Karnataka Times
Trending Stories, Viral News, Gossips & Everything in Kannada

Beer For Kidney Stones: ಬಿಯರ್ ಸೇವನೆಯಿಂದ ಕಿಡ್ನಿ ಕಲ್ಲು ನಿವಾರಣೆಯಾಗುವುದೇ? ಇಲ್ಲಿದೆ ವೈದ್ಯರ ಉತ್ತರ

ಇತ್ತೀಚಿಗೆ ನಾವು ಸೇವಿಸುವ ಆಹಾರ ಕ್ರಮದಿಂದಾಗಿ ರೋಗಗಳು ಹೆಚ್ಚಾಗಿ ಹರಡುತ್ತಿವೆ, ಅದರಲ್ಲೂ ನಮ್ಮ ಆಹಾರ ಕ್ರಮವು ಬದಲಾದಂತೆ ಆರೋಗ್ಯದ ಮೇಲೆಯು ಅಷ್ಟೆ ಪರಿಣಾಮ ಬೀರುತ್ತದೆ, ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸ್ಟೋನ್ ಹೆಚ್ಚಾಗಿರುವ ಬಗ್ಗೆ ಯು ಮಾತುಗಳು ಕೇಳಿ ಬರುತ್ತಿದೆ, ಬಿಯರ್ (Beer) ಕುಡಿಯುವುದರಿಂದ ಮೂತ್ರಪಿಂಡಕ್ಕೆ ಕಲ್ಲು (Kidney Stone) ಸೇರುವುದಿಲ್ಲ ಎಂಬ ವಿಚಾರವನ್ನು ಜನರು ಹೆಚ್ಚಾಗಿ ನಂಬಿದ್ದಾರೆ. ಅದ್ರೆ ನಿಜನಾ ಎಂಬುದಾಗಿ ಡಾ ರಾಜು ಕೃಷ್ಣ ಮೂರ್ತಿ(Dr, Raju Kristina Murthy) ಮಾಹಿತಿ ನೀಡಿದ್ದಾರೆ.

Advertisement

ಏನು ಹೇಳಿದ್ದಾರೆ ಡಾ ರಾಜು ಕೃಷ್ಣ ಮೂರ್ತಿ

Advertisement

ಮೂತ್ರ ಪಿಂಡದ ಕೆಲಸ ಸರಿಯಾಗಿ ಆಗದಿದ್ದರೆ ಕಿಡ್ನಿಸ್ಟೋನ್‌ನಂತಹ ಸಮಸ್ಯೆ ಕಾಡುತ್ತದೆ, ಮೂತ್ರಪಿಂಡದ ಕಲ್ಲುಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಬಹುದು. ಹೆಚ್ಚು ನೀರು ಕುಡಿದರೆ ಮೂತ್ರದ ಜೊತೆಗೆ ಕಿಡ್ನಿಯಲ್ಲಿ ಸಣ್ಣ ಸಣ್ಣ ಕಲ್ಲುಗಳು ದೇಹದಿಂದ ಹೊರ ಹೋಗುತ್ತವೆ ನಿಜ. ಆದರೆ ಬಿಯರ್ ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ ಅಷ್ಟೆ ಅದ್ರೆ ಕಲ್ಲು ಇದೆ ಎಂಬ ಕಾರಣಕ್ಕೆ ಬಿಯರ್ ಕುಡಿಯಬೇಡಿ, ದ್ರವ ರೂಪದ ಮೂಲಕ ಮೂತ್ರ ಹೊರಹೊಗುತ್ತೆ ಬಿಟ್ಟರೆ ಅದಕ್ಕಾಗಿಯೇ ಬಿಯರ್ ಕುಡಿಯಬೇಡಿ ಎಂದು ಸಲಹೆ ನೀಡಿದ್ದಾರೆ.

Advertisement

ಹೆಚ್ಚು ನೀರು ಕುಡಿಯಿರಿ

Advertisement

ಮೂತ್ರಪಿಂಡದ ಕಲ್ಲುಗಳು ಇದ್ದಾಗ ಹೆಚ್ಚು ನೀರು ಅಥವಾ ದ್ರವಾಹಾರ ಸೇವಿಸುವುದು ಅವಶ್ಯಕ. ಮೂತ್ರಪಿಂಡದ ಕಲ್ಲುಗಳಿಗೆ
ವೈದ್ಯರ ಪ್ರಕಾರ, ಹೆಚ್ಚಿನ ಸಣ್ಣ ಮೂತ್ರಪಿಂಡದ ಕಲ್ಲುಗಳಿಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿಲ್ಲ. ಸಾಕಷ್ಟು ನೀರು ಕುಡಿಯುವ ಮೂಲಕ ಮೂತ್ರದ ಜೊತೆಗೆ ಸಣ್ಣ ಕಲ್ಲುಗಳು ಹೊರಬರುತ್ತವೆ.

ದಿನಕ್ಕೆ ಬೇಕಾದಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ, ಮೂತ್ರಪಿಂಡದ ಕಲ್ಲುಗಳು ಹೆಚ್ಚಾಗಿ ವಯಸ್ಕರ ಮೇಲೆ ಪರಿಣಾಮ ಬೀರುತ್ತವೆ. ಆದರೆ ಮಕ್ಕಳು ಮತ್ತು ಹದಿಹರೆಯದವರೂ ಕಿಡ್ನಿ ಸ್ಟೋನ್​ ಸಮಸ್ಯೆಗಳಿಗೆ ಇತ್ತೀಚೆಗೆ ಒಳಗಾಗಿದ್ದಾರೆ, ದಿನ ನಿತ್ಯ ನೀರು ಕುಡಿಯೂವ ಮೂಲಕ ಸರಿಪಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ

ಈ ಆಹಾರ ಕ್ರಮ ಅನುಸರಿಸಿ

ಆಹಾರ ಕ್ರಮದಲ್ಲಿ ಸೊಪ್ಪುಗಳನ್ನು ಸೇವಿಸುವುದರಿಂದ ಹಲವು ಸಮಸ್ಯೆಗಳಿಂದ ಪಾರಾಗಬಹುದಾಗಿದೆ, ಪಾಲಕ್ ಸೊಪ್ಪು ಸೇವಿಸಿರಿ, ಮೂತ್ರಪಿಂಡದ ಕಲ್ಲುಗಳ ಅಪಾಯವನ್ನು ಕಡಿಮೆ ಮಾಡಬಹುದು, ಕ್ಯಾಲ್ಸಿಯಂ ಮತ್ತು ಆಕ್ಸಲೇಟ್ ಅನ್ನು ಹೊಂದಿದ್ದರೆ ಅವು ಕರುಳಿನಲ್ಲಿ ಒಟ್ಟಿಗೆ ಬೆರೆತು ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತವೆ, ಜೊತೆಗೆ ಮಸಾಲೆ ಆಹಾರ, ಕೂಲ್ ಡ್ರಿಂಕ್ಸ್ ಮತ್ತು ಕಾಫಿ ಹೆಚ್ಚಾಗಿ ಸೇವಿಸಬೇಡಿ, ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಲವಣಾಂಶಗಳ ಕೂಡ ಶೇಖರಣೆ ಹೆಚ್ಚಾಗುತ್ತದೆ.

Leave A Reply

Your email address will not be published.