Karnataka Times
Trending Stories, Viral News, Gossips & Everything in Kannada

Ginger Garlic Paste: ಈ ರೀತಿ ಮನೆಯಲ್ಲಿಯೇ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮಾಡಿದರೆ 180 ದಿನ ಹಾಳಾಗೋದಿಲ್ಲ.

ರುಚಿಕರ ಆಹಾರ (Delicious Food) ತಯಾರಿಸಲು ಕೆಲ ಅಗತ್ಯ ಸಾಮಾಗ್ರಿಗಳನ್ನು ಸೇರಿಸಲೇ ಬೇಕಾಗುತ್ತದೆ. ಅಂತಹ ಸಾಮಾಗ್ರಿಗಳಲ್ಲಿ ಶುಂಠಿ ಬೆಳ್ಳುಳ್ಳಿ ಪೇಸ್ಟ್ (Ginger Garlic Paste) ಕೂಡ ಒಂದು ಮಾಂಸಾಹಾರದಲ್ಲಿ ಇದರ ಬಳಕೆ ಅಧಿಕ ಎನ್ನುವ ಮಾತಿಲ್ಲ ಪಲಾವ್, ಟೋಮೆಟೊ ಪಲಾವ್, ಫ್ರೈಡ್ ರೈಸ್ (Palav, Tomato Palav, Fried Rice) ಇನ್ನು ಅನೇಕ ಖಾದ್ಯೆಗಳಲ್ಲು ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬಳಸುವುದು ಸಾಮಾನ್ಯವಾಗಿದೆ.

Advertisement

ಅಂಗಡಿಯಿಂದ ಖರೀದಿ ಮಾಡುವ ಪೇಸ್ಟ್ ಕೆಲವೊಮ್ಮೆ ಅಷ್ಟು ರುಚಿ ಸಿಗೊಲ್ಲ ಎಂದು ಈ ಮಿಶ್ರಣ ಮನೆಯಲ್ಲೇ ಮಾಡೋರು ಇದ್ದಾರೆ. ಆದರೆ ಮನೆಯಲ್ಲಿ ತಯಾರಿಸಿದ್ದು ಬೇಗ ಕೆಟ್ಟು ಹೋಗುತ್ತೆ ಅನ್ನೊ ಬೇಸರ ಪಡೊರು ಅಗತ್ಯ ಬಿದ್ದಾಗ ಮಾತ್ರ ಮಿಕ್ಸಿಯಲ್ಲಿ ಪೇಸ್ಟ್ ಮಾಡಿಕೊಳ್ಳುತ್ತಾರೆ. ಆದರೆ ನಾವಿಂದು ನೀಡೊ ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ದರೆ ಮನೆಯಲ್ಲಿ ಶುಂಠಿ ಬೆಳ್ಳುಳ್ಳಿಯ ಪೇಸ್ಟ್ (Ginger Garlic paste) ಬಳಸಿ ತುಂಬಾ ಕಾಲದ ವರೆಗೂ ಸಂಗ್ರಹಿಸಿಡಬಹುದಾಗಿದೆ.

Advertisement

ಪ್ರತಿ ಸಲ ಈ ಪೇಸ್ಟ್ ಮಾಡುವುದು ಕಷ್ಟದ ಕೆಲಸವಾಗಿದ್ದು ಈ ಒಂದು ಸರಳ ಉಪಾಯ ನೀವು ಮಾಡಿದರೆ ದೀರ್ಘಕಾಲದವರೆಗೆ ಪೇಸ್ಟ್ ಅನ್ನು ಸಂಗ್ರಹ ಮಾಡಿಡಬಹುದು. ಮೊದಲಿಗೆ 250 ಗ್ರಾಂ ಶುಂಠಿ (Ginger) ತೊಳೆದು ಅದರ ಸಿಪ್ಪೆ ತೆಗೆಯಬೇಕು ಬಳಿಕ 450 ಗ್ರಾಂ ಬೆಳ್ಳುಳ್ಳಿಯ (Garlic) ಸಿಪ್ಪೆ ತೆಗೆದು ರೆಡಿಯಾಗಿಡಬೇಕು.

Advertisement

ಮಾಡುವ ವಿಧಾನ:

Advertisement

ಮೊದಲು ನೀವು ಮಿಕ್ಸಿ ಜಾರಿಗೆ ಸ್ವಚ್ಛವಾಗಿರಿಸಿದ್ದ ಸಿಪ್ಪೆ ರಹಿತ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ ಬಳಿಕ ಅರ್ಧ ಚಮಚ ಉಪ್ಪು (Salt), ಮೂರು ಲವಂಗ (Cloves) ಹಾಗೂ 5 ಚಮಚ ಎಣ್ಣೆ (Oil) ಹಾಕಿ ಬಳಿಕ ಚೆನ್ನಾಗಿ ನುಣ್ಣಗೆ ರುಬ್ಬಿಕೊಳ್ಳಿ ಆಗ ಪೇಸ್ಟ್ ಒಂದು ಹದ ಬಂದಿದ್ದು ತಿಳಿಯುವುದು. ಇದರ ಸುವಾಸನೆ ಉತ್ತಮವಾಗಿದ್ದು ದೀರ್ಘಾವಧಿಯ ವರೆಗೆ ನೀವು ಬಳಕೆ ಮಾಡಲು ಉಪಯುಕ್ತವಾಗಿದೆ.

ವಿಶೇಷ ಸೂಚನೆ:

ಈ ಒಂದು ಪೇಸ್ಟ್ ಅನ್ನು ಪ್ಲಾಸ್ಟಿಕ್ ಪಾತ್ರೆಯಲ್ಲಿ (Plastic Container) ಇಡಬೇಡಿ ಅದು ಹಾಳಾಗಬಹುದು. ಅದೇ ರೀತಿ ಉಪ್ಪು ಕೂಡ ಚಿಟಿಕೆ ಸಾಕು ಇಲ್ಲವಾದಲ್ಲಿ ಬೇರೆ ಅಡುಗೆಗೆ ಅದು ಹೆಚ್ಚುವರಿ ಆಗುವ ಸಾಧ್ಯತೆ ಇದೆ. ತೇವ ಇರುವ ನೀರಿನ ಪಸೆ ಇರುವ ಪಾತ್ರಕ್ಕೆ ಹಾಕಬೇಡಿ ಚೆನ್ನಾಗಿ ಒಣಗಿದ್ದ ಪಾತ್ರೆಯಲ್ಲಿ ಇಟ್ಟರೆ ಬಾಳ್ವಿಕೆ ಕೂಡ ಚೆನ್ನಾಗಿರುವುದು. ಹಾಗಾಗಿ ಗಾಜಿನ ಪಾತ್ರಗೆ ಗಾಳಿಯಾಡದಂತೆ ಬಿಗಿಯಾಗಿಟ್ಟರೆ 6ತಿಂಗಳು ಬಳಕೆ ಮಾಡಬಹುದು ಇಲ್ಲ ಫ್ರಿಡ್ಜ್ (Fridge) ನಲ್ಲಿಯೂ ಸಹ ಇಡಬಹುದು.

If you make ginger garlic paste at home in this way it will not spoil for 180 days

Leave A Reply

Your email address will not be published.