RBI Rules: RBI ನಿಯಮಗಳ ಪ್ರಕಾರ ಈ ರೀತಿ ನಡೆದ್ರೆ ಬ್ಯಾಂಕ್ ಗಳೇ ನಿಮಗೆ ಹಣವನ್ನು ನೀಡಬೇಕಾಗುತ್ತೆ!
ಸಾಮಾನ್ಯವಾಗಿ ಸಾಕಷ್ಟು ಬಾರಿ ನೀವು ಕೆಲವೊಂದು ಪ್ರೊಸೀಜರ್ಗಳನ್ನು ಮಾಡಲು ಬ್ಯಾಂಕ್ ನವರಿಗೆ ಸಾಕಷ್ಟು ಹಣವನ್ನು ಶುಲ್ಕದ ರೂಪದಲ್ಲಿ ನೀಡುವುದು ವಾಡಿಕೆ ಆಗಿರುತ್ತದೆ. ಆದರೆ ಕೆಲವೊಂದು ವಿಚಾರಗಳ ಕುರಿತಂತೆ ನಿಮಗೆ ಗೊತ್ತಿಲ್ಲದೇ ಇರಬಹುದು ಹಾಗೆ ಮಾಡಿದಲ್ಲಿ ಬ್ಯಾಂಕುಗಳೆ ನಿಮಗೆ Compensation ಅನ್ನು ಹಣದ ರೂಪದಲ್ಲಿ ನೀಡಬೇಕಾಗುತ್ತದೆ. ಮೊದಲ ಬಾರಿಗೆ ಈ ಸುದ್ದಿಯನ್ನು ಕೇಳಿದಾಗ ಖಂಡಿತವಾಗಿ ನಿಮಗೂ ಕೂಡ ಆಶ್ಚರ್ಯಕರ ಎನಿಸಬಹುದು ಹಾಗೂ ಇದು ನಿಜಾನಾ ಎನ್ನುವ ಅನುಮಾನ ಕೂಡ ಮೂಡಿ ಬರಬಹುದು ಆದರೆ ಇದನ್ನು ಹೇಳುತ್ತಿರುವುದು ನಾವಲ್ಲ ಬದಲಾಗಿ RBI.
ಈ ವಿಚಾರದ ಕುರಿತಂತೆ ಇನ್ನಷ್ಟು ವಿವರವಾಗಿ ತಿಳಿಯೋಣ ಬನ್ನಿ. ಮೊದಲಿಗೆ ಒಂದು ವೇಳೆ ನೀವು ಯಾವುದೇ ಬ್ಯಾಂಕಿನ ಎಟಿಎಂ ಮಷೀನ್ ನಲ್ಲಿ ಕಾರ್ಡನ್ನು ಹಾಕಿ ಅಮೌಂಟ್ Withdrawal ಮಾಡಲು ಹೋಗುತ್ತೀರಾ. ಆಗ ಹಣ ನಿಮ್ಮ ಖಾತೆಯಿಂದ ಡೆಬಿಟ್ ಆಗುತ್ತದೆ ಆದರೆ ಹಣ ಮಾತ್ರ ಬರೋದಿಲ್ಲ. ಈ ಸಮಯದಲ್ಲಿ ಆರು ದಿನಗಳ ಒಳಗೆ ಆ ಬ್ಯಾಂಕ್ ನಿಮ್ಮ ಹಣವನ್ನು ನಿಮ್ಮ ಖಾತೆಗೆ ಹಿಂದಿರುಗಿಸದೆ ಇದ್ದರೆ, 6ನೇ ದಿನದಿಂದ ನಿಮ್ಮ ಹಣ ನಿಮ್ಮ ಖಾತೆಗೆ ವಾಪಸ್ ಬರುವವರೆಗೂ ಕೂಡ ಪ್ರತಿದಿನ ನೂರು ರೂಪಾಯಿ ಹಣವನ್ನು ಶುಲ್ಕದ ರೂಪದಲ್ಲಿ ನಿಮಗೆ ಪಾವತಿಸಬೇಕಾಗುತ್ತದೆ. ಇದು RBI ರೂಪಿಸಿರುವ ನಿಯಮಗಳಾಗಿದೆ.
ಇನ್ನು ಎರಡನೇದಾಗಿ ಒಂದು ವೇಳೆ ನೀವು UPI ಖಾತೆಯಿಂದ ಹಣವನ್ನು ವರ್ಗಾಯಿಸುತ್ತಿದ್ದರೆ Beneficiary ಖಾತೆಗೆ ಹಣ ಕ್ರೆಡಿಟ್ ಆಗಿಲ್ಲ ಎಂದರೆ ಅದಕ್ಕೂ ಕೂಡ ಬ್ಯಾಂಕ್ ಸಂಪೂರ್ಣ ಜವಾಬ್ದಾರಿಯನ್ನು ಹೊರಬೇಕಾಗುತ್ತೆ. ಇದು ಒಂದು ದಿನಗಳ ಒಳಗೆ ನಿಮ್ಮ ಖಾತೆಗೆ ಅಥವಾ ನೀವು ಕಳಿಸಿರುವ ಖಾತೆಗೆ ಜಮಾ ಆಗದಿದ್ದರೆ ಎರಡನೇ ದಿನದ ನಂತರ ಪ್ರತಿ ದಿನ ಹಣ ನಿಮ್ಮ ಖಾತೆಗೆ ಬರುವವರೆಗೂ ಕೂಡ ನೂರು ರೂಪಾಯಿ ಅನ್ನು ಬ್ಯಾಂಕ್ ನಿಮ್ಮ ಖಾತೆಗೆ ನೀಡಬೇಕಾಗುತ್ತದೆ. ಹೀಗಾಗಿ ಈ ರೂಪದಲ್ಲಿ ಬ್ಯಾಂಕ್ ಮಾಡಿದ ತಪ್ಪಿಗೆ ಬ್ಯಾಂಕ್ ನಿಮಗೆ ಹಣವನ್ನು ಶುಲ್ಕದ ರೂಪದಲ್ಲಿ ನೀಡಬೇಕಾಗುತ್ತದೆ.