Exercise: ಹೆಚ್ಚು ವರ್ಷ ಬದುಕಬೇಕು ಎನ್ನುವ ಆಸೆ ಇದ್ದವರು ದಿನಕ್ಕೆ ಇಷ್ಟು ಕಿಲೋಮೀಟರ್ ಓಡಬೇಕಂತೆ!
ತಾವು ಆರೋಗ್ಯವಂತರಾಗಿರಬೇಕು ತಮ್ಮ ಕೊನೆಯ ಉಸಿರಿರುವವರೆಗೂ ಯಾವುದೇ ಕಾಯಿಲೆ ಇಲ್ಲದೆ ಆರಾಮಾಗಿ ಬದುಕಬೇಕು ಜೊತೆಗೆ ಹೆಚ್ಚಿನ ಆಯಸ್ಸು ಕೂಡ ಇದ್ರೆ ಚೆನ್ನಾಗಿರುತ್ತೆ ಅಂತ ಎಲ್ಲರಿಗೂ ಅನ್ನಿಸೋದು ಸಹಜ. ಆದರೆ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳುವುದಕ್ಕೆ ನಾವು ಏನೆಲ್ಲಾ ಪ್ರಯತ್ನ ಮಾಡುತ್ತಿದ್ದೇವೆ ಎನ್ನುವುದು ಬಹಳ ಮುಖ್ಯ. ನಮ್ಮ ಜೀವನ ಕ್ರಮ ನಾವು ಸೇವಿಸುವ ಆಹಾರ ಎಲ್ಲವೂ ಉತ್ತಮವಾಗಿದ್ದಾಗ ಮಾತ್ರ ನಮ್ಮ ಆರೋಗ್ಯವೂ ಕೂಡ ಚೆನ್ನಾಗಿರುತ್ತೆ. ದಿನವೂ ಆರೋಗ್ಯಕರ ಆಹಾರ ಸೇವಿಸುವುದರ ಜೊತೆಗೆ ಕೆಲವೊಂದು ಅಭ್ಯಾಸವನ್ನು ಮೈಗೂಡಿಸಿಕೊಂಡರೆ ದೀರ್ಘಾಯುಷ್ಯಿಗಳಾಗಿ ಇರಬಹುದು ಅನ್ನೋದು ನಿಮಗೆ ಗೊತ್ತಾ.
ಶೇಕಡಾ 15% ಕಡಿಮೆ ಮಾಡುತ್ತೆ ದೀರ್ಘ ನಡಿಗೆ:
ಹೌದು ಮನುಷ್ಯ ಆರೋಗ್ಯವಂತನಾಗಿ ಇರುವಲ್ಲಿ ದಿನವೂ ಮಾಡುವ ವಾಕಿಂಗ್ (Walking) ಅಥವಾ ದೀರ್ಘ ನಡಿಗೆ ಎನ್ನುವುದು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಇಂದು ತಂತ್ರಜ್ಞಾನವು ಮುಂದುವರಿಯುತ್ತಿದೆ ಹಾಗಾಗಿ ನಾವು ದಿನದಲ್ಲಿ ಎಷ್ಟು ನಡೆದಿದ್ದೇವೆ ಎನ್ನುವುದನ್ನು ಕೂಡ ಟ್ರ್ಯಾಕ್ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಂದರೆ ನಾವು ನಮ್ಮ ಆರೋಗ್ಯವನ್ನು ಟ್ರ್ಯಾಕ್ ಮಾಡಬಹುದು.
ಸಾಮಾನ್ಯವಾಗಿ ತಜ್ಞರು ಹೇಳುವ ಪ್ರಕಾರ ಪ್ರತಿದಿನ 10,000 ಹೆಜ್ಜೆಗಳನ್ನು (Walking) ಇಡಬೇಕು. ಯುರೋಪಿಯನ್ ಜನರಲ್ ಆಫ್ ಪ್ರಿವೆಂಟಿಂಗ್ ಕಾರ್ಡಿಲೋಜಿ ಸಂಶೋಧನೆಯನ್ನು ಮಾಡಿ ಇತ್ತೀಚಿಗೆ ಒಂದು ಪ್ರಕಟಣೆಯನ್ನು ಹೊರಡಿಸಿದೆ. ಇದರ ಪ್ರಕಾರ ದಿನಕ್ಕೆ ಕನಿಷ್ಠ ನಾಲ್ಕು ಸಾವಿರ ಹೆಜ್ಜೆಗಳನ್ನಾದರೂ ನಡೆಯಬೇಕು ಹೀಗೆ ಮಾಡಿದ್ರೆ ಸಾವಿಗೆ ಸಂಬಂಧಿಸಿದ ಅಪಾಯಕಾರಿ ಕಾಯಿಲೆಗಳಿಂದ ದೂರ ಇರಬಹುದು. ಹೃದಯ ಸಂಬಂಧಿ ಕಾಯಿಲೆಗಳು ಕೂಡ ಹತ್ತಿರವೂ ಬರುವುದಿಲ್ಲ.
ನೀವು ಪ್ರತಿದಿನ ಹೆಚ್ಚಿಸಿಕೊಳ್ಳುವ ಹೆಜ್ಜೆಗಳು ಸುಮಾರು 15% ನಷ್ಟು ಸಾವಿನ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಅದು ಅಲ್ಲದೆ ಆರೋಗ್ಯಕರವಾಗಿ ಇರುವುದಕ್ಕೆ ವ್ಯಾಯಾಮ (Exercise) ಅಥವಾ ದೀರ್ಘಾವಧಿಯ ದೈಹಿಕ ಶ್ರಮ ಅಗತ್ಯವಲ್ಲ ಪ್ರಮುಖವಾದ ವಿಷಯ ಎಂದು ಅಧ್ಯಯನಗಳು ಕೂಡ ಸಾಬೀತುಪಡಿಸುತ್ತವೆ.
ನಡಿಗೆಯ ಬಗ್ಗೆ ಸಂಶೋಧಕರು ಹೇಳುವುದೇನು?
ದೀರ್ಘ ನಡಿಗೆ ಎನ್ನುವುದು ಬಹಳ ಒಳ್ಳೆಯದು ಎನ್ನುತ್ತಾರೆ ತಜ್ಞರು. ಸಾವಿನ ಅಪಾಯವನ್ನು ದಿನದಿಂದ ದಿನಕ್ಕೆ ಕಡಿಮೆ ಮಾಡುತ್ತಾ ಬರುತ್ತದೆ ಈ ನಡಿಗೆ. ದಿನಕ್ಕೆ 20 ಸಾವಿರ ಹೆಜ್ಜೆಗಳನ್ನ ನಡೆದರೆ ಯಾವ ಹೆಚ್ಚಿನ ವ್ಯಾಯಾಮ (Exercise) ಕ್ಕಿಂತ ಅಧಿಕ ಪ್ರಯೋಜನವನ್ನು ನಡಿಗೆ ನೀಡುತ್ತದೆ. ತಜ್ಞರು ಹೇಳುವ ಪ್ರಕಾರ ಆರೋಗ್ಯವಾಗಿ ಇರಲು ದಿನದಲ್ಲಿ ಬಹಳ ದೊಡ್ಡ ವ್ಯತ್ಯಾಸ ಮಾಡಿಕೊಳ್ಳಬೇಕಾಗಿಲ್ಲ ಆದರೆ ಪ್ರತಿದಿನ ಕನಿಷ್ಠ ನಾಲ್ಕು ಸಾವಿರದಿಂದ 20,000 ಹೆಜ್ಜೆಯ ನಡಿಗೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಒಟ್ಟಿನಲ್ಲಿ ದಿನಕ್ಕೆ ಕನಿಷ್ಠ ಎರಡು ಕಿಲೋಮೀಟರ್ ಆದ್ರೂ ನಡೆಯಬೇಕು ಈ ಸುಧೀರ್ಘವಾದ ವಾಕಿಂಗ್ ಎನ್ನುವುದು ಮನುಷ್ಯನ ದೇಹದಲ್ಲಿ ಹಲವು ಕಾಯಿಲೆಗಳನ್ನು ಓಡಿಸಿ ಅಥವಾ ಬರದಂತೆ ತಡೆಗಟ್ಟಿ ದೀರ್ಘಾಯಸ್ಸನ್ನು ನೀಡುತ್ತದೆ.