ಸಾರಿಗೆ ಸಚಿವಾಲಯ ತನ್ನ ಹೊಸ ವ್ಯವಸ್ಥೆಗಳನ್ನು ತರುವುದು ಆಗಾಗ ನಡೆಯುವ ಸಾಮಾನ್ಯ ವಿಚಾರವಾಗಿದೆ. ಅಪಾರ ಪ್ರಮಾಣದಲ್ಲಿ ನೂತನ ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳು ಅಭಿವೃದ್ಧಿ ಆಗುತ್ತಲೆ ಟೋಲ್ ಸಂಗ್ರಹ ಮಾಡುವ ಮೂಲಕ ಎಲ್ಲ ಬಾಕಿಯನ್ನು ಜನರಿಂದಲೇ ಬರಿಸಲು ಟೋಲ್ ಸಂಗ್ರಹ ಬಹುತೇಕ ಪ್ರಭಾವ ಬೀರುತ್ತದೆ. ಈ ಮೂಲಕ ಇನ್ನು ಆರೇ ತಿಂಗಳಲ್ಲಿ ಟೋಲ್ ಪ್ಲಾಜಾ (Tolplaza) ಮತ್ತು ಫಾಸ್ಟ್ಯಾಗ್ (FASTag) ವ್ಯವಸ್ಥೆ ಬದಲಾವಣೆ ಕಾಣಲಿದ್ದು ಈ ಕುರಿತಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಹೊಸ ವ್ಯವಸ್ಥೆ:
ಪ್ರಸ್ತುತ ಇರುವ ಟೋಲ್ ಪ್ಲಾಜಾ ಹಾಗೂ ಫಾಸ್ಟ್ಯಾಗ್ ವ್ಯವಸ್ಥೆಯೂ ಸಂಪೂರ್ಣ ಬದಲಾಗಿದ್ದು ಈ ಮೂಲಕ ಹೊಸ ವ್ಯವಸ್ಥೆಯನ್ನು ಜಾರಿಗೆ ತರಲು ಸರಕಾರ ಮುಂದಾಗಿದ್ದು ಇದೊಂದು ಸುಧಾರಿತ ವ್ಯವಸ್ಥೆ ಆಗಿದೆ ಎನ್ನಬಹುದು. ಈ ಹೊಸ ವ್ಯವಸ್ಥೆ ಅಂದರೆ ಜಿಪಿಎಸ್ (GPS) ಆಧಾರಿತ ಟೋಲ್ ಸಂಗ್ರಹಣೆ ಆಗಿದೆ. ಈ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ಕೇಂದ್ರ ಸಾರಿಗೆ ಸಚಿವ ನಿತೀನ್ ಗಡ್ಕರಿ (Nithin Gadkari) ಬಹಿರಂಗ ಹೇಳಿಕೆ ನೀಡಿದ್ದಾರೆ.
ಏನಂದ್ರು ಸಚಿವರು?
ಉದ್ಯಮ ಸಂಸ್ಥೆಯ ಅಭಿವೃದ್ಧಿ ದೃಷ್ಟಿಯಿಂದ ಹಮ್ಮಿಕೊಂಡ ಸಿಐಐ ಕಾರ್ಯಕ್ರಮದಲ್ಲಿ ಸಚಿವರು ಈ ಬಗ್ಗೆ ಮಾತಾಡಿದ್ದಾರೆ. ಹೆದ್ದಾರಿಯಲ್ಲಿ ಟೋಲ್ ಫ್ಲಾಜಾ ಬಳಿ ಯಾವಾಗಲೂ ಸಂಚಾರಿ ದಟ್ಟಣೆ ಏರ್ಪಡುತ್ತಲೆ ಇದ್ದು ಇದಕ್ಕೆ ನೂತನ ಕ್ರಮ ಕೈಗೊಳ್ಳಲು ಚಿಂತಿಸಲಾಗಿದೆ ಈ ಮೂಲಕ ವಾಹನ ಸವಾರರು ಪ್ರಯಾಣಿಸಿದ ದೂರಕ್ಕೆ ಮಾತ್ರ ಟೋಲ್ ಶುಲ್ಕ ಬರಿಸುವ ಉದ್ದೇಶವನ್ನು ಈ ಹೊಸ ವ್ಯವಸ್ಥೆ ಒಳಗೊಂಡಿದೆ. ಪ್ರಸ್ತುತ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಆದಾಯದ ಮೂಲ ಕೂಡ ಆಗುತ್ತಿದ್ದು ಟೋಲ್ ಮೂಲಕ 40,000 ಕೋಟಿ ರೂಪಾಯಿ ಸಂಗ್ರಹಮಾಡುತ್ತಿದೆ. ಮುಂದಿನ ಈ ಸುಧಾರಿತ ಕ್ರಮ ಜನರಿಗೆ ಹಾಗೂ ಆಡಳಿತ ವ್ಯವಸ್ಥೆಗೆ ಅನುಕೂಲವಾಗಲಿದೆ.