Gold Rate Today: ಇಂದಿನ ಬಂಗಾರದ ಬೆಲೆ ಎಷ್ಟಾಗಿದೆ ತಿಳಿದುಕೊಳ್ಳಿ.

Advertisement
ಇನ್ನು ಈ ಚಿನ್ನ ಮತ್ತು ಬೆಳ್ಳಿ(Gold and Silver)ಯನ್ನ ಹೆಚ್ಚೆಚ್ಚು ಧರಿಸಿದ್ದಾರೆ ಎಂದರೆ ಅವರು ಖಂಡಿತವಾಗಿಯೂ ಆರ್ಥಿಕವಾಗಿ ಪ್ರಬಲರಾಗಿದ್ದಾರೆ
(Financially strong)ಎಂದು ನಿರ್ಧರಿಸುತ್ತಾರೆ. ಇನ್ನು ಕೆಲವರು ತಮ್ಮ ಬಳಿ ಆಭರಣವಿದ್ದರೂ ಕೂಡ ಅದನ್ನು ಪ್ರದರ್ಶನ ಮಾಡಲು ಯಾವುದೇ ಕಾರಣಕ್ಕೂ ಬಯಸಲ್ಲ. ಇನ್ನು ಸೌಂದರ್ಯವನ್ನು(Beauty) ಹೆಚ್ಚಿಸುವ ಮತ್ತು ಕಷ್ಟದ ಕಾಲದಲ್ಲೂ ಕೂಡ ಈ ಆಭರಣ ಕೈಹಿಡಿಯುತ್ತದೆ.
ಈ ಕಾರಣದಿಂದಾಗಿ ಆಭರಣಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡುತ್ತಾರೆ ಎನ್ನಬಹುದು. ಪ್ರತಿ ಧರ್ಮದಲ್ಲೂ(Every Religion) ಕೂಡ ಬಂಗಾರಕ್ಕೆ ಹೆಚ್ಚು ಬೇಡಿಕೆ ಇದೆ. ಮನೆಗೆ ಒಳಿತಾಗುತ್ತದೆ ಎಂಬ ನಂಬಿಕೆ ಕೂಡಾ ಇದೆ. ಈ ನಡುವೆ ಚಿನ್ನ ಹಾಗೂ ಬೆಳ್ಳಿ ಬೆಲೆ (Gold % Silver Rate) ಪ್ರತಿನಿತ್ಯ ಕೂಡ ಹಾವು ಏಣಿ ಆಟವಾಡಯತ್ತಿದ್ದು ಇಂದು ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ ಗೊತ್ತಾ?
ಸದ್ಯ ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Banglore) ಹತ್ತು ಗ್ರಾಂನ 22 ಕ್ಯಾರಟ್ ಚಿನ್ನದ ಬೆಲೆ ರೂ. 54,750 ಆಗಿದ್ದು ಅತ್ತ ಚೆನ್ನೈನಲ್ಲಿ (Chennai)ರೂ. 55,650 ಮುಂಬೈನಲ್ಲಿ (Mumbai) 54,700, ರೂ. ಮತ್ತು ಕೊಲ್ಕತ್ತಾ (Kolkata) ನಗದಲ್ಲಿ 54,700 ಬೆಲೆ ನಿಗದಿಯಾಗಿದೆ. ಇನ್ಮು ದೇಶದ ರಾಜಧಾನಿ ದೆಹಲಿಯಲ್ಲಿ(Delhi) ಇಂದು ಚಿನ್ನದ ಬೆಲೆ 54,850 ರೂ. ಆಗಿದೆ.
ಇದರ ಜೊತೆಗೆ ಮಾರುಕಟ್ಟೆಯಲ್ಲಿ ಈ ದಿನದ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ ನ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 5,470 ಆಗಿದ್ದು ಇದರ ಜೊತೆಗೆ 24 ಕ್ಯಾರಟ್ ಬಂಗಾರದ ಬೆಲೆ (Pure Gold) – ರೂ. 5,967 ಆಗಿದೆ.ಇನ್ನು ಹತ್ತು ಗ್ರಾಂ (10GM)22 ಕ್ಯಾರಟ್ ನ ಚಿನ್ನದ ಬೆಲೆ – ರೂ. 54,700 ಆಗಿದ್ದು ಇದರ ಜೊತೆಗೆ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ – ರೂ. 59,670 ಆಗಿದೆ. ಅತ್ತ ನೂರು ಗ್ರಾಂ 22 ಕ್ಯಾರಟ್ ಆಭರಣ ಚಿನ್ನದ ಬೆಲೆ ಸುಮಾರು ರೂ. 5,47,000 ಆಗಿದ್ದು 24 ಕ್ಯಾರಟ್ ಬಂಗಾರದ ಬೆಲೆ – ರೂ. 5,96,700 ನಿಗದೆಯಾಗಿದೆ.
ಇನ್ನು ಬೆಳ್ಳಿ ಬೆಲೆಯನ್ನ ನಿನ್ನೆಗೆ ಹೋಲಿಸಿದರೆ ಕೊಂಚ ಏರಿಕೆಯಾಗಿರುವುದನ್ನ ಕಾಣಬಹುದು. ಹೌದು ಮಾರುಕಟ್ಟೆಯಲ್ಲಿ ಇಂದು ಒಂದು ಕೆಜಿ ಬೆಳ್ಳಿ ಬೆಲೆ 73,300 ರೂಪಾಯಿಯಿದ್ದು ಬೆಳ್ಳಿಯೂ ಕೂಡ ಕಳೆದ ಹಲವು ಸಮಯದಿಂದ ಆಕರ್ಷಕ ಹೂಡಿಕೆಯ ಸಾಧನವಾಗಿ ಗುರುತಿಸಿಕೊಂಡಿದೆ ಎನ್ನಬಹುದು. ಸಿಲಿಕಾನ್ ಸಿಟಿ ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm 100gm 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 762, ರೂ. 7,620 ಹಾಗೂ ರೂ. 76,200 ಗಳಾಗಿವೆ. ಇನ್ನು ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 76,200 ಆಗಿದ್ದರೆ ದೆಹಲಿಯಲ್ಲಿ 73,300 ಮತ್ತು ಮುಂಬೈನಲ್ಲಿ ರೂ. 73,300 ಹಾಗೇಯೇ ಕೊಲ್ಕತ್ತದಲ್ಲೂ ರೂ. 73,300 ಗಳಾಗಿದೆ.