KSRTC: ಶಕ್ತಿ ಯೋಜನೆ ಬಗ್ಗೆ KSRTC ಯಿಂದ ಅಧಿಕೃತವಾಗಿ ಇನ್ನೊಂದು ವರದಿ ಬಿಡುಗಡೆ

Advertisement
ಕಾಂಗ್ರೆಸ್ (Congress) ಗ್ಯಾರಂಟಿ ಯೋಜನೆ ಗಳು ಒಂದೊಂದಾಗಿ ಜಾರಿಗೆ ಬರುತ್ತಿದೆ, ನಿನ್ನೆ ಯಷ್ಟೆ ಗೃಹಲಕ್ಷ್ಮಿ (Gruha Lakshmi) ಯೋಜನೆ ಕೂಡ ಜಾರಿಗೆ ಬಂದಿದೆ, ಮಹಿಳೆ ಯರು ಕೂಡ ಗ್ರಾಮ ಪಂಚಾಯತ್ ನಲ್ಲಿ ಚಾಲನೆನೀಡಿ ಖುಷಿ ಪಟ್ಟಿದ್ದಾರೆ, ಈ ಬಾರಿ ಕಾಂಗ್ರೆಸ್ ಮಹಿಳಾ ಅಭಿವೃದ್ಧಿ ಪರಕಾರ್ಯ ಚಟುವಟಿಕೆ ಗಳನ್ನು ಹೆಚ್ಚಾಗಿಯೇ ಮಾಡುತ್ತೀವೆ, ಅದರಲ್ಲೂ ಮೊದಲು ಆರಂಭ ಮಾಡಿದ ಯೋಜನೆ ಎಂದರೆ ಶಕ್ತಿ ಯೋಜನೆ, ಇದಕ್ಕೆ ಬಹಳಷ್ಟು ಉತ್ತಮ ಬೆಂಬಲ ಕೂಡ ಮಹಿಳೆಯರು ನೀಡಿದ್ದಾರೆ, ಕೇವಲ ಮಹಿಳೆ ಯರು ಬಳಕೆ ಮಾಡಿಕೊಳ್ಳುವುದಲ್ಲದೆ ಸಾರಿಗೆ ನಿಗಮ ಗಳ ಅಭಿವೃದ್ಧಿ ಕೂಡ ಸಾಗ್ತ ಇದೆ ಎನ್ನಬಹುದು.
ಹೆಚ್ಚಾದ ಸಂಚಾರ:
ಸರ್ಕಾರಿ ಬಸ್ (KSRTC) ಗಳಲ್ಲಿ ಮಹಿಳಾ ಪ್ರಯಾಣಿಸುವವರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ, ಹೆಚ್ಚಾದಂತೆ ಆದಾಯವು ಶೇ 20 ರಿಂದ 40 ಪ್ರತಿಶತದಷ್ಟು ಹೆಚ್ಚಾಗಿದೆ. ಇಂದು ಮಹಿಳೆಯರು ಮನೆಯಿಂದ ಬಂದು ಹೊರ ಪ್ರಪಂಚ ಕೂಡಾ ನೋಡ್ತಾ ಇದ್ದಾರೆ, ಮಹಿಳಾ ಪ್ರಯಾಣಿಕರ ಸಂಖ್ಯೆ ಮಾತ್ರವಲ್ಲದೆ ಹಣ ಪಾವತಿಸುವ ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ.
ನಿಗಮಗಳು ಸ್ವಾವಲಂಬಿಯಾಗಲು ಸಹಾಯ:
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುವುದರಿಂದ ಸಾರಿಗೆ ನಿಗಮ ಗಳು ಕೂಡ ಅಭಿವೃದ್ಧಿ ಕಾಣ್ತಾ ಇದೆ, ಈ ಯೋಜನೆ ಯಿಂದ ಕರ್ನಾಟಕದ ದೇವಾಲಯಗಳ ಆದಾಯವೂ ಹೆಚ್ಚು ಆಗಿದೆ, ಉಚಿತ ಬಸ್ ಇರುವುದರಿಂದ ಮುಜರಾಯಿ ದೇಗುಲಗಳಿಗೆ ಭಕ್ತರ ಭೇಟಿ ಹೆಚ್ಚಾಗಿದೆ, ಶಕ್ತಿ ಯೋಜನೆ ಯಿಂದ ಸಾರಿಗೆ ನಿಗಮಗಳು ಸ್ವಾವಲಂಬಿಯಾಗಿ ಹೆಚ್ಚು ಆದಾಯ ಗಳಿಸಲು ಸಿದ್ದವಾಗಿವೆ
ಎಷ್ಟು ಮಹಿಳೆಯರು:
ಈ ಯೋಜನೆ ಜಾರಿಗೊಂಡು ಮೂರು ತಿಂಗಳು ಆಗಿದೆ, ಮಹೀಳಾ ಪ್ರಯಾಣಿಕರ ಸಂಖ್ಯೆ ದಿನ ದಿಂದ ದಿನಕ್ಕೆ ಹೆಚ್ಚು ಆಗಿದೆ, ಈ ಯೋಜನೆ ಆರಂಭವಾದ ದಿನದಿಂದ ಸುಮಾರು 44 ಲಕ್ಷಕ್ಕೂ ಹೆಚ್ಚು ಮಹಿಳೆಯರು ಉಚಿತ ಬಸ್ ಸೌಲಭ್ಯ ಉಪಯೋಗಿಸಿ ಕೊಂಡಿದ್ದಾರೆ. ಮಹಿಳೆಯರು ತಮ್ಮ ಆಧಾರ್ ಕಾರ್ಡ್ ತೋರಿಸುವ ಮೂಲಕ ಉಚಿತ ಪ್ರಯಾಣ ಕೂಡ ಮಾಡಬಹುದಾಗಿದೆ.