ಸಾಮಾನ್ಯವಾಗಿ ಸರ್ಕಾರವು ಎಲ್ಪಿಜಿ ಸಿಲಿಂಡರ್ ಬೆಲೆನ ಪ್ರತಿ ತಿಂಗಳ ಮೊದಲನೇ ತಾರೀಖಿನಂದು ನಿಗದಿಪಡಿಸುತ್ತದೆ, ಆದರೆ ಈ ಬಾರಿ ಸರ್ಕಾರ ಮೊದಲ ದಿನಾಂಕ ಮೊದಲೇ ಸಿಲಿಂಡರ್ ಬೆಲೆನ 200 ರೂಪಾಯಿ ಕಡಿಮೆ ಮಾಡಿದೆ, ಕಂಪನಿಗಳು ಸೆಪ್ಟೆಂಬರ್ 1 ರಂದು ವಾಣಿಜ್ಯ ಸಿಲಿಂಡರ್ಗಳ ಬೆಲೆಯನ್ನು ಕಡಿಮೆ ಮಾಡಬಹುದು ಎಂದು ಮೊದಲು ನಿರೀಕ್ಷಿಸಲಾಗಿತ್ತು.
ಆಧಾರ್ ಕಾರ್ಡನ್ನು ಉಚಿತವಾಗಿ ಅಪ್ಡೇಟ್ ಮಾಡಬಹುದು, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ 14 ಸೆಪ್ಟೆಂಬರ್ 2023ರ ವರೆಗೆ ಆಧಾರ್ ದಾಖಲೆಗಳಲ್ಲಿ ಉಚಿತ ನವೀಕರಣ ಮಾಡಬಹುದು ಎಂದು ತಿಳಿಸಿದೆ, ಅಂದರೆ ನೀವು ಸೆಪ್ಟೆಂಬರ್ 14 ರವರೆಗೆ ನಿಮ್ಮ ಆಧಾರ್ ಕಾರ್ಡ್ ಗಳನ್ನು ಉಚಿತವಾಗಿ ನವೀಕರಿಸಬಹುದು.
2,000 ಗಳನ್ನು ವಿನಿಮಯ ಮಾಡಿಕೊಳ್ಳಲು ಕೊನೆಯ ದಿನ:
ಸಾವಿರ ರೂಪಾಯಿ ನೋಟುಗಳನ್ನು ಠೇವಣೆ ಇಡಲು ಅಥವಾ ಬದಲಾಯಿಸಿಕೊಳ್ಳಲು ಭಾರತೀಯ ರಿಸರ್ವ್ ಬ್ಯಾಂಕ್ 4 ತಿಂಗಳ ಕಾಲಾವಕಾಶ ನೀಡಿತ್ತು 2000 ನೋಟುಗಳನ್ನು ಸೆಪ್ಟೆಂಬರ್ 30ರೊಳಗೆ ಬ್ಯಾಂಕುಗಳಲ್ಲಿ ಬದಲಾಯಿಸಬಹುದು ಅಥವಾ ಠೇವಣಿ ಮಾಡಬಹುದಾಗಿದೆ.
ಸಣ್ಣ ಉಳಿತಾಯ ಯೋಜನೆಗಳಿಗಾಗಿ ಪ್ಯಾನ್ ಮತ್ತು ಆಧಾರ್ ಲಿಂಕ್:
ಇನ್ನು ಸಣ್ಣ ಉಳಿತಾಯ ಯೋಜನೆಗಳಿಗಾಗಿ ಖಾತೆದಾರರು ಸೆಪ್ಟೆಂಬರ್ 30 ರೊಳಗೆ ಆಧಾರ್ ಪಾನನ್ನು ಲಿಂಕ್ (Aadhaar-PAN Link) ಮಾಡುವುದು ಕಡ್ಡಾಯವಾಗಿದೆ, ನೀವು ಇದನ್ನು ಮಾಡದಿದ್ದರೆ ನಿಮ್ಮ ಖಾತೆಯನ್ನು ಬಂದ್ ಮಾಡಲಾಗುತ್ತದೆ.
ಡಿಮ್ಯಾಟ್ ನಾಮನಿರ್ದೇಶನ:
ಸೆಕ್ಯೂರಿಟಿಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ಟ್ರೇಡಿಂಗ್ ಮತ್ತು ಡಿಮ್ಯಾಟ್ ಕಾತೆದಾರರಿಗೆ ನಾಮ ನಿರ್ದೇಶನ ಮಾಡಲು ಅಥವಾ ನಾಮನಿರ್ದೇಶನವನ್ನು ಬದಲಾಯಿಸಲು ಸೆಪ್ಟೆಂಬರ್ 30 2023ರ ವರೆಗೆ ಕಾಲಾವಕಾಶವಿದೆ.
ಎಸ್ ಬಿ ಐ ವಿ ಕೇರ್ ಸ್ಕೀಮ್:
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಿರಿಯ ನಾಗರಿಕರಿಗಾಗಿ ತನ್ನ ವಿಶೇಷ FD ಯೋಜನೆ ಎಸ್‌ಬಿಐ ವಿಕೆ ನಲ್ಲಿ ಹೂಡಿಕೆ ಮಾಡಲು ಗಡುವನ್ನು 30 ಸೆಪ್ಟೆಂಬರ್ 2023 ವರೆಗೆ ವಿಸ್ತರಿಸಿದೆ, ಇದರಲ್ಲಿ ಹೂಡಿಕೆ ಮಾಡಲು ಬಯಸುವ ಯಾವುದೇ ಹಿರಿಯ ನಾಗರಿಕರು ತಮ್ಮ ಹಣವನ್ನು ಸೆಪ್ಟೆಂಬರ್ 30ರವರೆಗೆ ಹೂಡಿಕೆ ಮಾಡಬಹುದಾಗಿದೆ, ಇನ್ನು ಈ ಯೋಜನೆಯಲ್ಲಿ ಹಿರಿಯ ನಾಗರಿಕರು ಶೇಕಡಾ 7.50 ಬಡ್ಡಿ ದರವನ್ನು ಪಡೆಯಬಹುದಾಗಿದೆ.