Karnataka Times
Trending Stories, Viral News, Gossips & Everything in Kannada

Advocate and Lawyer: ಅಡ್ವೊಕೇಟ್ ಹಾಗೂ ಲಾಯರ್ ಇಬ್ಬರೂ ಒಂದೇ ಅಲ್ಲ, ಇಲ್ಲಿದೆ ನಿಜವಾದ ವ್ಯತ್ಯಾಸ.

Advertisement

ನಮ್ಮ ಭಾರತ ಸಂವಿಧಾನದಲ್ಲಿ (Constitution of India) ಶಾಸಕಾಂಗ (Legislature) ಕಾರ್ಯಂಗ ಮತ್ತು ನ್ಯಾಯಾಂಗ (Judiciary) ಎಂಬ ಮೂರು ಅಂಗಗಳಿದೆ. ಜನ ಪ್ರತಿನಿಧಿಗಳ ಮಾಲೀಕತ್ವದಲ್ಲಿ ನೀತಿ ನಿಯಮಗಳನ್ನು (Code of Conduct) ರಚಿಸುವ ಹೊಣೆಗಾರಿಕೆ ಶಾಸಕಾಂಗವಾದರೆ ಅದನ್ನು ಕಾರ್ಯ ನಿರ್ವಹಣೆ (Task Management) ಮಾಡುವುದು ಕಾರ್ಯಾಂಗದ ಕೆಲಸವಾಗಿರುತ್ತದೆ. ಅದೇ ರೀತಿ ಇವೆರೆಡರ ನಡವೆ ಸರಿ ತಪ್ಪುಗಳ ಮೇಲ್ವಿಚಾರಣೆಗಾಗಿ ನ್ಯಾಯಾಂಗವೂ ಸಂವಿಧಾನ ಬದ್ದವಾಗಿ ಕೆಲಸ ಮಾಡುತ್ತದೆ. ಇನ್ನು ನ್ಯಾಯಾಂಗ ಕಾರ್ಯ ನಿರ್ವಹಿಸುವುದು ಕೋರ್ಟ್ ನಲ್ಲಿ (Couryt) ಆಗಿದ್ದು ಇನ್ನು ಈ ಕೋರ್ಟ್ ನಲ್ಲಿ ಲಾಯರ್ ಹಾಗೂ ಅಡ್ವೋಕೇಟ್ (Advocate and Lawyer) ಎಂಬ ಪದ ಹೆಚ್ಚು ಬಳಕೆಯಲ್ಲಿರುತ್ತದೆ. ಸಾಮಾನ್ಯವಾಗಿ ಸಾಕಷ್ಟು ಮಂದಿ ಲಾಯರ್ ಹಾಗೂ ಅಡ್ವೋಕೇಟ್ ಪದ ಒಂದೇ ಎಂದು ಭಾವಿಸುತ್ತಾರೆ. ಆದರೆ ಎರಡು ಬೇರೆ ಬೇರೆಯಾಗಿದ್ದು ಈ ವಿಚಾರದ ಕುರಿತು ಸಂಪೂರ್ಣವಾಗಿ ತಿಳಿಸುತ್ತೇವೆ ಮುಂದೆ ಓದಿ..

Advocate and Lawyer ನಡುವಿನ ವ್ಯತ್ಯಾಸವೇನು?

ಲಾಯರ್ ಎಂದರೆ ಕಾನೂನು ಕಾಲೇಜಿನಲ್ಲಿ (Law College) ಮೂರು ಅಥವಾ ಮೂರಕ್ಕಿಂತ ಹೆಚ್ಚು ವರುಷಗಳ ಕಾಲ ಅಭ್ಯಾಸ ಮಾಡಿ ಉತೀರ್ಣರಾದವರನ್ನ ಲಾಯರ್ ಎಂದು ಕರೆಯಲಾಗುತ್ತದೆ ಇನ್ನು ಅಡ್ವೋಕೇಟ್ ಎಂದರೆ ಲಾಯರ್ ನ ಮುಂದಿನ ಪ್ರೊಸೆಸ್ ಎನ್ನಬಹುದು. ಯಾಕೆಂದರೆ ಒಬ್ಬ ಲಾಯರ್ ಆದವನು ತನ್ನ ವೃತ್ತಿ ಅಂದರೆ ಸಮಾಜದ ಅಂಗವಾಗಿ ಕೆಲಸ ಮಾಡಬೇಕಾದರೆ ಪ್ರತ್ಯೇಕವಾಗಿ ಸರ್ಕಾರ ಅಥವಾ ಸಂಸ್ಥೆ ನಡೆಸುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಯಶಸ್ವಿಯಾಗಿ ಪೂರ್ಣಗೊಳಿಸಿದವರನ್ನ ಅಡ್ವೋಕೇಟ್ ಎನ್ನಲಾಗುತ್ತೆ. ಇನ್ನು ಅರ್ಥಪೂರ್ಣವಾಗಿ ಹೇಳುವುದಾದರೆ ಕಾನೂನು ಪದವಿ ಪಡೆದ ಒಬ್ಬ ಲಾಯರ್ Bar Council of India ಸಂಸ್ಥೆ ನಡೆಸುವುಂತಹ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಅವರನ್ನ ಅಡ್ವೊಕೇಟ್ ಎನ್ನಲಾಗುತ್ತದೆ.

ಕೋರ್ಟ್ ನಲ್ಲಿ ವಾದ ಮಾಡುವವರು ಯಾರು?

ಇನ್ನು ಲಾಯರ್ ಆಗಬೇಕಾದರೆ ಕಾನೂನು ಪದವಿ ಮುಗಿಸಿದ್ದರೆ ಸಾಕು. ಇನ್ನು ಲಾಯರ್ ಅದವರು ತನ್ನ ಕಕ್ಷಿದಾರರಿಗೆ ಕಾನೂನು ಸಲಹೆ ಮತ್ತು ತಿಳುವಳಿಕೆ ನೀಡ ಬಹುದು ಅಷ್ಟೆ. ಆದರೆ ಅಡ್ವೊಕೇಟ್ ಆದವರು ತನ್ನ ಕಕ್ಷಿದಾರರಿಗೆ ಕಾನೂನು ಸಲಹೆ ನೀಡುವುದರ ಜೊತೆ ಕೋರ್ಟ್ ನಲ್ಲಿ ವಾದ ಮಾಡಬಹುದು.

ಇನ್ನು ಲಾಯರ್ ಗೆ ಕಾನೂನು ಜ್ಞಾನ ಕಡಿಮೆ ಇರುತ್ತದೆ. ಇನ್ನು ಅಡ್ವೊಕೇಟ್ ರವರು Bar Council of India ಸಂಸ್ಥೆ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಕಾರಣ ಕೌಶಲ್ಯ ಜ್ಞಾನ ಹೆಚ್ಚಿರುತ್ತದೆ. ಹಾಗೂ ತನ್ನ ಕಕ್ಷಿದಾರನ ಪರವಾಗಿ ಕೊರ್ಟ್ ನಲ್ಲಿ ಹೋರಾಟ ಮಾಡಿ ನ್ಯಾಯ ಕೊಡಿಸುವ ಸಾಮರ್ಥ್ಯ ಇರುತ್ತದೆ.

ಯಾರಿಗೆ ಅನುಭವ ಕಡಿಮೆ ಗೊತ್ತಾ?

ಸಾಮಾನ್ಯವಾಗಿ ಎಲ್ಲರೂ ಕೂಡ ಲಾಯರ್ ಬಳಿ ಸಲಹೆ ಪಡೆದು ನಂತರ ಅಡ್ವೊಕೇಟ್ ಮೂಲಕ ನ್ಯಾಯಕ್ಕಾಗಿ ಹೋಗುತ್ತಾರೆ. ಏಕೆಂದರೆ ಲಾಯರ್ ಶುಲ್ಕ ಕಡಿಮೆ ಇರುತ್ತದೆ. ಅಡ್ವೊಕೇಟ್ ಆದವರು ತಮ್ಮ ಸೇವೆಗಳಿಗಾಗಿ ಲಾಯರ್ ಗಿಂತ ಹೆಚ್ಚು ಶುಲ್ಕ ವಿಧಿಸಲು ಕಾರಣ ವಿವಿಧ ಕಾನೂನು ವಿಷಯಗಳಲ್ಲಿ ತಮ್ಮ ಕಕ್ಷಿದಾರರನ್ನು ಪ್ರತಿನಿಧಿಸಲು ಅರ್ಹರಾಗಿರುತ್ತಾರೆ. ಇನ್ನು ಅಡ್ವೊಕೇಟ್ ಗೆ ಹೋಲಿಕೆ ಮಾಡಿದರೆ ಲಾಯರ್ ಗರ ಅನುಭವ ಕೂಡ ಕಡಿಮೆ ಇರುತ್ತದೆ.
ಇನ್ನು ಲಾಯರ್ ಕೇವಲ ಸಲಹೆ ಮಾತ್ರ ನೀಡಲಿದ್ದು ನ್ಯಾಯಲಯದಲ್ಲಿ ಪ್ರತಿನಿಧಿಸಲು ಸಾಧ್ಯವಿಲ್ಲ. ಆದ Bar Council of India ಪರೀಕ್ಷೆಯಲ್ಲಿ ತೇರ್ಗಡೆಯಾದವರು ದೇಶದ ಯಾವುದೇ ನ್ಯಾಯಾಲಯದಲ್ಲಿ ವಾದಮಾಡಬಹುದಾಗಿದೆ.

Leave A Reply

Your email address will not be published.