ಸಾಮಾನ್ಯ ಬಲ್ಬ್‌ಗಳಿಗೆ ಹೋಲಿಸಿದರೆ ಎಲ್ಇಡಿ ಲೈಟ್‌ಗಳು ಹೆಚ್ಚು ಕಾಲ ಬಾಳಿಕೆ ಬರುತ್ತದೆ. ಎಲ್ಇಡಿ ಲೈಟ್ ತಯಾರಕರು ತಮ್ಮ ಉತ್ಪನ್ನವು 30,000 ಗಂಟೆಗಳಿಂದ 50,000 ಗಂಟೆಗಳವರೆಗೆ ಉರಿಯುತ್ತದೆ ಎಂದು ಭರವಸೆ ಕೊಡುತ್ತಾರೆ.
ಆದರೆ ಯಾವುದೇ ಉತ್ಪನ್ನವೂ ಅತೀ ಹೆಚ್ಚು ಬಾಳಿಕೆ ಬಂದಂತೆ ಅದರ ಮಾರಾಟ ಕಡಿಮೆಯಾಗುತ್ತದೆ ಅಲ್ಲವೆ. ಒಂದು ಮನೆಯಲ್ಲಿ 20 ವರ್ಷಗಳಿಗೆ ಬಲ್ಬ್‌ಗಳನ್ನು ಖರೀದಿ ಮಾಡದೇ ಹೋದರೆ ಎಲ್ಇಡಿ ಲೈಟ್ ಮಾರುಕಟ್ಟೆ ಕುಸಿಯುತ್ತದೆ. ಯಾವುದಾರೂ ಕಂಪನಿ ತಮಗೆ ನಷ್ಟವಾಗಲಿ ಎಂದು ಬಯಸುತ್ತಾರೆಯೆ..? ಹಾಗಾದರೆ ಎಲ್ಇಡಿ ಬಲ್ಬ್ ತಯಾರಕರು ಮಾತ್ರ ಹೇಗೆ ಅವರ ಬಲ್ಬ್ ದೀರ್ಘ ಬಾಳಿಕೆ ಬರಲಿ ಎಂದು ಹೇಗೆ ಬಯಸುತ್ತಾರೆ. ಹಾಗಾದರೆ ಈ ವಿಚಾರದಲ್ಲಿ ಗ್ರಹಕರಿಗೆ ಮೋಸವಾಗುತ್ತಿದೆಯೇ?
ಕೊಟ್ಟ ಮಾತಿಗೆ ತಪ್ಪುವುದಿಲ್ಲ ಅನ್ನೋದನ್ನು ರತನ್ ಟಾಟಾ ಅವರು ಯಾವಾಗಲೂ ಹೇಳುತ್ತಿರುತ್ತಾರೆ.
ಯಾವಾಗ ಕಾರುಗಳ ಬೆಲೆ ಎಲ್ಲವೂ ಗಗನ ಮುಟ್ಟಿತ್ತೋ ಆಗ ಅವರು 99,000 ಕ್ಕೆ ಒಂದು ಕಾರ್ ಲಾಂಚ್ ಮಾಡುವುದಾಗಿ ಹೇಳಿದ್ದರು, ಕೊಟ್ಟ ಮಾತಿನಂತೆಯೇ, ಮಧ್ಯಮ ವರ್ಗದ ಜನರು ಕೂಡಾ ಖರೀದಿ ಮಾಡಲು ಸಾಧ್ಯವಾಗುವಂತಾ ನ್ಯಾನೋ ಕಾರನ್ನು 1 ಲಕ್ಷ ರೂಗಳಿಗೆ ಲಾಂಚ್ ಮಾಡಿದ್ರು. ಲಾಭ ನಷ್ಟ ಎಷ್ಟೇ ಇರಲಿ ಕೊಟ್ಟ ಮಾತಿಗೆ ರತನ್ ಟಾಟಾ ಎಂದಿಗೂ ತಪ್ಪುವುದಿಲ್ಲ ಎಂಬೂದಕ್ಕೆ ಇದು ಒಂದು ಉದಾಹರಣೆಯಷ್ಟೆ.
ಟಾಟಾ ಕೊಟ್ಟ ಮಾತಿನಂತೆ ನಡೆಯುವುದಕ್ಕೂ ಎಲ್‌ಇಡಿ ಬಲ್ಬ್ ತಯಾರಿಕರಿಗೂ ಏನು ಸಂಬಂಧ ಅಂತೀರಾ ಅದಕ್ಕೂ ಇದ್ದಕ್ಕೂ ಕನೆಕ್ಷನ್ ಇದೆ.
ಎಲ್‌ಇಡಿ ಬಲ್ಬ್ ತಯಾರಿಕರೂ ಕೂಡಾ ತಾವು ತಯಾರು ಮಾಡುವ ಎಲ್‌ಇಡಿ ಲೈಟು 30,000 ರಿಂದ 50,000 ಗಂಟೆಗಳ ವರೆಗೆ ಬಾಳಿಕೆ ಬರುತ್ತದೆ ಎಂದಿದ್ದರು.
ಒಂದು ಮನೆಯಲ್ಲಿ 4 ಗಂಟೆಗಳ ಕಾಲ ಸತತವಾಗಿ ಬಲ್ಬ್‌ಗಳು ಉರಿದರೂ ಕೂಡಾ ಅವರು ಹೇಳುವ ಲೆಕ್ಕದಲ್ಲಿ ಒಂದು ಬಲ್ಬ್‌ನ ಕಾಲಾವಧಿ ಬರೊಬ್ಬರಿ 20 ವರ್ಷಗಳು.
ಈ ವಿಚಾರ ಕೇಳುವಾಗ ಅನೇಕರಿಗೆ ಆಶ್ವರ್ಯ ಆಗಬಹುದು. ಯಾಕೆಂದ್ರೆ ಸಾಮಾನ್ಯವಾಗಿ ನಾವು ಒಂದು ಅಥವಾ ಎರಡು ವರ್ಷಕ್ಕೆ ಎಲ್‌ಇಡಿ ಬಲ್ಬ್‌ಗಳನ್ನು ಬದಲಾಯಿಸುತ್ತೇವೆ. ಈ ಬಲ್ಬ್‌ಗಳನ್ನು ಬಳಸಲು ಆರಂಭಿಸಿ ಒಂದು ವರ್ಷವಾದ ನಂತರ ಬಲ್ಬ್‌ಗಳು ಪ್ರಕಾಶಮಾನವಾದ ಬೆಳಕನ್ನು ಹೊರಸೂಸುವುದನ್ನು ನಿಲ್ಲಿಸುತ್ತದೆ.
ಇದರಿಂದಾಗಿ ಅದಕ್ಕಿಂತ ದುಬಾರಿಯಾದ ಬಲ್ಬ್ಗಳನ್ನು ಖರೀದಿಸುವಂತ ಪರಿಸ್ಥಿತಿಗೆ ಇದು ನಮ್ಮನ್ನು ದೂಡುತ್ತದೆ. ಆದ್ದರಿಂದ 1 ರಿಂದ 2 ವರ್ಷಗಳು ಮಾತ್ರ ನಾವು ಒಂದು ಬಲ್ಬ್ ನ್ನು ಬಳಸುತ್ತೇವೆ.
ಹೀಗೆ ಬಲ್ಬ್ಗಳು ಕಡಿಮೆ ಕಾಲಾವಧಿಯಲ್ಲಿ ಶಾರ್ಟ್ ಆಗುವಂತೆ ಮಾಡಿ ಬಲ್ಬ್ ಕಂಪನಿಗಳು ಗ್ರಾಹಕರನ್ನು ಮತ್ತೆ ಮತ್ತೆ ಮರು ಖರೀದಿಸುವಂತೆ ಮಾಡುತ್ತಿವೆ.