Water: ದಿನಕ್ಕೆ 5 ಲೋಟ ನೀರು ಕುಡಿಯುವವರಿಗೆ ಈ ರೋಗಗಳೇ ಬರಲ್ಲ, ಖಚಿತ ಪಡಿಸಿದ ತಜ್ಞರು

Advertisement
ತಮಗೆ ಗೊತ್ತಾ? ಪ್ರತಿ ವರುಷ ಅಕ್ಟೋಬರ್ 29ರಂದು ಪ್ರಪಂಚಾದದ್ಯಂತ (Worldwide) ಪಾರ್ಶ್ವವಾಯುವಿನ(Paralysis) ಬಗ್ಗೆ ಅರಿವು ಮೂಡಿಸುವ ದಿನವನ್ನಾಗಿ ಆಚರಿಸಲಾಗುತ್ತಿದೆ.. ಇನ್ನು ಈ ಪಾರ್ಶ್ವವಾಯು ಎಂಬುದು ವಿಶ್ವಾದ್ಯಂತ ಎಲ್ಲಾ ವರ್ಗದ ಜನರನ್ನು (People) ಕೂಡ ಬಿಡದೆ ಕಾಡುತ್ತಿರುವ ರೋಗವಾಗಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆಯ (World Health Organization) ಅಂಕಿ-ಅಂಶಗಳ ಪ್ರಕಾರವಾಗಿ ಹೃದಯಾಘಾತದ (Heart Attack) ಬಳಿಕ ಜಗತ್ತಿನಲ್ಲಿ ಅತಿ ಹೆಚ್ಚು ಜನರನ್ನು ಅಸು ನೀಗಿಸುವ ರೋಗವಾಗಿ ಎರಡನೇ ಸ್ಥಾನದಲ್ಲಿದೆ
ಈ ರೋಗಕ್ಕೆ ಎಷ್ಟು ಮಂದಿ ತುತ್ತಾಗಿದ್ದಾರೆ ಗೊತ್ತಾ?
ಸರಿ ಸುಮಾರು 1.8 ಕೋಟಿ ಮಂದಿ ಪ್ರಪಂಚದಾದ್ಯಂತ ಈ ರೋಗಕ್ಕೆ ಪ್ರತಿವರುಷ ಕೂಡ ತುತ್ತಾಗುತ್ತಿದ್ದು 55 ಲಕ್ಷ ಜನರು ಈ ರೋಗದಿಂದ ಪ್ರತಿವರ್ಷ ಅಗಲುತ್ತಿದ್ದಾರೆ. ಇನ್ನು ಭಾರತದಲ್ಲಿಯೂ (India) ಪಾರ್ಶ್ವವಾಯುವಿನ ಹಾವಳಿ ಗಂಭೀರವಾಗಿಯೇ ಇದ್ದು ಐಸಿಎಂಆರ್ (ISMR) ಅಧ್ಯಯನದ ಪ್ರಕಾರ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ (Rural Areas) ಪಾರ್ಶ್ವವಾಯುವಿನಿಂದ ತುತ್ತಾಗುವವರ ಸಂಖ್ಯೆ ಕೂರಲಡ ಪ್ರತಿವರ್ಷ ಒಂದು ಲಕ್ಷಕ್ಕೆ 450 ಜನರಷ್ಟು. ಇನ್ನು ಈ ಸಂಖ್ಯೆ ದಾಖಲಾದ ಪ್ರಮಾಣವಾಗಿದ್ದು ದಾಖಲಾಗದೇ ಉಳಿದ ಸ್ಟ್ರೋಕ್‌ನ ಪ್ರಮಾಣ ಬಹುಶಃ ಇನ್ನೂ ಹೆಚ್ಚಿರಬಹುದು.
ಪಾರ್ಶ್ವವಾಯು ಆಯಾಯ ಕಡಿಮೆ ಮಾಡುವುದು ಹೇಗೆ?
ಸದ್ಯ ಹಾರ್ವರ್ಡ್ ಹೆಲ್ತ್ ಪ್ರಕಾರವಾಗಿ ನಿರ್ಜಲೀಕರಣದ ಚಿಹ್ನೆಗಳು ಕಡಿಮೆ ರಕ್ತದೊತ್ತಡ ಕಪ್ಪು ಮೂತ್ರ ತಲೆತಿರುಗುವಿಕೆ ದಿಗ್ಭ್ರಮೆ ಹಾಗೂ ದೌರ್ಬಲ್ಯವನ್ನು ಒಳಗೊಂಡಿರುತ್ತದೆ. ಇನ್ನು ಇದನ್ನು ತಪ್ಪಿಸಲು ಪ್ರತಿದಿನ ಕೂಡ ಕನಿಷ್ಠ ನಾಲ್ಕರಿಂದ ಆರು ಲೋಟ ನೀರು ಕುಡಿಯಬೇಕು. ಹೌದು ಲೋಮಾ ಲಿಂಡಾ ವಿಶ್ವವಿದ್ಯಾಲಯದ ಸಂಶೋಧನೆಯ ಪ್ರಕಾರವಾಗಿ ಪ್ರತಿದಿನ ಕನಿಷ್ಠ ಐದು ಲೋಟ ನೀರನ್ನು ಸೇವಿಸುವುದರಿಂದ ಪಾರ್ಶ್ವವಾಯು ಅಪಾಯವನ್ನು ಶೇಕಡಾ 53 ರಷ್ಟು ಕಡಿಮೆ ಮಾಡುತ್ತದೆ ಎನ್ನಲಾಗಿದೆ. ಇನ್ನು ರೋಗಿಯು ಪಾರ್ಶ್ವವಾಯು ಹೊಂದಿದ್ದರೆ ಅವರ ಫಲಿತಾಂಶಗಳನ್ನು ಕೂಡ ಇದು ಸಹಾಯ ಮಾಡುತ್ತದೆ.