Karnataka Times
Trending Stories, Viral News, Gossips & Everything in Kannada

Heart Attack: ಇದನ್ನು ಅತಿಯಾಗಿ ತಿಂದರೆ ಹೃದಯಾಘಾತ ಖಚಿತ, ತಜ್ಞರ ಉತ್ತರ

ಅತಿಯಾದರೆ ಅಮೃತವು ವಿಷ ಎನ್ನುತ್ತಾರೆ ಆದರೆ ಅತಿಯಾದರೆ ಉಪ್ಪು (Salt) ಕೂಡಾ ವಿಷ ಅನ್ನೋ ವಿಷಯ ನಿಮಗೆ ಗೊತ್ತಾ ..? ಹೌದು ದೇಹದಲ್ಲಿ ಉಪ್ಪಿನ ಅಂಶ ಶೇಖರಣೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಉಪ್ಪು ನಮ್ಮ ಹೃದಯದ ಆರೋಗ್ಯಕ್ಕೆ ಬಹಳ ಅಪಾಯಕಾರಿ ಅಂಶವಾಗಿದೆ.

Advertisement

ಹೌದು ಸ್ನೇಹಿತರೆ ಹೆಚ್ಚು ಉಪ್ಪು ಸೇವಿಸಿದರೆ, ದೇಹವು ಹೆಚ್ಚು ನೀರನ್ನು ಉಳಿಸಿಕೊಳ್ಳುತ್ತದೆ. ಹೆಚ್ಚಿನ ಪ್ರಮಾಣದ ನೀರು ರಕ್ತದ ಪರಿಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಹೃದಯ ಹೆಚ್ಚು ಹೊತ್ತು ಕೆಲಸ ಮಾಡಬೇಕಾಗಿ ಬರುತ್ತದೆ. ಉಪ್ಪು ಹೃದಯವನ್ನು ಹೆಚ್ಚು ಕೆಲಸ ಮಾಡಲು ಒತ್ತಾಯಿಸುತ್ತದೆ. ಇದರಿಂದಾಗಿ ರಕ್ತದೊತ್ತಡದ ಮಟ್ಟದ ಮೇಲೆ ಪರಿಣಾಮ ಬೀರುತ್ತದೆ. ಉಪ್ಪಿನಲ್ಲಿರುವ ಸೋಡಿಯಂ ಕೂಡಾ ರಕ್ತದೊತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಬೇಕು ಎಂದಿದ್ದು ಈ ಕುರಿತಂತೆ ಒಂದು ವರದಿಯನ್ನು ಕೂಡಾ ಸಿದ್ದಪಡಿಸಿತ್ತು.

Advertisement

2025 ರ ವೇಳೆಗೆ ಸೋಡಿಯಂ ಬಳಕೆಯನ್ನು ಶೇಕಡಾ 30 ರಷ್ಟು ಕಡಿಮೆ ಮಾಡುವಲ್ಲಿ ಎಲ್ಲಾ ದೇಶಗಳು ಜಾಗೃತವಾಗಬೇಕು ಎಂದು ಅದು ಪ್ರತಿಯೊಂದು ದೇಶಕ್ಕೂ ಸಲಹೆ ನೀಡಿದೆ. ಆದರೆ ಅನೇಕ ದೇಶಗಳು ಉಪ್ಪಿನ ಈ ವಿಷಯದ ಬಗ್ಗೆ ಹೆಚ್ಚಿನ ಗಮನ ನೀಡುತ್ತಿಲ್ಲ.
ಆದರೆ ಇದೇ ರೀತಿ ಜನರು ಹೆಚ್ಚಿನ ಪ್ರಮಾಣದಲ್ಲಿನ ಉಪ್ಪು ಸೇವನೆ ಮಾಡುತ್ತಿದ್ದರೆ ಬಿ ಪಿ ಹೆಚ್ಚಾಗಿ ಜನರ ಆರೋಗ್ಯ ಹಾಳಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳುವಂತೆ ವರ್ಷವೊಂದಕ್ಕೆ ಜಗತ್ತಿನಾದ್ಯಂತ ಸೋಡಿಯಂನ ಹೆಚ್ಚಿನ ಸೇವನೆಯಿಂದ 1.89 ಮಿಲಿಯನ್ ಸಾವುಗಳು ಸಂಭವಿಸುತ್ತವೆ.

Advertisement

ಅತಿಯಾದ ಉಪ್ಪಿನ ಸೇವನೆಯಿಂದ ಉಂಟಾಗುವ ಸಮಸ್ಯೆಗಳು ಹೀಗಿವೆ:

Advertisement

  • ಅತಿಯಾದ ಉಪ್ಪಿನ ಸೇವನೆಯು ಹೃದಯಾಘಾತ (Heart Attack) ದ ಅಪಾಯವನ್ನು ಹೆಚ್ಚಿಸುತ್ತದೆ
  • ಅಧಿಕ ಉಪ್ಪಿರುವ ಆಹಾರಗಳಲ್ಲಿ ಕೊಬ್ಬು ಮತ್ತು ಕ್ಯಾಲೊರಿಗಳು ಹೆಚ್ಚಿರುತ್ತದೆ ಇದರಿಂದ ದೇಹದ ತೂಕ ಹೆಚ್ಚಾಗಬಹುದು.
  • ದಿನಕವೊಂದಕ್ಕೆ 6 ಗ್ರಾಂ ಗಿಂತ ಹೆಚ್ಚು ಸೋಡಿಯಂ ಸೇವನೆಯು ಹೃದಯರಕ್ತನಾಳಗಳಿಗೆ ಹಾನಿಕಾರಕ
  • ಸಂಶೋಧಕರು ಸೋಡಿಯಂ ಮೂತ್ರದ ಉತ್ಪಾದನೆಯನ್ನು ಅಳೆಯುವ ಮೂಲಕ ಉಪ್ಪಿನ ಸೇವನೆಯ ಪರಿಣಾಮವನ್ನು ಅಳೆಯುತ್ತಾರೆ.
  • ವಯಸ್ಕರು ದಿನಕ್ಕೆ ಗರಿಷ್ಠ 2,000 ಮಿಗ್ರಾಂಗಿಂತ ಕಡಿಮೆ ಸೋಡಿಯಂ / ದಿನಕ್ಕೆ 5 ಗ್ರಾಂ ಗಿಂತ ಕಡಿಮೆ ಉಪ್ಪನ್ನು ಸೇವಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಶಿಫಾರಸು ಆಡಿದೆ. ಆದರು ಜನರು ದಿನಕ್ಕೆ ಸರಾಸರಿ 4,310 ಮಿಗ್ರಾಂ ಸೇವಿಸುತ್ತಾರೆ ಎನ್ನಲಾಗಿದೆ.
Leave A Reply

Your email address will not be published.