Karnataka Times
Trending Stories, Viral News, Gossips & Everything in Kannada

Petrol Pump Scam: ಎಚ್ಚರ, ಪೆಟ್ರೋಲ್ ಪಂಪ್ ಗಳಲ್ಲಿ ಈ 5 ರೀತಿ ನಡೆಯುತ್ತೆ ಮೋಸ

ಈಗಾಗಲೇ ಪೆಟ್ರೋಲ್, ಡೀಸೆಲ್(Diesel) ಇಂಧನಗಳ ಬೆಲೆ ಗಗನಕ್ಕೆ ಏರಿದೆ. ಇದರ ಬಿಸಿಯನ್ನೇ ಜನರು ತಡೆದುಕೊಳ್ಳುವುದಕ್ಕೆ ಆಗುತ್ತಿಲ್ಲ ಈ ನಡುವೆ ಪೆಟ್ರೋಲ್ ಪಂಪ್ ಗಳಲ್ಲಿ (Petrol Pump)ಗ್ರಾಹಕರಿಗೆ ಇಂಧನ ತುಂಬಿಸಲು ಬಂದರೆ ಅಲ್ಲಿ ವಂಚನೆ ಮಾಡಲಾಗುತ್ತಿದೆ. ಇಂಧನದ ದರ ಜಾಸ್ತಿ ಆಗುತ್ತಿದ್ದಂತೆ ವಂಚನೆಯ ಪ್ರಕರಣಗಳು ಕೂಡ ಹೆಚ್ಚು ಹೆಚ್ಚು ದಾಖಲಾಗುತ್ತಿವೆ. ನೀವು ಹೀಗೆ ಪೆಟ್ರೋಲ್ ಪಂಪ್ ನಲ್ಲಿ ಮೋಸ ಹೋಗಬಾರದು ಅಂದ್ರೆ ನಾವು ಇಲ್ಲಿ ಹೇಳಿರುವ ಸಲಹೆಗಳನ್ನು ಗಮನದಲ್ಲಿಟ್ಟುಕೊಳ್ಳಿ.

Advertisement

ಕಡಿಮೆ ಇಂಧನ ಹಾಕುವುದು:

Advertisement

ಗ್ರಾಹಕರನ್ನು ಪೆಟ್ರೋಲ್ ಪಂಪ್ ಗಳಲ್ಲಿ ಮೋಸ ಮಾಡುವುದು ಬಹಳ ಸುಲಭ. ಗ್ರಾಹಕರು ತಮ್ಮ ವಾಹನದಲ್ಲಿ ನಿರ್ದಿಷ್ಟ ಪ್ರಮಾಣದ ಇಂಧನವನ್ನು ಹಾಕಿಸುವಾಗ ಈ ವಂಚನೆ ನಡೆಯುತ್ತದೆ. ಕೆಲವೊಮ್ಮೆ ಪೆಟ್ರೋಲ್ ಪಂಪ್ ಗಳಲ್ಲಿ ಮೀಟರ್ ಬದಲಾಯಿಸುವುದೇ ಇಲ್ಲ ಇದರಿಂದ ಗ್ರಾಹಕರು ಸಂಪೂರ್ಣ ಮೊತ್ತವನ್ನ ಪಾವತಿಸಿ ಕಡಿಮೆ ಇಂಧನವನ್ನು ಹಾಕಿಸಿಕೊಂಡು ಹೋಗುತ್ತಾರೆ. ತಾವು ಕೊಡುವ ಹಣಕ್ಕೆ ಸರಿಯಾದ ಪ್ರಮಾಣದಲ್ಲಿ ಇಂಧನ ಹಾಕಿದರೆ ಎಂಬುದನ್ನು ತಿಳಿಯಲು ಮೀಟರ್ ಜೀರೋ ಮಾಡುವಂತೆ ಪೆಟ್ರೋಲ್ ಪಂಪ್ ನಲ್ಲಿ ಹೇಳಿ.

Advertisement

ಫೀಲ್ಲಿಂಗ್ ಮಷೀನ್ ನಲ್ಲಿ ಚಿಪ್ ಅಳವಡಿಕೆ:

Advertisement

ಸಾಕಷ್ಟು ಪೆಟ್ರೋಲ್ ಪಂಪ್ ಗಳಲ್ಲಿ ಈ ರೀತಿಯ ವಂಚನೆ ಕೂಡ ದಾಖಲಾಗಿದೆ. ಪಂಪ ಮಾಲೀಕರು ಅಥವಾ ಕೆಲಸಗಾರರು ಇಂಧನವನ್ನು ತುಂಬಿಸುವ ಯಂತ್ರಕ್ಕೆ ಎಲೆಕ್ಟ್ರಾನಿಕ್ ಚೀಪ್ ಒಂದನ್ನು ಅಳವಡಿಸುತ್ತಾರೆ. ಇದರಿಂದ ಪೂರ್ಣ ಪ್ರಮಾಣದ ಇಂಧನ ಮೀಟರ್ ನಲ್ಲಿ ತೋರಿಸಿದರು ಗ್ರಾಹಕರು ಪಡೆಯುವ ಇಂಧನ ಮಾತ್ರ ಕಡಿಮೆ. 2020ರಲ್ಲಿ ತೆಲಂಗಾಣದಲ್ಲಿ ಇಂತಹ ಒಂದು ಪ್ರಕರಣ ಬೆಳಕಿಗೆ ಬಂದಿತ್ತು. ಅಲ್ಲಿನ ಒಂದು ಪೆಟ್ರೋಲ್ ಪಂಪ್ ನಲ್ಲಿ ಸಾವಿರ ಮಿಲಿ ಪೆಟ್ರೋಲ್ ಅಥವಾ ಡೀಸೆಲ್ ಗೆ ಕೇವಲ 970 ಮಿಲಿ ಇಂಧನವನ್ನು ಮಾತ್ರ ಗ್ರಾಹಕರು ಪಡೆಯುತ್ತಿದ್ದರು. ಒಂದು ವೇಳೆ ನಿಮಗೆ ಈ ವಿಚಾರದಲ್ಲಿ ಅನುಮಾನ ಬಂದರೆ ಇಂಧನ ಪ್ರಮಾಣವನ್ನು ನೀವು ಪರಿಶೀಲಿಸಬಹುದು.

ಸಿಂಥೆಟಿಕ್ ತೈಲ ತುಂಬಿಸುವುದು:

ಕೆಲವು ಪೆಟ್ರೋಲ್ ಪಂಪ್ ಗಳಲ್ಲಿ ಗ್ರಾಹಕರ ಬಳಿ ಅನುಮತಿ ಪಡೆದುಕೊಳ್ಳದೆ ಸಾಮಾನ್ಯ ಇಂಧನದ ಬದಲು ಸಿಂಥೆಟಿಕ್ ಇಂಧನವನ್ನು ತುಂಬಿಸುತ್ತಾರೆ. ಸಾಮಾನ್ಯ ಇಂಧನಕ್ಕಿಂತ 5- 10% ಸಿಂಥೆಟಿಕ್ ಇಂಧನ ದುಬಾರಿ ಆಗಿರುತ್ತದೆ. ಹೀಗಾದಾಗ ಗ್ರಾಹಕರು ಹೆಚ್ಚಿನ ಮೊತ್ತವನ್ನು ಪಾವತಿಸಬೇಕು. ನೀವು ಇಂಧನ ಭರಿಸುವಾಗ ಇಂಧನ ಹಾಕುವವರಿಗೆ ಈ ಸೂಚನೆಯನ್ನು ನೀಡಲು ಮರೆಯಬೇಡಿ.

ಪೆಟ್ರೋಲ್ ದರ:

ಪೆಟ್ರೋಲ್ ಪಂಪ್ ಗೆ ಹೋಗಿ ಪೆಟ್ರೋಲ್ ಹಾಕಿಸುವುದಕ್ಕಿಂತ ಮೊದಲು ದರವನ್ನು ಪರಿಶೀಲಿಸಿ. ಪೆಟ್ರೋಲ್ ಹಾಗೂ ಡೀಸೆಲ್ ದರ ಎಷ್ಟಿದೆಯೋ ಅಷ್ಟೇ ಹಣವನ್ನು ಪಡೆದುಕೊಳ್ಳಬೇಕು ಹಾಗಾಗಿ ಯಂತ್ರದಲ್ಲಿ ಪ್ರದರ್ಶಿಸಲಾದ ಇಂಧನದ ಬೆಲೆಯೇ ನೀವು ತುಂಬಿಸಿದ ಪೆಟ್ರೋಲ್ ಗು ಹಾಕಲಾಗಿದೆಯೇ ಎಂಬುದನ್ನ ಪರೀಕ್ಷಿಸಿ.

ಕಳಪೆ ಇಂಧನ:

ನೀವು ಇಂಧನ ತುಂಬಿಸುವಾಗ ಅದರ ಗುಣಮಟ್ಟದ ಬಗ್ಗೆ ಅನುಮಾನ ಬಂದರೆ ಇಂಜಿನ್ ಫಿಲ್ಟರ್ ಪೇಪರ್ ಪರೀಕ್ಷೆಯನ್ನು ಮಾಡಿಸಬಹುದು. ಗ್ರಾಹಕ ಸಂರಕ್ಷಣಾ ಕಾಯ್ದೆ 1986 ಪ್ರಕಾರ ಪ್ರತಿ ಪೆಟ್ರೋಲ್ ಪಂಪ್ ನಲ್ಲಿ ಫಿಲ್ಟರ್ ಪೇಪರ್ ಇರಬೇಕು ಹಾಗೂ ಗ್ರಾಹಕರು ಕೇಳಿದರೆ ಅದನ್ನು ಗ್ರಾಹಕರಿಗೆ ಕೊಡಬೇಕು. ಇದರಿಂದ ಪೆಟ್ರೋಲ್ ಕಲಬೆರಿಕೆ ಆಗಿದೆಯೇ ಇಲ್ಲವೇ ಎಂಬುದನ್ನ ತಿಳಿದುಕೊಳ್ಳಬಹುದು. ಒಂದು ಫಿಲ್ಟರ್ ಪೇಪರ್ ಮೇಲೆ ಸ್ವಲ್ಪ ಪೆಟ್ರೋಲ್ ಹಾಕಿ ಫಿಲ್ಟರ್ ಪೇಪರ್ ಮೇಲೆ ಕಲೆ ಉಳಿದರೆ ಪೆಟ್ರೋಲ್ ಕಲಬೆರಿಕೆ ಎಂದು ಅರ್ಥ ಇಲ್ಲದೆ ಇದ್ದರೆ ಪೆಟ್ರೋಲ್ ಶುದ್ಧವಾಗಿದೆ ಎಂದು ಅರ್ಥ ಹೀಗೆ ನೀವು ಇತರದ ಗುಣಮಟ್ಟವನ್ನು ಪೆಟ್ರೋಲ್ ಪಂಪ್ ನಲ್ಲಿಯೇ ಪರೀಕ್ಷಿಸಿಕೊಳ್ಳಬಹುದು.

Leave A Reply

Your email address will not be published.