Karnataka Times
Trending Stories, Viral News, Gossips & Everything in Kannada

Gold Price Today: ಬಂಗಾರದ ಮಾರುಕಟ್ಟೆಯಲ್ಲಿ ಮತ್ತೆ ವ್ಯತ್ಯಾಸ, ಇಲ್ಲಿದೆ ಇಂದಿನ ದರ

Advertisement

ಮನೆಯಲಿ ಇದ್ದರೆ ಚಿನ್ನ ಚಿಂತೆಯೂ ಏತಕೆ ಇನ್ನ? ಸಾಮಾನ್ಯವಾಗಿ ಈ ಚಿನ್ನದ ಮೇಲೆ ಹೂಡಿಕೆ(Investment In Gold)ಮಾಡುವುದು ಸುರಕ್ಷಿತ ಎಂಬುವಂತಹ ಭಾವನೆ ಹಿಂದಿನಿಂದಲೂ ಸಹ ಭಾರತೀಯರ (Indians) ಮನದಲ್ಲಿ ಬೇರೂರಿದೆ ಎನ್ನಬಹುದು. ಹೌದು ಇದೇ ಕಾರದಿಂದಾಗಿ ಭಾರತದಲ್ಲಿ ಚಿನ್ನ ಹೂಡಿಕೆಯ ನೆಚ್ಚಿನ ಆಯ್ಕೆಗಳಲ್ಲಿ ಒಂದಾಗಿದ್ದು 2020ರಲ್ಲಿ ಕೊರೋನಾ (Covid) ಕಾಣಿಸಿಕೊಂಡ ನಂತರ ಚಿನ್ನದ ಬೆಲೆಯಲ್ಲಿ (Gold Rate) ಭಾರೀ ಹೆಚ್ಚಳ ಕಂಡುಬಂದಿತ್ತು ಎನ್ನಬಹುದು.

ಆದರೆ ನಂತರದ ದಿನಗಳಲ್ಲಿ ಶೇ.20ರಷ್ಟು ಇಳಿಕೆ ಕಂಡು 2021ರ ಮಾರ್ಚ್ ಸಂದರ್ಭಕ್ಕೆ 10ಗ್ರಾಂ ಚಿನ್ನಕ್ಕೆ 46,000 ರೂ. ಆಗಿಬಿಟ್ಟಿತ್ತು. ಇನ್ನು ಕೊರೋನಾದ ಎರಡನೇ ಅಲೆ(Second Wave of Corona)ಭಾರತಕ್ಕೆ ಬರುತ್ತಿದ್ದಂತೆ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು ತದನಂತರ ದಿನಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧ(Russia-Ukraine war)ಸಹ ಚಿನ್ನದ ಬೆಲೆ ಮೇಲೆ ಪರಿಣಾಮ ಬೀರಿತ್ತು ಎನ್ನಬಹುದು.

ನೀವೀಗ ಚಿನ್ನದ ಮೇಲೆ ಹೂಡಿಕೆ ಮಾಡಬಹುದೆ?

ಸಾಮಾನ್ಯವಾಗಿ ಈ ಬಂಗಾರ ಎಂಬುದು ಅಪತ್ಕಾಲದಲ್ಲಿ ಕೈ ಹಿಡಿಯುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಕೂಡ ರೂಡಿಯಾಗಿ ಬಂದಿದೆ. ಇದೇ ಕಾರಣದಿಂದಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ ಸಾಕು ಕೈ ಸುಟ್ಟುಕೊಳ್ಳುವ ಅಪಾಯ ಇತರ ಹೂಡಿಕೆಗಳಿಗಿಂತ ತುಸು ಕಡಿಮೇ ಎನ್ನಬಹುದು. ಈ ಕಾರಣದಿಂದಾಗಿ ಚಿನ್ನದ ಮೇಲೆ ತಗ್ಗಿರುವಾಗ ಅದರ ಮೇಲೆ ಹೂಡಿಕೆ ಮಾಡುವುದರಿಂದ ಮುಂದೆ ಗಳಿಕೆಯಂತೂ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ಸದ್ಯ ಹಣದುಬ್ಬರ ಏರು ಮಟ್ಟದಲ್ಲಿದ್ದು ಹೀಗಾಗಿ ಇಂಥ ಸಂದರ್ಭದಲ್ಲಿ ಚಿನ್ನದ ಮೇಲಿನ ಹೂಡಿಕೆಗೆ ಬೇಡಿಕೆಯಿದೆ ಎನ್ನಬಹುದು..

ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಷಿದೆ?

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Banglore) ಇಂದು 24 ಕ್ಯಾರೆಟ್ 10 ಗ್ರಾಂ ಅಪರಂಜಿ ಚಿನ್ನದ ಬೆಲೆ (Gold Price) 59,720 ರೂಪಾಯಿ ಇದ್ದು ನಿನ್ನೆಯೂ ಕೂಡ ಇದೇ ದರ ಇತ್ತು. ಇನ್ನು 22 ಕ್ಯಾರೆಟ್‌ 10 ಗ್ರಾಂ ಚಿನ್ನದ ಬೆಲೆಯಲ್ಲಿ 54,750 ರೂಪಾಯಾಗಿದ್ದು ನಿನ್ನೆ ಸಹ ಇದೇ ದರದಲ್ಲಿ ವಹಿವಾಟು ನಡೆಸಸಿತ್ತು.
ಇನ್ನು ಇದರ ಜೊತೆಗೆ ಒಂದು ಕೆಜಿ ಬೆಳ್ಳಿಯ (Silver) ಬೆಲೆ 76,200 ರೂಪಾಯಿ ನಿಗಧಿಯಾಗಿದ್ದು ನಿನ್ನೆಗೆ ಹೋಲಿಸಿದರೆ ಬೆಳ್ಳಿ ಬೆಲೆಯಲ್ಲಿ ಇಂದು ಸುಮಾರು 200 ರೂಪಾಯಿ ಏರಿಕೆಯಾಗಿದೆ. ಇನ್ನು ರಾಜ್ಯದ ಇತರೆ ಪ್ರಮುಖ ನಗರಗಳಾದ ಮೈಸೂರು (Mysore) ದಾವಣಗೆರೆ (Davanagere) ಹುಬ್ಬಳ್ಳಿ-ಧಾರವಾಡ (Hubballi Dharwad) ಸೇರಿದಂತೆ ಬಹುತೇಕ ಎಲ್ಲಾ ಕಡೆ ಕೂಡ ಇಂದು ಇದೇ ದರಗಳಲ್ಲಿ ಮಾರಾಟವಾಗುತ್ತಿವೆ.

ದೇಶದ ಇತರೆ ಪ್ರಮುಖ ನಗರಗಲ್ಲಿನ ಚಿನ್ನ, ಬೆಳ್ಳಿ ದರಗಳು:

22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ಚೆನ್ನೈ (Chennai) ಮುಂಬೈ (Mumbai) ಹಾಗೂ ಕೊಲ್ಕತ್ತಾ (Kolkata) ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 55,450, ರೂ. 54,700, ರೂ. 54,700 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ(Delhi) ಇಂದು ಚಿನ್ನದ ಬೆಲೆ 54,850 ರೂ. ಆಗಿದ್ದು ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 76,000 ಆಗಿದ್ದರೆ ದೆಹಲಿಯಲ್ಲಿ ರೂ. 73,000, ಮುಂಬೈನಲ್ಲಿ ರೂ. 73,000 ಹಾಗೂ ಕೊಲ್ಕತ್ತದಲ್ಲೂ ರೂ. 73,000 ಗಳಾಗಿದೆ.

Leave A Reply

Your email address will not be published.