Benifits of Tulsi: ತುಳಸಿ ಎಲೆಯ 9 ಆರೋಗ್ಯಕರ ಲಾಭಗಳು

Advertisement
ತುಳಸಿ ಎಲೆಯಲ್ಲಿ ಹಲವಾರು ರೀತಿಯ ಔಷಧೀಯ ಗುಣಗಳು ಇದೆ ಎಂದು ಹೇಳಲಾಗುತ್ತದೆ. ತುಳಸಿ ಗಿಡದ ಮಹತ್ವ ಎಷ್ಟು ಹೇಳಿದರು ಕಮ್ಮಿಯೆ.. ಈ ಎಲೆಯಿಂದ ಎಷ್ಟೆಲ್ಲ ಲಾಭಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
Advertisement
- ಒಂದು ಹಿಡಿಯಷ್ಟು ತುಳಸಿಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿ ಕುದಿಸಬೇಕು. ಅದು ಅರ್ಧ ಲೋಟದಷ್ಟು ಆದ ಮೇಲೆ ಅದಕ್ಕೆ ಬೆಲ್ಲ ಬೆರೆಸಿ ಪ್ರತಿ ಬಾರಿ ನಾಲ್ಕು ಚಮಚದಂತೆ ದಿನಕ್ಕೆ ಮೂರು ಬಾರಿ ಕುಡಿದರೆ ಜ್ವರ ಗುಣವಾಗುತ್ತದೆ. ಮಕ್ಕಳಿಗಾದರೆ ಒಂದು ಸಲಕ್ಕೆ ಎರಡು ಚಮಚ ಕುಡಿಸಬೇಕು.
- ತುಳಸಿ ಎಲೆ ಮತ್ತು ದೊಡ್ಡ ಪತ್ರೆ ಎಲೆಗಳನ್ನು ಜಜ್ಜಿ ಅರ್ಧ ಲೀಟರ್ ನೀರಿನಲ್ಲಿ ಕುದಿಸಿ ಅರ್ಧಕ್ಕಿಳಿದ ನಂತರ ಸ್ವಲ್ಲ ಉಪ್ಪು ಬೆರೆಸಿ ದಿನಕ್ಕೆ ಮೂರು ಸಲ ಊಟಕ್ಕೆ ಮುಂಚೆ ಕುಡಿದರೆ ಗಂಟಲು ನೋವು ವಾಸಿಯಾಗುತ್ತದೆ.
- ತುಳಸಿ ರಸಕ್ಕೆ ಹಸಿಶುಂಠಿ ರಸ ಸೇರಿಸಿ ಬಿಸಿ ಮಾಡಿ ಹೊತ್ತಿಗೆ ನಾಲ್ಕು ಚಮಚದಂತೆ ದಿನಕ್ಕೆ ಎರಡು ಬಾರಿ ಸೇವಿಸಿದರೆ ಹೊಟ್ಟೆ ನೋವು ಕಡಿಮೆ ಯಾಗುತ್ತದೆ.
- ತುಳಸಿ ಎಲೆಯನ್ನು ಜಜ್ಜಿ ಒಂದು ಲೋಟ ನೀರಿನಲ್ಲಿ ಹಾಕಿಟ್ಟು ಮುರ್ನಾಲ್ಕು ಗಂಟೆಯ ನಂತರ ಕುಡಿದರೆ ಅಜೀರ್ಣ ವ್ಯಾಧಿಯು ವಾಸಿಯಾಗುತ್ತದೆ.
- ತುಳಸಿ ಎಲೆಗಳನ್ನು ಜಜ್ಜಿ ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಿ,ಅದನ್ನು ಅಗಾಗ ಕುಡಿಯುತ್ತಿದ್ದರೆ ಉಬ್ಬಸ ಉಪಶಮನವಾಗುತ್ತದೆ.
- ತುಳಸಿ ಎಲೆಗಳನ್ನು ಬೆಳಗ್ಗೆ ಹಾಗೂ ರಾತ್ರಿ ಆಹಾರ ಸೇವನೆ ನಂತರ ಅಗಿದು ತಿನ್ನುತ್ತಿದ್ದರೆ ಬಾಯಿಯ ದುರ್ನಾತ ದೂರವಾಗುತ್ತದೆ.
- 20 ತುಳಸಿ ಎಲೆ, 5 ಕಾಳು ಮೆಣಸು ಎರಡನ್ನೂ ಸೇರಿಸಿ ಅರೆದು ಅದಕ್ಕೆ ಒಂದು ಚಮಚ ತುಪ್ಪ ಸೇರಿಸಿ ಬೆಳಿಗ್ಗೆ ರಾತ್ರಿ ಸೇವನೆ ಮಾಡಿದರೆ ಕೀಲು ನೋವು ಕಡಿಮೆ ಯಾಗುತ್ತದೆ.
- 10 ಗ್ರಾಂ ತುಳಸಿ ಬೀಜದ ಪುಡಿಗೆ ಒಂದು ಚಮಚ ಬೆಣ್ಣೆ ಮತ್ತು ಸ್ವಲ್ಪ ಬೆಲ್ಲ ಸೇರಿಸಿ ದಿನಕ್ಕೆರಡು ಸಲ ತಿಂದರೆ ಮೂಲವ್ಯಾಧಿ ಗುಣವಾಗುತ್ತದೆ.
- ತುಳಸಿ ಎಲೆ ಮತ್ತು ಬ್ರಾಹ್ಮಿ ಎಲೆಗಳನ್ನು ಅರೆದು ಇಸುಬು ( ಹುಳುಕಡ್ಡಿ) ಇರುವ ಜಾಗಕ್ಕೆ ಲೇಪಿಸಿದರೆ ಇಸುಬು ವಾಸಿಯಾಗುತ್ತದೆ.
Advertisement