ಪ್ರಪಂಚದ ಅತಿ ದೊಡ್ಡ ಚಲನಚಿತ್ರ ಪ್ರಶಸ್ತಿ ಅಂದರೆ ಅದು ಆಸ್ಕರ್. ಅತ್ಯುತ್ತಮ ಚಿತ್ರಗಳಿಗೆ ಆಸ್ಕರ್ ಎನ್ನುವ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗುತ್ತದೆ. ಆಸ್ಕರ್ ಟ್ರೋಫಿ ಪಡೆಯಲು ಸಿನಿಮಾ ರಂಗ ಸಾಕಷ್ಟು ಕಷ್ಟಪಡುತ್ತದೆ. ಇದು ಇಂಟರ್ನ್ಯಾಷನಲ್ ಸಿನಿಮಾ ಪ್ರಶಸ್ತಿ. ಇದು ಸಿಗಬೇಕು ಅಂದ್ರೆ ಎಷ್ಟು ವರ್ಷದ ತಪಸ್ಸು ಬೇಕು. ಅಷ್ಟೂ ಸುಲಭದಲ್ಲಿ ಆಸ್ಕರ್ ಪ್ರಶಸ್ತಿ ಸಿಗುವುದಿಲ್ಲ ಆದರೆ ಯಾವಾಗ ಕಲಾವಿದ ತನ್ನ ಕೈಯಲ್ಲಿ ಹೊಳೆಯುವ ಈ ಚಿನ್ನದ ಆಸ್ಕರ್ ಟ್ರೋಫಿಯನ್ನು ಎತ್ತುತ್ತಾನೋ, ಆಗ ನನ್ನ ಜನ್ಮ ಸಾರ್ಥಕವಾಯಿತು ಎಂದು ಅಂದುಕೊಳ್ಳುವುದು ಸುಳ್ಳಲ್ಲ.
ಆಸ್ಕರ್ ಗಾಗಿ ಕಲಾವಿದರ ಹೋರಾಟ:
ಹೌದು ಹಾಲಿವುಡ್ ನಿಂದ ಬಾಲಿವುಡ್ ವರೆಗೆ ಪ್ರಪಂಚದಾದ್ಯಂತ ಕಲಾವಿದರು ಆಸ್ಕರ್ ಪ್ರಶಸ್ತಿಗಾಗಿ ಶ್ರಮಿಸುತ್ತಾರೆ ಕಷ್ಟಪಟ್ಟುಯನ್ನು ತಮ್ಮದಾಗಿಸಿಕೊಳ್ಳಲು ಬಯಸುತ್ತಾರೆ. ಅಂದಹಾಗೆ ಆಸ್ಕರ್ ಪ್ರಶಸ್ತಿಯ ಬೆಲೆ ಎಷ್ಟು ಗೊತ್ತಾ ತಿಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಆಸ್ಕರ್ ಪ್ರಶಸ್ತಿಯಿಂದ ಒಂದು ರೂಪಾಯಿ ಕೂಡ ಹುಟ್ಟೋದಿಲ್ಲ ಎನ್ನುವುದು ನಿಮಗೆ ಗೊತ್ತಾ!
ಆಸ್ಕರ್ ಎನ್ನುವ ಚಿನ್ನದ ಟ್ರೋಫಿಯ ಬೆಲೆ ಎಷ್ಟು?
ಆಸ್ಕರ್ ನ ಪಳಪಳ ಎಂದು ಹೊಳೆಯುವ ಈ ಟ್ರೋಫಿ ನೋಡಿದರೆ ಎಷ್ಟು ದುಬಾರಿ ಆಗಿರಬಹುದು ಎಂದು ಎಲ್ಲರಿಗೂ ಅನ್ನಿಸುತ್ತೆ ಆದರೆ ಈ ಆಸ್ಕರ್ ಟ್ರೋಫಿಯ ಬೆಲೆ ಕೇವಲ ಒಂದು ಡಾಲರ್ ಅಂದರೆ ಭಾರತೀಯ ಬೆಲೆಯಲ್ಲಿ 81.89 ರೂಪಾಯಿಗಳು ಮಾತ್ರ. ಈ ಟ್ರೋಫಿ ಹಿಡಿದುಕೊಂಡು ಹೋದರೆ ಒಂದು ಹೊತ್ತಿನ ಊಟ ಕೂಡ ಸಿಗಲ್ಲ. ಆದರೂ ಈ ಟ್ರೋಫಿಯ ಬಗ್ಗೆ ಸ್ಟಾರ್ ಗಳ ಕನಸು ಕಮ್ಮಿಯಾಗಿಲ್ಲ. ಮಾರಾಟ ಮಾಡಲು ಸಾಧ್ಯವಿಲ್ಲ ಹರಾಜು ಹಾಕಲು ಆಗುವುದಿಲ್ಲ.
ಆಸ್ಕರ್ ಟ್ರೋಫಿ ಅಗ್ಗವಾಗಿದ್ದರು ಅದನ್ನು ಸಾಧಿಸಲು ಸಾಕಷ್ಟು ವರ್ಷದ ಶ್ರಮ ಪಡಬೇಕು ಎನ್ನುವುದು ಹಲವರಿಗೆ ಗೊತ್ತಿಲ್ಲ ಅದನ್ನ ಮಾರಾಟ ಮಾಡಲು ಅಥವಾ ಹರಾಜು ಮಾಡಲು ಪ್ರಯತ್ನಿಸಿದರೆ ಅದು ಸಾಧ್ಯವಾಗುವುದಿಲ್ಲ. ಹೀಗೆ ಮಾಡುವುದು ಅಪರಾಧವಾಗುತ್ತದೆ.
ಆಸ್ಕರ್ ಪ್ರಶಸ್ತಿಗೆ ಎಷ್ಟು ಹಣ ಖರ್ಚಾಗುತ್ತೆ ಗೊತ್ತಾ?
ಈ ಪೆರಶಸ್ತಿಯನ್ನು ಪಡೆದ ನಂತರ ಅದನ್ನು ಉಳಿಸಿಕೊಳ್ಳಲು ಇಷ್ಟವಿಲ್ಲದಿದ್ದರೆ ಇದನ್ನು ಕೇವಲ ಒಂದು ಡಾಲರ್ ಗೆ ಅಕಾಡೆಮಿಗೆ ಮಾರಾಟ ಮಾಡಬೇಕಾಗುತ್ತದೆ ಆಸ್ಕರ್ ಪ್ರಶಸ್ತಿ ತಯಾರಿಸಲು 32,000 ಖರ್ಚಾಗುತ್ತವೆ ಆದರೆ ಅಕಾಡೆಮಿ ಅದನ್ನು ಕೇವಲ ಒಂದು ಡಾಲರ್ ಗೆ ಖರೀದಿ ಮಾಡಬಹುದು.
ಹಾಸ್ಪಿಟಲ್ ಟ್ರೋಫಿ ತಯಾರಿಸೋದು ಹೇಗೆ ಗೊತ್ತಾ?
Oscar Trophy ಮೇಲಿನ ಚಿನ್ನದ ವರ್ಣವನ್ನು ಘನ ಕಂಚಿನಿಂದ ಮಾಡಲಾಗುತ್ತದೆ ನಂತರ ಅದಕ್ಕೆ 24 ಕ್ಯಾರೆಟ್ ಚಿನ್ನವನ್ನು ಲೇಪಿಸಲಾಗುತ್ತದೆ. ನೂತನ ತಂತ್ರಜ್ಞಾನ ಬಳಸಲಾಗುತ್ತಿದ್ದು ಮೂರು ಪ್ರಿಂಟರ್ ನೊಂದಿಗೆ ತಯಾರಿಸಿ ಅದನ್ನ ಮೇಣದೊಂದಿಗೆ ಬೇರೆಸಲಾಗುತ್ತದೆ. ತಣ್ಣಗಾದಾಗ ಅದನ್ನ ಸೆರಾಮಿಕ್ ಶೆಲ್ ನಿಂದ ಜೋಡಿಸಲಾಗುತ್ತದೆ.
ಕೆಲವು ದಿನಗಳ ವರೆಗೆ 1600° ಎಫ್ ನಲ್ಲಿ ಇಟ್ಟು ಸುಡಲಾಗುತ್ತದೆ ಬಳಿಕ ಆ ದ್ರವ ಕಂಚಾಗಿ ಬದಲಾಗುತ್ತದೆ. ಇದು ತಂಪಾದ ನಂತರ ಅದಕ್ಕೆ ಚಿನ್ನದ ಲೇಪನ ಮಾಡಿ ಫೈನಲ್ ಟಚ್ ನೀಡಲಾಗುತ್ತದೆ. ಈ ಟ್ರೋಫಿ 13.5 ಇಂಚು ಎತ್ತರ ಹಾಗೂ 8.5 ಫೌಂಡ್ ತೂಕ ಹೊಂದಿರುತ್ತದೆ. ಈ ಟ್ರೋಫಿ ತಯಾರಿಸುವುದಕ್ಕೆ 3 ತಿಂಗಳ ಸಮಯ ಬೇಕು.