Karnataka Times
Trending Stories, Viral News, Gossips & Everything in Kannada

Dengue: ಡೆಂಗ್ಯೂ ಜ್ವರದ ಲಕ್ಷಣ ಇರುವ ಎಲ್ಲರಿಗೂ ಮಹತ್ವದ ಸೂಚನೆ ಕೊಟ್ಟ ಡಾಕ್ಟರ್ ಮಂಜುನಾಥ್!

advertisement

ಆರೋಗ್ಯವೇ ಮಹಾ ಭಾಗ್ಯ ಎನ್ನುವಂತಹ ಹಿರಿಯರ ಮಾತನ್ನು ನೀವು ಈಗಾಗಲೇ ಹೇಳಿರುತ್ತೀರಿ. ಹಣವನ್ನು ಸಂಪಾದನೆ ಮಾಡಬೇಕು ಎನ್ನುವಂತಹ ಬಿಸಿಲು ಕುದುರೆಯ ಓಟದಲ್ಲಿ ಪ್ರತಿಯೊಬ್ಬರು ಕೂಡ ಆರೋಗ್ಯವನ್ನು ಕೂಡ ಕಾಪಾಡಿಕೊಳ್ಳಬೇಕು ಎನ್ನುವಂತಹ ಮಾತನ್ನು ನೆನಪು ಬಿಟ್ಟಿರುತ್ತಾರೆ. ಅದರಲ್ಲೂ ವಿಶೇಷವಾಗಿ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಡೆಂಗ್ಯೂ ಕಾಟ ಹೆಚ್ಚಾಗಿದೆ. ಕರ್ನಾಟಕದಲ್ಲಿ ಅಂತ ಹೇಳುವುದಕ್ಕಿಂತ ಕರ್ನಾಟಕದ ರಾಜಧಾನಿಯಾಗಿರುವಂತಹ ಮಹಾನಗರ ಬೆಂಗಳೂರಿನಲ್ಲಿ ಇದರ ಕಾಟ ಹೆಚ್ಚಾಗಿದ್ದು ಸಾಕಷ್ಟು ಸಾ-ವು ನೋ-ವುಗಳ ಪ್ರಕರಣಗಳು ಕೂಡ ಈ ಕಾರಣದಿಂದಾಗಿ ಈಗಾಗಲೇ ರಿಪೋರ್ಟ್ ಆಗಿದೆ.

ಇದೇ ವಿಚಾರದ ಬಗ್ಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಆಗಿರುವಂತಹ ಡಾಕ್ಟರ್ ಮಂಜುನಾಥ್ ರವರು ಈ ವಿಚಾರದ ಬಗ್ಗೆ ಮಾತನಾಡುತ್ತಾ ಏನೇನು ಫ್ರೀ ನೀಡುವ ಬದಲು ಇಂತಹ ಡೆಂಗಿನಿಂದ (Dengue) ತಪ್ಪಿಸಿಕೊಳ್ಳುವುದಕ್ಕೆ ಸೊಳ್ಳೆ ಪರದೆಯನ್ನು ಉಚಿತವಾಗಿ ನೀಡಿದರೆ ಕನಿಷ್ಠಪಕ್ಷ ಅದ್ರಿಂದ ಸಾಮಾನ್ಯ ಜನರು ತಪ್ಪಿಸಿಕೊಳ್ಳಬಹುದು ಎಂಬುದಾಗಿ ಮಂಜುನಾಥ್ ರವರು ಹೇಳಿದ್ದಾರೆ.

 

Image Credit: India.Com

 

ಡೆಂಗ್ಯೂ (Dengue) ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ನೀಡುತ್ತಾ ಮಂಜುನಾಥ್ (Dr. Manjunath) ರವರು ಕೊನೆಯ ಸ್ಟೇಜ್ಗೆ ಹೋದಮೇಲೆ ಯಾರು ಕೂಡ ಏನು ಮಾಡೋದಕ್ಕೆ ಸಾಧ್ಯವಾಗುವುದಿಲ್ಲ ಹೀಗಾಗಿ ಅದು ಹರಡುವುದಕ್ಕಿಂತ ಮುಂಚೆ ಅದರ ಬಗ್ಗೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವುದು ಅತ್ಯಂತ ಮುಖ್ಯವಾಗಿರುತ್ತದೆ. ಡೆಂಗ್ಯೂ ಗೆ ನಿಖರವಾಗಿ ಯಾವುದೇ ರೀತಿಯ ಚಿಕಿತ್ಸೆ ಇರುವುದಿಲ್ಲ ಅದರ ಜೊತೆಗೆ ಬೇರೆ ಆರೋಗ್ಯ ಸಮಸ್ಯೆಗಳು ಕೂಡ ಜೊತೆಯಾಗಿ ಬರುತ್ತವೆ.

advertisement

ಕೆಲವೊಂದು ಕಡೆಗಳಲ್ಲಿ ಈ ಆರೋಗ್ಯ ಸಮಸ್ಯೆಯನ್ನು ಪತ್ತೆ ಹಚ್ಚುವುದಕ್ಕೆ ಕೂಡ ಹಣವನ್ನು ಪಡೆದುಕೊಳ್ಳುತ್ತಾರೆ ಅಂತಹ ಲ್ಯಾಬ್ ಗಳನ್ನು ಮುಚ್ಚಿಸಬೇಕು ಅನ್ನೋದಾಗಿ ಕೂಡ ಗುಡುಗಿದ್ದಾರೆ. ಡೆಂಗ್ಯೂ (Dengue) ಅನ್ನು ನಿಯಂತ್ರಣ ಮಾಡುವುದಕ್ಕೆ ನಗರ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ, ಜಂಟಿಯಾಗಿ ಸೇರಿ ಕಾರ್ಯಾಚರಣೆ ಮಾಡಬೇಕಾಗಿದೆ ಎನ್ನುವಂತಹ ಪ್ರಸ್ತಾವನೆಯನ್ನು ಕೂಡ ಮಂಜುನಾಥ್ (Dr. Manjunath) ರವರು ಇಟ್ಟಿದ್ದಾರೆ.

 

Image Credit: Continental Hospitals

 

ಇನ್ನು ಡೆಂಗ್ಯೂ ಬರೋವರ್ಗು ಕಾಯ್ಬೇಡಿ ನಿಮ್ಮ ಮನೆಯ ಸುತ್ತಮುತ್ತ ಇರುವಂತಹ ನೀರು ನಿಂತ ಪ್ರದೇಶಗಳನ್ನ ಸ್ವಚ್ಛ ಮಾಡಿ ಇಟ್ಟುಕೊಳ್ಳಿ ಹಾಗೂ ನಿಮ್ಮನ್ನು ಅದರಿಂದ ಕಾಪಾಡಿಕೊಳ್ಳುವಂತಹ ಮುಂಜಾಗ್ರತ ಕ್ರಮವನ್ನು ಯಾರಿಗಾಗಿ ಕಾಯದೇ ನೀವೇ ಖುದ್ದಾಗಿ ಮಾಡಿ ಎಂಬುದಾಗಿ ಕೂಡ ಹೇಳಿದ್ದಾರೆ.

ಮಳೆಗಾಲ ಬರೋದಕ್ಕಿಂತ ಮುಂಚೆ ಬೇಸಿಗೆ ಕಾಲದಲ್ಲಿ ಇದನ್ನ ಯಾವ ರೀತಿಯಲ್ಲಿ ತಡೆಗಟ್ಟಬೇಕು ಎನ್ನುವಂತಹ ಮುಂಜಾಗ್ರತ ಕ್ರಮಗಳನ್ನು ಆರೋಗ್ಯ ಇಲಾಖೆಯವರು ಕೂಡ ಈ ಬಗ್ಗೆ ಎನ್ನುವ ಮಾತನ್ನು ಮಂಜುನಾಥ್‍ರವರು ಈ ಸಂದರ್ಭದಲ್ಲಿ ಆಡಿದ್ದು ಡೆಂಗ್ಯೂ ಬಗ್ಗೆ ಪ್ರತಿಯೊಬ್ಬರು ಕೂಡ ಅಗತ್ಯಕ್ಕಿಂತ ಹೆಚ್ಚಿನ ಮುಂಜಾಗ್ರತ ಕ್ರಮವನ್ನು ವಹಿಸಿಕೊಳ್ಳಬೇಕಾಗಿದೆ.

advertisement

Leave A Reply

Your email address will not be published.