮ ಕಾರ್ಡ್ ರದ್ದು, ಚಾಲ್ತಿಯಲ್ಲಿ ಇದ್ಯಾ ಅಂತ ಈ ಕೆಳಗಿನ ವಿಧಾನದಿಂದ ಚೆಕ್ ಮಾಡಿ:
ಬಿಪಿಎಲ್ ಕಾರ್ಡ್ ದಾರರ ಆರ್ಥಿಕ ಸುಸ್ಥಿತಿಯನ್ನು ಆಧರಿಸಿ, ಕೆಲ ಮಾನದಂಡಗಳ ಪರಿಷ್ಕರಣೆಯ ನಂತ್ರ, ಆಹಾರ ಇಲಾಖೆಯಿಂದ ಕಾರ್ಡ್ (Ration Card) ರದ್ದುಪಡಿಸೋ ಪ್ರಕ್ರಿಯೆಯನ್ನು ಆರಂಭಿಸಿದೆ ಎನ್ನಲಾಗುತ್ತಿದೆ. ಹಾಗಾದ್ರೇ ನಿಮ್ಮ ಕಾರ್ಡ್ ರದ್ದು ಆಗಿದ್ಯೋ, ಚಾಲ್ತಿಯಲ್ಲಿ ಇದ್ಯ ಅಂತ ಈ ಕೆಳಗಿನ ಹಂತಗಳಿಂದ ಚೆಕ್ ಮಾಡಿ.
- ನೀವು ಆಹಾರ ಇಲಾಖೆಯ https://ahara.kar.nic.in/Home/EServices ಗೆ ಭೇಟಿ ನೀಡಿ.
- ಈ ಪುಟದಲ್ಲಿ ನಿಮ್ಮ ಜಿಲ್ಲೆ, ತಾಲೂಕು ಆಯ್ಕೆ ಮಾಡಿಕೊಳ್ಳಿ.
- ನಿಮ್ಮ ಕಾರ್ಡ್ ರದ್ದು ಆಗಿರೋ ಬಗ್ಗೆ ತಿಂಗಳವಾರು, ವರ್ಷವಾರು ಲೀಸ್ಟ್ ಓಪನ್ ಮಾಡಿ.
- ನೀವು ಓಪನ್ ಮಾಡಿದಂತ ಲೀಸ್ಟ್ ನಲ್ಲಿ ನಿಮ್ಮ ಕಾರ್ಡ್ ನಂಬರ್ ಇದ್ಯಾ ಅಂತ ಚೆಕ್ ಮಾಡಿ.
- ನಿಮ್ಮ ಪಡಿತರ ಚೀಟಿಯ ಸಂಖ್ಯೆ ಇಲ್ಲದಿದ್ದರೇ, ನಿಮ್ಮ ಕಾರ್ಡ್ ರದ್ದುಗೊಂಡಿಲ್ಲ. ಚಾಲ್ತಿಯಲ್ಲಿ ಇದೆ ಅಂತ ಅರ್ಥ.
- ಒಂದು ವೇಳೆ ರೇಷನ್ ಕಾರ್ಡ್ ಸಂಖ್ಯೆ ಲೀಸ್ಟ್ ನಲ್ಲಿ ಇದ್ದರೇ, ರದ್ದಾಗಿದೆ ಅಂತ ಅರ್ಥ. ಆಗ ಮತ್ತೆ ಹೊಸ ರೇಷನ್ ಕಾರ್ಡ್ ಗಾಗಿ https://ahara.kar.nic.in/ ಮೂಲಕ ಅರ್ಜಿ ಸಲ್ಲಿಸಿ.
ಈ ಮಾಹಿತಿಯನ್ನು ಇತರರೊಂದಿಗೆ ಹಂಚಿಕೊಳ್ಳಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಮೆಂಟ್ ಮೂಲಕ ತಿಳಿಸಿ,
Also Read: Ration Card: ಪಡಿತರ ಚೀಟಿಗೆ ಹೆಸರು, ವಿಳಾಸ , ಯಜಮಾನಿಯನ್ನು ಸೇರಿಸುವ ನೇರ ವಿಧಾನ