ಮನೆಯಲ್ಲಿ ಜಿರಳೆ ಕಂಡುಬಂದರೆ ಎಲ್ಲರಿಗೂ ಅಸಹ್ಯ ಎನಿಸುತ್ತದೆ. ಅದರಲ್ಲಿಯೂ ಬೇಸಿಗೆ ಬಂತು ಅಂದ್ರೆ ಸಾಕು ಜಿರಳೆಗಳ ಕಾಟ ಹೆಚ್ಚಾಗುತ್ತದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ಸುಮ್ಮನಿರುವ ಜಿರಳಗೆಳು ಬೇಸಿಗೆಯಲ್ಲಿ ಬಿಸಿಲ ಬೇಗೆಗೆ ಗೂಡು ಬಿಟ್ಟು ಹೊರಗೆ ಬರುತ್ತವೆ. ಅಲ್ಲದೆ ಅದರ ಸಂತತಿ ಕೂಡಾ ಬೇಸಿಗೆ ಕಾಲದಲ್ಲಿ ಹೆಚ್ಚಾಗುತ್ತದೆ.
ಅದರಲ್ಲಿಯೂ ಅಡುಗೆ ಮನೆಯಲ್ಲಿ ಜಿರಳೆಗಳು ಕಂಡು ಬಂದರೆ ಹೆಣ್ಣು ಮಕ್ಕಳಿಗೆ ಹೆಚ್ಚು ಕೋಪ ಬರುತ್ತದೆ.
ಈ ಜಿರಳೆಗಳು ಆಹಾರ ಪದಾರ್ಥಗಳನ್ನು ಮಾತ್ರವಲ್ಲ, ಮನುಷ್ಯರ ಆರೋಗ್ಯವನ್ನು ಹಾಳು ಮಾಡುತ್ತದೆ. ಈ ಕೀಟವನ್ನು ಮನೆಯಿಂದ ಹೊರಹಾಕಲು ಅದೆಷ್ಟೋ ಮಂದಿ ಹರಸಾಹಸ ಪಡುತ್ತಾರೆ ಮಾರುಕಟ್ಟೆಗೆ ಬರುವ ಕ್ರಿಮಿನಾಶಕಗಳನ್ನು ಕೂಡಾ ಅತೀಯಾಗಿ ಬಳಸುತ್ತಾರೆ. ಆದರೆ ಕೀಟ, ಕ್ರಿಮಿ ನಾಶಕಗಳನ್ನು ಹೆಚ್ಚಾಗಿ ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿಕಾರಕ.
ಅದರ ಬದಲು ಈ ಕೆಲ ಮನೆ ಮದ್ದುಗಳನ್ನು ಬಳಸಿ ಜಿರಳೆ ಕಾಟವನ್ನು ನಿಯಂತ್ರಣಕ್ಕೆ ತರಬಹುದಾಗಿದೆ. ಹಾಗಾದರೆ ಈ ಮನೆಮದ್ದುಗಳು ಯಾವುದು ತಿಳಿಯೋಣ ಬನ್ನಿ
- ಮನೆ ಒರೆಸುವಾದ ಅಥವಾ ಮಾಪ್ ಮಾಡುವಾಗ ಬೇವಿನ ಎಣ್ಣೆಯನ್ನು ನೀರಿಗೆ ಬೆರೆಸಿದರೆ ಜಿರಳೆಗಳು ಮನೆಗೆ ಬರುವುದಿಲ್ಲ.
- ಸಕ್ಕರೆ, ಮೈದಾ, ಹಾಗೂ ಬೋರಿಕ್ ಪೌಡರ್ ಗನ್ನು ಬೆರೆಸಿ ಮಾಡಿ ಚಿಕ್ಕ ಉಂಡೆಗಳನ್ನು ಮಾಡಿ ಜಿರಳೆ ಹೆಚ್ಚಿರುವ ಜಾಗದಲ್ಲಿ ಇಟ್ಟರೆ ಜಿರಳೆಗಳು ಬರುವುದಿಲ್ಲ.
- ಸಂಜೆ ಅಥವಾ ರಾತ್ರಿ ಕಾಫಿ ಪೌಡರ್ ಅನ್ನು ಮನೆಯ ಕಾರ್ನರ್‌ಗಳಲ್ಲಿ , ಹಾಗೂ ಗಾಳಿ ಬೆಳಕು ಬೀಳದ ಪ್ರದೇಶಗಳಲ್ಲಿ ಸಿಂಪಡಿಸಿ, ಬೆಳಗ್ಗೆ ಮನೆ ಪೂರ್ತಿ ಸ್ವಚ್ಛ ಮಾಡಿದರೆ ಜಿರಳೆಗಳು ಕಡಿಮೆಯಾಗುತ್ತವೆ.
- ಬೆಳ್ಳುಳ್ಳಿ ಅಥವಾ ಈರುಳ್ಳಿ ರಸವನ್ನು ತೆಗೆದು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಗೆ ಹಾಕಿ ಮನೆಯ ಮೂಲೆಗಳಲ್ಲಿ ಸ್ಪ್ರೇ ಮಾಡದರೆ , ಈರುಳ್ಳಿ ಗಾಟಿಗೆ ಜಿರಳೆಗಳು ಬರುವುದಿಲ್ಲ.
ಮನೆಮದ್ದುಗಳು ಮಾತ್ರವಲ್ಲದೆ ಕೆಲವು ಟಿಪ್‌ಗಳನ್ನು ಪಾಲೋ ಮಾಡುವ ಮೂಲಕ ಜಿರಲೆ ಕಾಟದಿಂದ ತಪ್ಪಿಸಿಕೊಳ್ಳಬಹುದು
- ಜಿರಳೆಯ ಕಾಟದಿಂದ ಮುಕ್ತಿ ಸಿಗಬೇಕೆಂದರೆ ನಿಮ್ಮ ಮನೆಯನ್ನು ಸ್ವಚ್ಛವಾಗಿಡಬೇಕು. ಮೂಲೆಗಳು ಹಾಗೂ ಸೂರ್ಯನ ಕಿರಣ ಬೀಳದ ಜಾಗಗಳನ್ನು ವಾರಕ್ಕೆ ಒಮ್ಮೆಯಾದರು ಸ್ವಚ್ಛ ಮಾಡಬೇಕು
- ಅಡುಗೆಮನೆಯಲ್ಲಿರುವ ಕಸದ ಬುಟ್ಟಿಯನ್ನು ನಿಯಮಿತವಾಗಿ ಖಾಲಿ ಮಾಡಿ.
- ಆಹಾರಗಳನ್ನು ಸಂಗ್ರಹಿಸಿಡಲು ಗಾಳಿಯಾಡದ ಡಬ್ಬಗಳನ್ನು ಬಳಸಿ.. ಪ್ಲಾಸ್ಟಿಕ್ ಕವರ್‌ಗಳಲ್ಲಿ ಆಹಾರ ಸಂಗ್ರಹಿಸಬೇಡಿ.ಯಾವುದೇ ತಿನ್ನುವ ಪದಾರ್ಥಗಳನ್ನು ತೆರೆದಿಡಬೇಡಿ.
- ಹಳೆಯ ಪತ್ರಿಕೆಗಳು, ಪುಸ್ತಕಗಳನ್ನು ಎಂದಿಗೂ ಒಟ್ಟಿಗೆ ಜೋಡಿಸಬೇಡಿ, ಈ ರೀತಿ ಮಾಡುವುದರಿಂದ ನೀವೆ ಜಿರಳೆಗಳಿಗೆ ವಾಸ ಯೋಗ್ಯ ಜಾಗ ಮಾಡಿಕೊಟ್ಟಂತಾಗುತ್ತದೆ.
- ಗೋಡೆಗಳಲ್ಲಿ ಇರುವ ಸಣ್ಣ ಬಿರುಕುಗಳು ಹಾಗೂ ರಂಧ್ರಗಳನ್ನು ಮುಚ್ಚಿ ಇದರಿಂದ ಜಿರಳೆಗಳು ನಿಯಂತ್ರಣಕ್ಕೆ ಬರುತ್ತವೆ.