Benefits of Mexican Mint: ದೊಡ್ಡಪತ್ರೆ ಎಲೆಯೇ 5 ಆರೋಗ್ಯಕರ ಲಾಭಗಳು

Advertisement
ಮನೆಯ ಸುತ್ತ ಮುತ್ತ ಬೆಳೆಸುವ ಗಿಡವನ್ನೇ ಜ್ವರ, ಶೀತ ಸೇರಿದಂತೆ ಹಲವು ಕಾಯಿಲೆಗಳಿಗೆ ಮದ್ದಾಗಿ ಬಳಸಿಕೊಳ್ಳಬಹುದು. ಇಂತಹ ಔಷಧೀಯ ಸಸ್ಯಗಳಲ್ಲಿ ದೊಡ್ಡಪತ್ರೆ ಕೂಡಾ ಒಂದು. ಇದನ್ನು ಸಾಂಬ್ರಾಣಿ, ಸಂಬಾರಬಳ್ಳಿ, ಅಜವಾನದೆಲೆ, ಕರ್ಪೂರವಳ್ಳಿ ಎಂದು ನಾನಾ ಹೆಸರಿನಿಂದ ಕರೆಯಲಾಗುತ್ತದೆ.
ಈ ದೊಡ್ಡ ಪತ್ರೆಯ ಕೆಲವು ಉಪಯೋಗಗಳು ಇಲ್ಲಿವೆ.
- ಐದಾರು ದೊಡ್ಡಪತ್ರೆ ಎಲೆಗಳನ್ನು ಕೆಂಡದ ಮೇಲೆ ಬಾಡಿಸಿ, ರಸ ತೆಗೆದು ನಾಲ್ಕು ಐದು ಗಂಟೆಗಳಿಗುಮ್ಮೆ ಕುಡಿಯುತ್ತಿದ್ದರೆ ಜ್ವರ ನಿವಾರಣೆಯಾಗುತ್ತದೆ. ಮಕ್ಕಳಿಗೆ ಈ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿಸಬಹುದು.
- ಅರಶಿನಕಾಮಾಲೆ ರೋಗವುಳ್ಳವರು 10 ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ.
- ದೊಡ್ಡಪತ್ರೆ ಉಪ್ಪಿನೊಂದಿಗೆ ನೆಂಚಿಕೊಂಡು ತಿಂದರೆ ಜೀರ್ಣಶಕ್ತಿ ಹೆಚ್ಚುತ್ತದೆ.
- ದೊಡ್ಡ ಪತ್ರೆ ಎಲೆಯನ್ನು ಜಜ್ಜಿ ಹುಳುಕಡ್ಡಿ ಇರುವ ಜಾಗಕ್ಕೆ ಹಾಕಿ ತಿಕ್ಕಿದರೆ ಹುಳುಕಡ್ಡಿ ಕಡಿಮೆಯಾಗುತ್ತದೆ.
- ದೊಡ್ಡಪತ್ರೆ ಎಲೆಯನ್ನು ಅರೆದು ಪಿತ್ತಿದ ದದ್ದೆಗೆ ಹಚ್ಚಿದರೆ ಅದು ವಾಸಿಯಾಗುತ್ತದೆ.