Heart Attack: ಕೊರೋನಾ ಲಸಿಕೆಗೂ ಹೃದಯಾಘಾತಕ್ಕೂ ಸಂಬಂಧ ಇದೆಯಾ? ಹೊರಬಂತು ರಿಪೋರ್ಟ್
ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಆಗುವವವರ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿದೆ. ಹೃದಯಾಘಾತ ಆಗುವುದಕ್ಕೆ ಯಾವುದೇ ವಯಸ್ಸಿನ ವ್ಯಾತ್ಯಾಸ ಇಲ್ಲ. 12 ವರ್ಷದ ಮಕ್ಕಲೀಗೂ ಕೂಡಾ ಇಂದು ಹೃದಯಾಘಾತ (Heart Attack) ಕಾಡುತ್ತಿದೆ. ಅದರಲ್ಲಿಯೂ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಮೃತರಾದ ನಂತರ ಜನರಿಗೆ ಹೃದಯಾಘಾತದ ಬಗ್ಗೆ ಹೆಚ್ಚಿನ ಆತಂಕ ಮನೆ ಮಾಡಿದೆ.
ಅದರಲ್ಲಿಯೂ ಕೊರೋನ (Corona) ಬಂದು ಹೋದ ನಂತರದಲ್ಲಿ ಹೃದಯಾಘಾತ (Heart Attack) ದ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಲಾಗುತ್ತಿದೆ. ಅದರಲ್ಲಿಯೂ ವಿಶೇಷವಾಗಿ, ಹೃದಯಾಘಾತ ಪ್ರಕರಣಗಳ ಹೆಚ್ಚಳದಿಂದ ಕರೋನವೈರಸ್ ಲಸಿಕೆ (Coronavirus Vaccine) ಯ ಪರಿಣಾಮವು ಏನಾದರೂ ಇದೆಯೇ ಎಂಬ ಬಗ್ಗೆ ಅನೇಕ ಅನುಮಾನಗಳು ಜನರಲ್ಲಿ ಮೂಡಿವೆ. ಲಸಿಕೆ ಪಡೆದವರಲ್ಲಿ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ ಎನ್ನಲಾಗಿದೆ, ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ (Central Govt) ದ ಮುಂದಾಳತ್ವದಲ್ಲಿ ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ಸಂಶೋಧನೆ ನಡೆಸುತ್ತಿದೆ.
ಇತ್ತೀಚಿನ ಅಧ್ಯಯನದ ಪುಕಾರ, ಹೃದಯಾಘಾತದ ಅಪಾಯದ ನಡುವೆ ಯಾವುದೇ ಸಂಬಂಧವಿಲ್ಲ. ಭಾರತದಲ್ಲಿ ತಯಾರಿಸಿದ ಕೊರೊನಾವೈರಸ್ ಲಸಿಕೆಗಳು ಸುರಕ್ಷಿತವಾಗಿವೆ. ಆದಾಗ್ಯೂ, ಈ ನಿಟ್ಟಿನಲ್ಲಿ ವರದಿ. ಪಿಎಲ್‌ಒಎಸ್ ಒನ್ (PLoS One) ಜರ್ನಲ್ನಲ್ಲಿ ಪ್ರಕಟಿಸಲಾಗಿದೆ. ಭಾರತದ ಲಸಿಕೆಗಳು ಸುರಕ್ಷಿತವಾಗಿವೆ. ದೇಶದಲ್ಲಿ ವರದಿಯಾಗುತ್ತಿರುವ ಹೃದಯಾಘಾತ (Heart Attack) ಕ್ಕೂ ಲಸಿಕೆಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ತಿಳಿಸಿದೆ.
ಕರೋನವೈರಸ್ (Coronavirus) ವಿರುದ್ಧ ಲಸಿಕೆ ಪಡೆದವರಲ್ಲಿ ಹೃದಯಾಘಾತ (Heart Attack) ದ ಸಾವುಗಳು ಕಡಿಮೆ ಎಂದು ಕಂಡುಬಂದಿದೆ. ಅಧ್ಯಯನದ ನೇತೃತ್ವ ವಹಿಸಿದ್ದ ಜಿಬಿ ಪಂತ್ ಆಸ್ಪತ್ರೆಯ ಮೋಹಿತ್ ಗುಪ್ತಾ ಹೇಳಿದರು. “ಲಸಿಕೆ ಪಡೆದ ನಂತರ ತೀವ್ರವಾದ ಹೃದಯ ಸ್ನಾಯುವಿನ ಊತಕವು ಎಂದಿಗೂ ಕಂಡುಬಂದಿಲ್ಲ ಎಂದು ನಮ್ಮ ಅಧ್ಯಯನವು ಕಂಡುಹಿಡಿದಿದೆ.
ಆಸ್ಪತ್ರೆಗೆ ದಾಖಲಾದ ಎಎಂಐ ರೋಗಿ (AMI Patient) ಗಳಲ್ಲಿ, ವಯಸ್ಸು, ಧೂಮಪಾನ ಮತ್ತು ಮಧುಮೇಹದಿಂದಾಗಿ ಸಾವಿನ ಅಪಾಯ ಹೆಚ್ಚು ಎಂದು ಕಂಡುಬಂದಿದೆ. ಇನ್ನೊಂದು ವಿಷಯವೆಂದರೆ ಇದು ಕೇಂದ್ರದಲ್ಲಿ ನಡೆಸಿದ ಅಧ್ಯಯನವಾಗಿದೆ ಎಂದಿದ್ದಾರೆ ಒಟ್ಟಾರೆ ಜನರಲ್ಲಿ ಮೂಡಿದ್ದ ಆತಂಕಕ್ಕೆ ಪೂರ್ಣ ವಿರಾಮ ಸಿಕ್ಕಿದ್ದು, ಕೊರೋನಾ ಲಸಿಕೆಗೂ ಹಾಗೂ ಹೃದಯಾಘಾತಕ್ಕೂ ಯಾವುದೇ ಸಂಬಂಧವಿಲ್ಲ ಎನ್ನಲಾಗಿದೆ.