ಬೇಸಿಗೆ ಕಾಲ (Summer Season) ಪ್ರಾರಂಭವಾಯಿತೆಂದರೆ ಅದೆಷ್ಟೋ ಮಂದಿ ಜೀವನವೇ (Life) ನರಕ ಎಂಬಂತೆ ಮುಖ ಕಿವುಚುತ್ತಾರೆ. ಹೌದು ಈ ವರುಷವಂತು ಸೂರ್ಯನ ಶಾಖ (Heat Of Sun) ಮತ್ತಷ್ಟು ಜೋರಾಗಿದ್ದು ಮದ್ಯಾಹ್ನ (Afternoon) ಸಮಯದಲ್ಲಿ ಮನೆಯೊಂದ ಹೊರ ಹೋಗುವುದಕ್ಕೆ ಹಿಂಸೆಯಾಗುತ್ತದೆ. ಇನ್ನು ಮೇನೆಯಲ್ಲಿ ಪ್ಯಾನ್ (Fan) ಹಾಕಿಕೊಂಡು ಆರಾಮಾಗಿ ಕೂರೋಣ ಎಂದರೆ ಒಂದು ತಾಸಗಾಗುತ್ತಿದ್ದಂತೆ ಅದು ಸಹ ಬಿಸಿ ಗಾಳಿ ಬೀಸುತ್ತದೆ. ಹೀಗೆ ಬೇಸಗೆಕಾಲದಲ್ಲಿ ಮಕ್ಕಳು ರೆಜೆ (Holiday) ಸಿಗುತ್ತದೆ ಎಂದು ಸಂತಸ ಪಟ್ಟರೆ ಮಿಕ್ಕರೆಲ್ಲಾ ಬಂತಲ್ಲಾ ಬೇಸಿಗೆ ಕೆಟ್ಟ ಬಿಸಿಲು (Sunny)
ಎನ್ನುತ್ತಾರೆ. ಇನ್ನು ಈ ಬೇಸಿಗೆ ಕಾಲದಲ್ಲಿ ಬಹಳ ದಣಿವಾಗುವ (Fatigue) ಕಾರಣ ತಂಪು ಪಾನೀಯ ಮೊರೆ ಹೋಗುವವರು ಜಾಸ್ತಿ. ಇನ್ನು ಬೇಸಿಗೆಯಲ್ಲಿ ಪ್ರತಿದಿನ ಮೊಟ್ಟೆ(Egg) ತಿನ್ನಬೇಕಾ? ಬೇಡವಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ..
ಬೇಸಿಗೆಯಲ್ಲಿ Eggs ತಿನ್ನುವುದು ಒಳ್ಳೆಯದೇ:
ಸಾಮಾನ್ಯವಾಗಿ ಮೊಟ್ಟೆ ತಿನ್ನೋದು ಆರೋಗ್ಯಕ್ಕೆ(Health) ಒಳ್ಳೆಯದಾಗಿದ್ದು ಆರೋಗ್ಯ ತಜ್ಞರು (Health Experts) ಪ್ರತಿದಿನ ಮೊಟ್ಟೆ ತಿನ್ನಲು ಸಲಹೆ ನೀಡುತ್ತಾರೆ. ಹೌದು ಜನರು ಕೂಡ ಬಗೆ ಬಗೆಯ ಮೊಟ್ಟೆ ಖಾದ್ಯ (Egg Dish) ತಿನ್ನಲು ಇಷ್ಟಪಡುತ್ತಿದ್ದು ಇನ್ನೂ ಕೆಲವರು ದಿನಕ್ಕೆ 4 ರಿಂದ 5 ಮೊಟ್ಟೆಗಳನ್ನು ತಿನ್ನುತ್ತಾರೆ. ಆದರೆ ಬೇಸಿಗೆಯಲ್ಲಿ ಹೆಚ್ಚು ಮೊಟ್ಟೆ ತಿನ್ನುವುದು ಆರೋಗ್ಯಕ್ಕೆ ನಿಜಕ್ಕೂ ಹಾನಿಕಾರಕ (Harmful to Health) ಎಂಬ ವಿಷಯ ನಿಮಗೆ ಗೊತ್ತಿದೆಯಾ? ಅತಿ ಹೆಚ್ಚು ಮೊಟ್ಟೆ ತಿನ್ನುವುದರಿಂದ ಏನೆಲ್ಲಾ ಅಪಾಯಗಳು ಉಂಟಾಗುತ್ತವೆ ಅನ್ನೋ ಮಾಹಿತಿ ಇಲ್ಲಿದೆ..
ಮೊಟ್ಟೆ ಹಾನಿಕಾರಕವೇ!?
ಇನ್ನು ಮೆಡಿಸರ್ಕಲ್‌ನಲ್ಲಿ (Medicircle) ಪ್ರಕಟವಾದ ವರದಿಯ ಪ್ರಕಾರವಾಗಿ ಸಾಲ್ಮೊನೆಲ್ಲಾ (Salmonella) ಎಂಬ ಬ್ಯಾಕ್ಟೀರಿಯಾವು (Bacteria) ಈ ಮೊಟ್ಟೆಗಳಲ್ಲಿ ಕಂಡುಬರುತ್ತದೆ. ಯಾಕೆಂದರೆ ಇದು ಕೋಳಿಯಿಂದ (Hen) ಬರುವ ಕಾರಣ. ನೀವು ಮೊಟ್ಟೆಯನ್ನು ಸರಿಯಾಗಿ ಕುದಿಸದಿದ್ದರೆ ಈ ಬ್ಯಾಕ್ಟೀರಿಯಾಗಳು ನಿಮ್ಮ ದೇಹವನ್ನು ಪ್ರವೇಶಿಸಿ ನಿಮ್ಮ ಆರೋಗ್ಯಕ್ಕೆ ಖಂಡಿತ ಹಾನಿ ಮಾಡುತ್ತದೆ. ಈ ಕಾರಣದಿಂದಾಗಿ ಮೊಟ್ಟೆಯನ್ನು ಬೇಯಿಸಿ(Boil) ತಿನ್ನಿ. ಇನ್ನು ಬೇಸಿಗೆಯಲ್ಲಿ ಮೊಟ್ಟೆ ಹೆಚ್ಚು ಮೊಟ್ಟೆ ತಿನ್ನುವುದು ಆರೋಗ್ಯದ ಮೇಲೆ ಕೆಲವೊಂದು ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದ್ದು ಮೊಟ್ಟೆಯಲ್ಲಿ ಪ್ರೊಟೀನ್ (Protein) ಅಧಿಕವಾಗಿರುವುದರಿಂದ ಹೆಚ್ಚು ಮೊಟ್ಟೆಗಳನ್ನು ತಿನ್ನುವುದರಿಂದ ಮೂತ್ರಪಿಂಡದ (kidney) ಮೇಲೆ ಕೂಡ ನಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ಬೇಸಿಗೆಯಲ್ಲಿ ಮೊಟ್ಟೆ ಸೇವನೆ ಪ್ರಮಾಣ ಮಿತವಾಗಿರಬೇಕು.
ಈ ವ್ಯಕ್ತಿಗಳು Eggs ತಿನ್ನಲೇಬಾರದು:
ಇನ್ನು ಮೊಟ್ಟೆಯಲ್ಲಿ ಕೊಲೆಸ್ಟ್ರಾಲ್ (Cholesterol) ಸಹ ಇರಲಿದ್ದು ಈ ಸಂದರ್ಭದಲ್ಲಿ ಅಧಿಕ ಕೊಲೆಸ್ಟ್ರಾಲ್ (Cholesterol) ಇರುವವರು ಕೂಡ ಇದನ್ನು ದಿನನಿತ್ಯ ತಿನ್ನಬಾರದು. ಹೃದ್ರೋಗದ ಅಪಾಯ ಹೆಚ್ಚಾಗಲಿದೆ. ಇನ್ನು ಕೆಲವರಿಗೆ ಮೊಟ್ಟೆಯಿಂದಲೂ ಅಲರ್ಜಿ ಇರಲಿದ್ದು ಇಂತಹವರು ಮೊಟ್ಟೆ ಖಾದ್ಯಗಳಿಂದ ದೂರ ಇರಬೇಕು. ಇನ್ನು ನಿಯಮಿತವಾಗಿ ಮೊಟ್ಟೆ ತಿನ್ನೋದರಿಂದ ಅಡ್ಡ ಪರಿಣಾಮಗಳು ಉಂಟಾಗುವುದಿಲ್ಲ. ನಿಮಗೆ ಗೊತ್ತೆ? ಮೊಟ್ಟೆ ಸರಿಯಾಗಿ ಬೇಯಿಸದೇ ತಿಂದು ಬಿಟ್ಟರೆ ಹೊಟ್ಟೆ ಉಬ್ಬುವಿಕೆ ವಾಂತಿ ಸೇರಿದಂತೆ ಅಜೀರ್ಣತೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು (Health Problems) ಕೂಡ ಕಾಣಿಸಿಕೊಳ್ಳುತ್ತವೆ. ಈ ಕಾರಣದಿಂದಾಗಿ ಅಡುಗೆ ಮಾಡುವಾಗ ಮೊಟ್ಟೆ ಸರಿಯಾಗಿ ಬೇಯಿಸಬೇಕಿದೆ.