Aadhar Card Link: ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಲಿಂಕ್ ಆಗಿದೆ ಎಂದು ತಿಳಿಯುವುದು ಹೇಗೆ? ಸಿಂಪಲ್ ವಿಧಾನ
ಸಾಮಾನ್ಯವಾಗಿ ತಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎನ್ನುವುದನ್ನು ತಿಳಿಯುವ ಕುತೂಹಲ ಎಲ್ಲರಿಗೂ ಇರುತ್ತದೆ. ಹೀಗಾಗಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗಿದೆ ಎನ್ನುವುದನ್ನ ತಿಳಿಯಲು ಈ ಕೆಳಗಿನ ಸ್ಟೆಪ್ ಫಾಲೋ ಮಾಡಿ
*ಆಧಾರ್ ವೆಬ್ ಸೈಟ್ ಓಪನ್ ಮಾಡಿ
*Enter UID – ಆಧಾರ್ ನಂಬರ್ ಹಾಕಬೇಕು
*Enter ಸೆಕ್ಯೂರಿಟಿ ಕೋಡ್ (Capcha)
*Generate OTP ಮೇಲೆ ಕ್ಲಿಕ್ ಮಾಡಿ (ಮೊಬೈಲ್ ನಂಬರ್ ಗೆ OTP ಹೋಗುತ್ತದೆ)
*ನಂತರ Authentication Type ಕಾಣುತ್ತದೆ ಅಲ್ಲದೆ ALL ಸೆಲೆಕ್ಟ್ ಮಾಡಬೇಕು
*ತದನಂತರ Date ಸೆಲೆಕ್ಟ್ ಮಾಡಬೇಕು
*Number Of Record ಕಾಣಿಸುತ್ತದೆ ಅಲ್ಲಿ 50 ಎಂದು ಟೈಪ್ ಮಾಡಿ..
* ನಂತರ OTP ಮತ್ತೆ ಹಾಕಿದರೆ ಕಳೆದ ಆರು ತಿಂಗಳ 50 Records ನಿಮಗೆ ಕಾಣುತ್ತದೆ.
ಇಲ್ಲಿ ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಲಿಂಕ್ ಆಗಿದೆ ಎಂಬುದನ್ನ ಕಾಣಬಹುದಾಗಿದ್ದು ನಂತರ ನಿಮಗೆ ಗೊತ್ತೋ ಗೊತ್ತಿಲ್ಲದೆಯೋ ಆಧಾರ್ ಲಿಂಕ್ ಆಗಿದ್ದರೆ ಅದನ್ನ ನೋಡಿ ಸರಿ ಪಡಿಸಿಕೊಳ್ಳಬಹುದು..
ಇನ್ನು ನಿಮ್ಮ ಆಧಾರ್ ಪ್ಯಾನ್ ಜೊತೆ ಲಿಂಕ್ ಆಗಿದೆಯೇ ತಿಳಿಯುವುದು ಹೇಗೆ?
* ಇದನ್ನು ತಿಳಿಯಲು ನೀವು ಮೊದಲು ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ಗೆ ( www . income tax . gov. in) ಭೇಟಿ ನೀಡಬೇಕು ಅಥವಾ ಈ ನೇರ ಲಿಂಕ್ ಆದ (https:// eportal.incometax.gov.in/iec/foservices/#/pre-login/link-aadhaar-status) ಭೇಟಿ ನೀಡಬಹುದಾಗಿದೆ.
*ಹೀಗೆ ಕ್ಲಿಕ್ ಮಾಡಿದ ನಂತರ ಈಗ ಕ್ವಿಕ್ ಲಿಂಕ್ ವಿಭಾಗದಲ್ಲಿ ಲಿಂಕ್ ಆಧಾರ್ ಸ್ಥಿತಿಯ ಮೇಲೆ ಕ್ಲಿಕ್ ಮಾಡಬೇಜು.
*ಇನ್ನು ಇದರ ಬಳಿಕ ನೀವು 10 ಅಂಕಿಯ ಪ್ಯಾನ್ ಸಂಖ್ಯೆ ಹಾಗೂ 12 ಅಂಕಿಗಳ ಆಧಾರ್ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.
* ಬಳಿಕ View Aadhaar Link Status ಮೇಲೆ ಕ್ಲಿಕ್ ಮಾಡಿ.
* ಕೊನೆಗೆ ನಿಮ್ಮ ಆಧಾರ್ ಲಿಂಕ್ ಆಗಿದ್ದರೆ ನೀವು ಅದನ್ನು ಲಿಂಕ್ ಮಾಡುವ ಅಗತ್ಯವಿಲ್ಲ. ಆದರೆ ನೀವು ಲಿಂಕ್ ಹೊಂದಿಲ್ಲದಿದ್ದಲ್ಲಿ ನೀವು ಅದನ್ನು ಲಿಂಕ್ ಮಾಡಬೇಕಾಗುತ್ತದೆ.
ಇನ್ನು ಪ್ಯಾನ್ – ಆಧಾರ್‌ಗೆ ಲಿಂಕ್ ಆಗದಿದ್ದರೆ ಏನಾಗಲಿದೆ?
ಸದ್ಯ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ ಸ್ವೀಕರಿಸುವುದಿಲ್ಲ. ಹೌದು ಅಲ್ಲದೆ PAN ಕಾರ್ಡ್ ಅನ್ನು ಬಳಸಲು ಸಾಧ್ಯವಾಗುವುದಿಲ್ಲ. ಇದಲ್ಲದೆ ಇನ್ನೊಂದು ಹೊಸ PAN ಕಾರ್ಡ್ ಪಡೆಯಲೂ ಕೂಡ ಸಾಧ್ಯವಾಗುವುದಿಲ್ಲ. ಇನ್ನು ರಿಟರ್ನ್ಸ್ ಸಲ್ಲಿಸುವಾಗ ಈ ಡಾಕ್ಯುಮೆಂಟ್ ಕೂಡ ಅಗತ್ಯವಿದ್ದು ಪ್ಯಾನ್ ಕಾರ್ಡ್ ಇಲ್ಲದೆ ಇಂತಹ ಹಲವು ರೀತಿಯ ಕೆಲಸಗಳನ್ನು ಪೂರ್ಣಗೊಳಿಸಲಾಗುವುದಿಲ್ಲ.