ಇಂದು ಸಾಮಾನ್ಯವಾಗಿ ಜನರ ತಿಂಗಳ ಬಜೆಟ್ ನಲ್ಲಿ ವಿದ್ಯುತ್ ಬಿಲ್ ಪಾವತಿಸುವುದು ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಬಿಲ್ ಯೂನಿಟ್ ದರವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಕರೆಂಟ್ ಬಿಲ್ ಕಟ್ಟುವುದೇ ದೊಡ್ಡ ತಲೆನೋವಾಗಿದೆ. ಹೀಗಿರುವಾಗ ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳುವುದಕ್ಕೆ ಜನರು ಬೇರೆ ಬೇರೆ ತಂತ್ರಗಳನ್ನ ಅನುಸರಿಸುತ್ತಾರೆ. ದಿನವೂ ಮನೆಯಲ್ಲಿ ಬಳಸುವ ವಿದ್ಯುತ್ ಬಗ್ಗೆ ಕಾಳಜಿ ಮಾಡುತ್ತಾರೆ. ಉರಿಯುವ ಫ್ಯಾನ್ ನಿಂದ ಟಿವಿಯವರೆಗೆ ಎಲ್ಲವನ್ನು ಅಳೆದು ತೂಗಿ ವಿದ್ಯುತ್ ಬಳಕೆ ಮಾಡುತ್ತಾರೆ. ಆದರೆ ನಾವು ಸಣ್ಣ ಸಣ್ಣ ವಿಚಾರಗಳನ್ನು ನಿರ್ಲಕ್ಷಿಸಿ ಬಿಡುತ್ತೇವೆ. ಮನೆಯ ಸ್ವಿಚ್ ಬೋರ್ಡ್ ನಲ್ಲಿ ಅಳವಡಿಸಲಾದ ಸೂಚಕಗಳ ಬಗ್ಗೆ ನಾವಿಲ್ಲಿ ಮಾತನಾಡುತ್ತಿದ್ದೇವೆ.
ಮನೆಯಲ್ಲಿ ಇರುವ ಸ್ವಿಚ್ ಬೋರ್ಡ್ ನಲ್ಲಿ ಕೆಂಪು ಬಣ್ಣದ ಲೈಟ್ ಬರುವ ಒಂದು ಸೂಚಕ ಇರುತ್ತದೆ. ಅದರಿಂದ ಮನೆಯಲ್ಲಿ ಕರೆಂಟ್ ಇದೆಯೇ ಇಲ್ಲವೇ ಎಂಬುದನ್ನು ನಾವು ತಿಳಿಯುತ್ತೇವೆ ಆದರೆ ಅದು ಕೂಡ ಬಿಲ್ ಹೆಚ್ಚಿಸುವುದಕ್ಕೆ ಕಾರಣ ಎಂಬುದು ನಿಮಗೆ ಗೊತ್ತಾ.
ಮನೆಯ ಪ್ರತಿಯೊಂದು ಸ್ವಿಚ್ ಬೋರ್ಡ್ ನಲ್ಲಿ ಸೂಚಕ ಇರುವುದನ್ನು ನೀವು ನೋಡಿರಬಹುದು. ಈ ಸೂಚಕಗಳು 24 ಗಂಟೆ ಕಾರ್ಯನಿರ್ವಹಿಸುತ್ತಲೇ ಇರುತ್ತವೆ. ಈ ಕಾರಣದಿಂದಾಗಿ ಇದು ಕೂಡ ವಿದ್ಯುತ್ ಬಳಸಿಕೊಳ್ಳುತ್ತದೆ ಆದರೆ ನಾವು ಅದನ್ನು ಎಂದಿಗೂ ಗಮನಿಸುವುದೇ ಇಲ್ಲ. ದೇಶದಲ್ಲಿನ ವೋಲ್ಟೇಜ್ ಪೂರೈಕೆ 230-240 ಎಂದಾದರೆ ಸೂಚಕಗಳಲ್ಲಿ ಬಳಸಲಾಗುವ ವೋಲ್ಟೇಜ್ ಗಂಟೆಗೆ ಸುಮಾರು 0.3 ರಿಂದ 0.5 ವ್ಯಾಟ್ ಗಳು. ಈ ಸೂಚಕಗಳು 24 ಗಂಟೆ ವಿದ್ಯುತ್ ಪಡೆದುಕೊಳ್ಳುತ್ತದೆ ಎಂದು ಭಾವಿಸಿದರೆ 3 ಕೊಠಡಿ, ಒಂದು ಹಾಲ್ ,ಒಂದು ಅಡುಗೆ, ಮನೆ ಎರಡು ಸ್ನಾನದ ಗ್ರಹಗಳು ಒಟ್ಟಾಗಿ 10 ಸ್ವಿಚ್ ಬೋರ್ಡ್ ಇದೆ ಎಂದು ಭಾವಿಸಿ. ಅಲ್ಲಿಗೆ ದಿನಕ್ಕೆ 72 ವಿದ್ಯುತ್ ವ್ಯಾಟ್ ಕೇವಲ ಸೂಚಕದಿಂದ ಬಳಕೆಯಾಗುತ್ತದೆ.
ಸಾಮಾನ್ಯವಾಗಿ ಜೋರಾದ ಗಾಳಿ ಅಥವಾ ಮಳೆ ಬಂದಾಗ ನಮ್ಮ ಮನೆಯ ವಿದ್ಯುತ್ ಸಂಪರ್ಕ ಕಡಿತವಾಗಬಹುದು ಅಥವಾ ವೋಲ್ಟೇಜ್ ನಲ್ಲಿ ಬದಲಾವಣೆ ಉಂಟಾಗಬಹುದು. ಈ ಸಂದರ್ಭದಲ್ಲಿ ಎಲ್ಲಾ ಸ್ವಿಚ್ ಗಳನ್ನು ಆಫ್ ಮಾಡಿ ಸೂಚಕಗಳನ್ನು ಮಾತ್ರ ಗಮನಿಸಿ ಬದಲಾದ ಹಾಗೆ ಅದರಲ್ಲಿ ಬರುವ ಲೈಟ್ ಕೂಡ ಹೆಚ್ಚು ಕಡಿಮೆ ಆಗುವುದನ್ನು ನೀವು ಗಮನಿಸಬಹುದು. ಇದರಿಂದ ಇದು ತೆಗೆದುಕೊಳ್ಳುವ ವಿದ್ಯುತ್ ನಲ್ಲಿಯೂ ಬದಲಾವಣೆ ಆಗುತ್ತಿದೆ ಎಂದರ್ಥ. ಆರಂಭವಾದಾಗ ಈ ಸ್ವಿಚ್ ಕೂಡ ಆನ್ ಮಾಡಿ.
ಇನ್ವರ್ಟರ್ ಬಳಸುತ್ತಿದ್ದರೆ ಇನ್ವರ್ಟರ್ ಅನ್ನು ಕೆಲವು ಸ್ವಿಚ್ ಬೋರ್ಡ್ ಮೂಲಕ ಸಂಪರ್ಕಿಸಬಹುದು. ಇನ್ನೂ ಕೆಲವು ಸ್ವಿಚ್ ಬೋರ್ಡ್ ಗಳಲ್ಲಿ ಇನ್ವರ್ಟರ್ ಬಳಸುವಂತಿಲ್ಲ ಅಂತಹ ಸಂದರ್ಭದಲ್ಲಿ ಕರೆಂಟ್ ಹೋದಾಗ, ನೀವು ಇನ್ವರ್ಟರ್ ಕನೆಕ್ಟ್ ಮಾಡಿದ ಬೋರ್ಡ್ ಗಳಲ್ಲಿ ಇರುವ ಸೂಚಕಗಳು ಆಫ್ ಆಗುತ್ತವೆ. ಮತ್ತೆ ಕರೆಂಟ್ ಬಂದಾಗ ಅವು ಉರಿಯುತ್ತವೆ. ಅಲ್ಲಿಗೆ ಸ್ವಿಚ್ ಬೋರ್ಡ್ ನಲ್ಲಿ ಇರುವ ಸೂಚಕಗಳು ಕೂಡ ವಿದ್ಯುತ್ ಅನ್ನು ಹೆಚ್ಚು ಕನ್ಸ್ಯೂಮ್ ಮಾಡುತ್ತವೆ ಎಂದು ಅರ್ಥ.