Karnataka Times
Trending Stories, Viral News, Gossips & Everything in Kannada

Gruha Lakshmi Yojana: ಗೃಹಲಕ್ಷ್ಮೀ ಹಣ ಬಂದಿಲ್ಲ ಅಂದ್ರೆ ಇದೂ ಕೂಡ ಕಾರಣವಾಗಿರಬಹುದು! ಹೊಸ ಸೂಚನೆ

ಕರ್ನಾಟಕ ರಾಜ್ಯದಲ್ಲಿ ಈಗಂತೂ ಎಲ್ಲಿ ಕೇಳಿದರೂ ಗೃಹಲಕ್ಷ್ಮೀ (Gruha Lakshmi Yojana) ಯದ್ದೇ ಸುದ್ದಿ ಆಗಸ್ಟ್ ನಲ್ಲಿ ಕೊನೆಯದಾಗಿ ಈ ಯೋಜನೆ ಉದ್ಘಾಟನೆಗೊಂಡರು ಕೆಲವರಿಗಷ್ಟೇ ಹಣ ಬಂದಿದೆ ಬಹುತೇಕರಿಗೆ ಹಣ ಬಂದಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಅದೇ ರೀತಿ ಪಡಿತರ ಅನರ್ಹರ ಪಟ್ಟಿ ಕೂಡ ಸಿದ್ಧವಾಗುತ್ತಿದ್ದು ಅನೇಕ ಮಹಿಳೆಯರಿಗೆ ಗೃಹಲಕ್ಷ್ಮೀ ಹಣ ಬರದಿರಲು ಮುಖ್ಯ ಕಾರಣ ರೇಶನ್ ಕಾರ್ಡ್ ತಿದ್ದುಪಡಿ ಪ್ರಕ್ರಿಯೆಯಲ್ಲಿರುವುದು ಎಂಬುದು ಇದೀಗ ತಿಳಿದುಬಂದಿದೆ. ಹಾಗಾಗಿ ಪಡಿತರ ತಿದ್ದುಪಡಿ ಸರಿ‌ಮಾಡಿಸಿಕೊಂಡು ಅನ್ನಭಾಗ್ಯ (Anna Bhagya) ಮತ್ತು ಗೃಹಲಕ್ಷ್ಮೀ ಪಡೆಯಲು ಜನ ಕಾತುರರಾಗಿದ್ದಾರೆ.

Advertisement

ರಾಜ್ಯದಾಹಾರ ನಾಗರಿಕ ಸರಬರಾಜು ಇಲಾಖೆಯ ನೀತಿ ನಿಯಮಾನುಸಾರ ಹೊಸ ಎಪಿಎಲ್ ,ಬಿಪಿಎಲ್ (APL and BPL) ಕಾರ್ಡ್ ಪಡೆಯಲು ಅಥವಾ ಇದ್ದ ಕಾರ್ಡ್ ಗೆ ಸದಸ್ಯರ ಸೇರ್ಪಡೆಗೆ ಹಾಗೂ ಮಾಹಿತಿ ಬದಲಾವಣೆಗೆ, ವರ್ಗಾವಣೆ ಇತ್ಯಾದಿಅಂದರೆ ತಿದ್ದು ಪಡಿ ಮಾಡಲು ಇಷ್ಟು ದಿನಗಳ ಕಾಲ ತಡೆ ಆಗಿತ್ತು ಸೆಪ್ಟೆಂಬರ್ ಒಂದರಿಂದ ಈ ಪ್ರಕ್ರಿಯೆ ಮತ್ತೆ ಚುರುಕುಗೊಂಡಿದೆ‌. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Advertisement

ಎಲ್ಲಿ ಮಾಡುತ್ತಾರೆ?

Advertisement

ಬೆಂಗಳೂರು ಒನ್, ಬಾಪೂಜಿ ಸೇವಾಕೇಂದ್ರ ಹಾಗೂ ಕರ್ನಾಟಕ ಒನ್ ಸೇವಾ ಕೇಂದ್ರ ಇತರ ಸ್ಥಳದಲ್ಲಿ ಈ ತಿದ್ದುಪಡಿ ಮಾಡುತ್ತಾರೆ. ಕಾರ್ಡಿನ ಮುಖ್ಯಸ್ಥ ಪುರುಷರಾದರೂ ಸಹ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮೀ ಸಿಗದಿರುವ ಸಾಧ್ಯತೆ ಇದ್ದು ಈ ಅಂಶ ಕೂಡ ಬದಲಾಗುವ ಅಗತ್ಯತೆ ಕೂಡ ಇದೆ. ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಗೃಹಲಕ್ಷ್ಮೀ ಯೋಜನೆ ಮೈಸೂರಿನ ಮಹಾರಾಜ ಕಾಲೇಜಿನ ಮೈದಾನದಲ್ಲಿ ಅದ್ಧೂರಿಯಾಗಿ ಅನಾವರಣಗೊಂಡಿದ್ದು ಜನ ಮೆಚ್ಚುಗೆ ಪಡೆದಿತ್ತು.

Advertisement

ಗೃಹಲಕ್ಷ್ಮೀ ನೋಂದಣಿ:

ಇದುವರೆಗೆ 1.10ಕೋಟಿ ಮಹಿಳೆಯರು ನೋಂದಣಿ ಮಾಡಿದ್ದು ಎಲ್ಲರಿಗೂ ಹಣ ಇನ್ನು ಬಂದಿಲ್ಲ. ಆಗಸ್ಟ್ 30 ರ ಸಭೆಯಲ್ಲಿ ಮೈಸೂರು, ಮಂಡ್ಯ, ಕೊಡಗು, ಚಾಮರಾಜನಗರ ಇನ್ನಿತರ ಭಾಗದಿಂದ ಜನಸಾಗರ ಈ ಅದ್ದೂರಿ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್, ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar, Lakshmi Hebalkar, Malikarjuna Karge, Rahul Gandhi) ಇನ್ನಿತರ ಕಾಂಗ್ರೆಸ್ ವರಿಷ್ಠರು ಈ ಸಭೆಯಲ್ಲಿ ನೆರೆದಿದ್ದರು. ಆದರೆ ಎಲ್ಲರಿಗೂ ಇನ್ನು ಹಣ ಬರದಿರಲು ರೇಶನ್ ಕಾರ್ಡ್ ಮಾಹಿತಿ ಹಾಗೂ ಇತರ ದಾಖಲೆಯ ಸಮಸ್ಯೆ ಕೂಡ ಇದೆ ಎಂಬುದು ತಿಳಿದು ಬಂದಿದೆ‌.

ಒಟ್ಟಾರೆಯಾಗಿ ರೇಶನ್ ಕಾರ್ಡ್ ಅಗತ್ಯ ದಾಖಲೆಯಲ್ಲಿ ಒಂದಾದ ಕಾರಣ ಅದರ ಸಕ್ರಿಯವಾಗಿ ನೋಡಿಕೊಳ್ಳುವಂತೆ ಮಾಡುವುದು ನಮ್ಮ ಹೊಣೆಯಾಗಿದೆ. ಈ ನಿಟ್ಟಿನಲ್ಲಿ ತಿದ್ದು ಪಡಿ ಶೀಘ್ರ ಮಾಡುವುದು ತುಂಬಾ ಅಗತ್ಯ.

Also Read: Gruha Lakshmi Yojana: ಬ್ಯಾಂಕ್ ಖಾತೆಗೆ 2000 ರೂ. ಬರುವ ಮುನ್ನವೇ ಸರ್ಕಾರ ವಿರುದ್ಧ ಮಹಿಳೆಯರ ಆಕ್ರೋಶ: ಕಾರಣ ಏನು ಗೊತ್ತಾ.?

Leave A Reply

Your email address will not be published.