Karnataka Times
Trending Stories, Viral News, Gossips & Everything in Kannada

Heart Attack: ಯುವಕರ ಹೃದಯಾಘಾತಕ್ಕೆ ಇದೇ ಕಾರಣ, ಉತ್ತರ ಕೊಟ್ಟ ತಜ್ಞರು

Advertisement

ನಮ್ಮ ಪ್ರತಿನಿತ್ಯದ ಕೆಲಸಗಳ ಒತ್ತಡಗಳಿಂದ (Stress of Work) ಹೃದಯದ (Heart) ಮೇಲೆ ಅತಿಯಾದ ಒತ್ತಡ ಹಾಕುತ್ತೇವೆ ಎನ್ನಬಹುದು. ಹೌದು ಇದೇ ಕಾರಣದಿಂದಾಗಿ ಹೃದಯದ ಸಮಸ್ಯೆಗಳು (Heart Problem) ಕಾಡುತ್ತಲೇ ಇರುತ್ತವೆ. ಇನ್ನು ಅದರಲ್ಲಿಯೂ ಕೂಡ ನಮ್ಮ ದಿನನಿತ್ಯದ ಜೀವನಶೈಲಿ (Lifestyle) ಮತ್ತು ಆಹಾರ (Food) ಕ್ರಮದಿಂದಾಗಿ ಈ ಹೃದಯ ಸಂಬಂಧಿ ಕಾಯಿಲೆಗಳು ಸಣ್ಣ ವಯಸ್ಸಿನವರಿಂದ ಹಿಡಿದು ವಯಸ್ಸಾದವರ ತನಕ ಕೂಡ ಪ್ರತಿಯೊಬ್ಬರನ್ನೂ ಕಾಡುತ್ತಲೇ ಇರುತ್ತವೆ.

ಪ್ರತಿ ವರುಷ ಎಷ್ಟು ಮಂದಿ ಅಸು ನೀಗುತ್ತಾರೆ ಗೊತ್ತಾ?

ಈ ಪಾಶ್ಚಿಮಾತ್ಯ ದೇಶಗಳಿಗೆ (Western country) ಹೋಲಿಸುವುದಾದರೆ ನಮ್ಮ ದೇಶದಲ್ಲಿ ಇದು ಇನ್ನೂ ಹೆಚ್ಚಾಗಿದ್ದು ಅದರಲ್ಲೂ ಕೂಡ ಸಣ್ಣ ವಯಸ್ಸಿನಲ್ಲಿ ಹೃದಯಾಘಾತ ಆಗುವ ಸಾಧ್ಯತೆ ಸಹ ಹೆಚ್ಚಾಗಿ ಬಿಟ್ಟಿದೆ. ಇನ್ನು ವಿಶ್ವ ಆರೋಗ್ಯ ಸಂಸ್ಥೆ (World Health Organization) ಹೇಳುವ ಪ್ರಕಾರವಾಗಿ ಪ್ರತೀ ವರ್ಷ ವಿಶ್ವದಾದ್ಯಂತ ಶೇಕಡ 30ರಷ್ಟು ಜನ ಹೃದಯಾಘಾತ ಸಂಬಂದಿ ಕಾಯಿಲೆಯಿಂದ ಅಗಲುತ್ತಿದ್ದಾರೆ.

ಹೃದಯಾಘಾತಕ್ಕೆ Food ಕಾರಣ!?

ಹೌದು ಜೀವನಶೈಲಿಯಲ್ಲಿನ ವಿಪರೀತ ಬದಲಾವಣೆ ಮತ್ತು ಆಹಾರ ಸೇವನೆಯಲ್ಲಿ (Food intake) ಬದಲಾವಣೆ ಇದರ ಜೊತೆಗೆ ದೈಹಿಕ ಚಟುವಟಿಕೆಯ ಕೊರತೆ ಮತ್ತು ವಿಪರೀತ ಮಾನಸಿಕ ಒತ್ತಡ ಹೃದಯದ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುತ್ತದೆ. ಅದರಲ್ಲಿಯೂ ಕೂಡ ತಜ್ಞರ ಪ್ರಕಾರ ಕರಿದ ಪದಾರ್ಥಗಳ ಸೇವನೆಯೇ ಹೃದ್ರೋಗಕ್ಕೆ ಮುಖ್ಯ ಕಾರಣವಾಗಿದ್ದು ಈ ಕಾರಣದಿಂದಾಗಿ ರಕ್ತನಾಳಗಳಲ್ಲಿ ಕೊಬ್ಬು ಸಂಗ್ರಹವಾಗುತ್ತದೆ ಹಾಗೂ ರಕ್ತದ ಹರಿವನ್ನು ಸಹ ತಡೆಯುತ್ತದೆ. ಇನ್ನು ಹೃದ್ರೋಗಕ್ಕೆ ಮತ್ತೊಂದು ಕಾರಣವೆಂದರೆ ಅತಿಯಾದ ಉಪ್ಪು ಸೇವನೆ ಎನ್ನಲಾಗಿದ್ದು ಉಪ್ಪಿನೊಂದಿಗೆ ಬಿಪಿ ಸಹ ಬರಬಹುದು. ಇದರಿಂದ ಹೃದಯ ಸ್ನಾಯುಗಳು ಗಟ್ಟಿಯಾಗುತ್ತವೆ.

ಆದಷ್ಟು ಇಂತಹ ಪದಾರ್ಥಗಳಿಂದ ದೂರವಾಗಿ:

ಸಕ್ಕರೆ ಹಾಗೂ ಪಾಲಿಶ್ ಇರುವಂತಹ ಆಹಾರಗಳನ್ನು ಸೇವಿಸುವುದು ಹೃದಯಾಘಾತಕ್ಕೆ ಕಾರಣ ಎಂದು ತಜ್ಞರು ಹೇಳುತ್ತಾರೆ. ಮೈದಾ ಸೇರಿದಂತೆ ರವೆ ಹಾಗೂ ಉಪಾದ ರವೆ ಮುಂತಾದವುಗಳಿಂದ ಮಾಡಿದ ಆಹಾರಗಳನ್ನು ಆದಷ್ಟು ತ್ಯಜಿಸಬೇಕಿದ್ದು ಇವು ರಕ್ತವನ್ನು ಬಹಳ ದಪ್ಪವಾಗಿಸುತ್ತದೆ.ಇನ್ನು ಫಾಸ್ಟ್ ಫುಡ್ ಸೇರಿದಂತೆ ಜಂಕ್ ಫುಡ್ ಸಹ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ. ಇನ್ನು ಇದಲ್ಲದೆ ಅಂತಹ ವಸ್ತುಗಳು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕೂಡ ಹೆಚ್ಚಿಸುತ್ತಿದ್ದು ಇದರಿಂದಾಗಿ ಹೃದಯಕ್ಕೆ ಸರಿಯಾಗಿ ರಕ್ತ ಪೂರೈಕೆಯಾಗದೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

Leave A Reply

Your email address will not be published.