Gruha Lakshmi: ಇಂತಹವರಿಗೆ ಗ್ರಹಲಕ್ಷ್ಮೀ ಹಣ ಬರಲ್ಲ! ಹೊಸ ಲಿಂಕ್ ನಲ್ಲಿ ನಿಮ್ಮ ಹೆಸರಿದೆಯೇ ಚೆಕ್ ಮಾಡಿ

Advertisement
ರಾಜ್ಯದ ಕಾಂಗ್ರೆಸ್ ಸರಕಾರದ ಅವಧಿಯ ಮಹತ್ವದ ಯೋಜನೆಯಾದ ಗೃಹಲಕ್ಷ್ಮೀ (Gruha Lakshmi Yojana) ಯೋಜನೆಗೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕು ಅನೇಕ ಫಲಾನುಭವಿಗಳಿಗೆ ಹಣ ಮಂಜೂರಾಗಿದೆ ಇನ್ನು ಅನೇಕರಿಗೆ ಹಣ ಇನ್ನೂ ಕೂಡ ಮಂಜೂರಾಗಿಲ್ಲ ಹಾಗಾಗಿ ಈ ನಿಟ್ಟಿನಲ್ಲಿ ಗೃಹಲಕ್ಷ್ಮೀ (Gruha Lakshmi) ಅನರ್ಹರು ಯಾರಿರಬಹುದು ಎಂಬ ಪ್ರಶ್ನೆ ಕೂಡ ಎಲ್ಲರನ್ನು ಕಾಡುತ್ತಿದ್ದು ಈ ಬಗ್ಗೆ ಮಾಹಿತಿ ಇಲ್ಲಿದೆ.
ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಚಾಲನೆ ನೀಡಿದ್ದು ಅನೇಕರಿಗೆ ಗೃಹಲಕ್ಷ್ಮೀ ಯೋಜನೆಯ ಅಡಿಯಲ್ಲಿ ಹಣ ಮಂಜೂರಾಗಿದೆ. ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಇನ್ನಿತರ ಭಾಗದಿಂದ ಜನಸಾಗರ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebalkar), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಇನ್ನಿತರ ಕಾಂಗ್ರೆಸ್ ವರಿಷ್ಠರು ಈ ಸಭೆಯಲ್ಲಿ ನೆರೆದಿದ್ದರು ಅನೇಕರಿಗೆ ನಿನ್ನೆಯಿಂದ ಹಣ ಜಮಾವಣೆ ಆಗಿದೆ ಆದರೆ ಇನ್ನಿತರರ ಖಾತೆಗೆ ಹಣ ಬಂದಿಲ್ಲ ಹಾಗಾಗದೃ ಅವರು ಅನರ್ಹರೆ ಎಂಬ ಪ್ರಶ್ನೆ ಸಹ ಕಾಡಲಿದೆ.
ಯಾರಾಗ್ತಾರೆ ಅನರ್ಹರು?
ಬಿಪಿಎಲ್, ಅಂತ್ಯೋದಯ ಕಾರ್ಡ್ ಹೊಂದಿರದೇ ಇದ್ದವರಿಗೆ ಅನರ್ಹತೆಯ ಸ್ಥಾನ ಸಿಗಬಹುದು.
- ತೆರಿಗೆ ಪಾವತಿದಾರರು.
- 5ಎಕರೆಗೂ ಮೀರಿ ಒಣ ಭೂಮಿ ಹೊಂದಿದ್ದವರು.
- ನಾಲ್ಕು ಚಕ್ರದ ವಾಹನ ಹೊಂದಿದ್ದವರಿಗೆ ಅನರ್ಹತೆ ಇರಲಿದೆ.
- ಸರಕಾರಿ ಉದ್ಯೋಗ ಹಾಗೂ ಪೆನ್ ಶನ್ ಪಡೆಯುವವರನ್ನು ಅರ್ಹತೆಯ ಪಟ್ಟಿಯಿಂದ ಹೊರಗಿಡುವ ಸಾಧ್ಯತೆ ಇದೆ.
- ಅಂಗನವಾಡಿ ಮತ್ತು ಆಶಾ ಕಾರ್ಯ ಕರ್ತರು ಅರ್ಹರೆಂದು ಸರಕಾರ ಹೇಳಿದರೂ ಅವರು ಕೂಡ ಅನರ್ಹರಾಗುವ ಸಾಧ್ಯತೆ ಇದೆ.
- GST ರಿಟರ್ನ್ ಫೈಲ್ ಮಾಡೋ ಮಹಿಳೆಯರು ಅನರ್ಹರು.
ತಿಳಿಯುವುದು ಹೇಗೆ?
ಆಹಾರ ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಬಳಿಕ ಮೂರು ಡಾಟ್ ಅಲ್ಲಿ ಕ್ಲಿಕ್ ಮಾಡಿದರೆ e Ration Card ಎಂದು ತೋರಿಸುತ್ತದೆ. ಅದರಲ್ಲಿ Show Cancelled / Suspended ಎಂಬ ಆಯ್ಕೆ ಇದೆ. ಬಳಿಕ ಲೀಸ್ಟ್ ಓಪನ್ ಆಗಿ ನಿಮ್ಮ ಜಿಲ್ಲೆ ತಿಂಗಳು / ತಾಲೂಕನ್ನು ಆಯ್ಕೆ ಮಾಡಿಕೊಳ್ಳಿ. ಹಾಗೇ ಅನರ್ಹರ ಪಟ್ಟಿ ಇರುತ್ತದೆ ಮತ್ತು ಅದರಲ್ಲಿ ರದ್ದು ಆಗಿರುವುದಕ್ಕೆ ಕೆಲ ಕಾರಣ ನೀಡಬೇಕಾಗುತ್ತದೆ. ಗೃಹಲಕ್ಷ್ಮೀ ಯೋಜನೆ (Gruha Lakshmi Yojana) ಗೆ ಅರ್ಹರಿಗೆ ಮಾತ್ರ ಸೌಲಭ್ಯ ಸಿಕ್ಕೆ ಸಿಗುತ್ತದೆ.
ಒಟ್ಟಾರೆಯಾಗಿ ಯೋಜನೆಯ ಫಲಾನುಭವಿ ಆಗಿದ್ದಾರೆ ಅಥವಾ ಇಲ್ಲ ಎಂಬ ಅನುಮಾನ ಇದ್ದರೆ ಮನೆಯಲ್ಲೇ ಕೂತು ಯೋಜನೆಗೆ ಅರ್ಜಿ ಸಲ್ಲಿಕೆ ಸರಿ ಆಗಿದೆಯೇ ಅಥವಾ ಸಮಸ್ಯೆ ಆಗಿದೆಯೇ ಎಂಬುದನ್ಮು ನೋಡಬಹುದು ಸಮಸ್ಯೆ ಅರಿತು ಸರಿಪಡಿಸಿಕೊಳ್ಳ ಬಹುದು.