Rent Agreement Rules: ಬಾಡಿಗೆ ಅಗ್ರಿಮೆಂಟ್ 11 ತಿಂಗಳಿಗೆ ಮಾತ್ರ ಯಾಕೆ ಮಾಡುತ್ತಾರೆ ಗೊತ್ತಾ? ಬಾಡಿಗೆ ಮನೆಯಲ್ಲಿ ಇರುವವರು ತಪ್ಪದೇ ಓದಲೇಬೇಕು!
ಉದ್ಯೋಗಕ್ಕಾಗಿಯೋ, ಅಧ್ಯಯನಕ್ಕಾಗಿಯೋ ತಮ್ಮ ಊರನ್ನು ಬಿಟ್ಟು ಬೇರೆ ಊರಿಗೆ ವಲಸೆ ಹೋಗುವುದು ಸಾಮಾನ್ಯ. ಹೀಗೆ ಬೇರೆ ಊರುಗಳಿಗೆ ಹೋದಾಗ ಅಲ್ಲಿ ವಾಸಿಸಲು ಒಂದು ಮನೆ ಅಂತೂ ಬೇಕಲ್ವಾ? ಎಲ್ಲರಿಗೂ ಹೋದ ಸ್ಥಳದಲ್ಲಿ ಸ್ವಂತ ಮನೆ ಖರೀದಿ ಮಾಡಲು ಸಾಧ್ಯವಿಲ್ಲ ಹಾಗಾಗಿ ಬಹುತೇಕರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಾರೆ.
ಒಂದು ವೇಳೆ ನೀವು ಬಾಡಿಗೆ ಮನೆಯಲ್ಲಿ ಇದ್ದರೆ ಅಥವಾ ಈ ಹಿಂದೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೆ ಈ ವಿಷಯ ನಿಮಗೂ ಗೊತ್ತಿರಬಹುದು. ಬಾಡಿಗೆದಾರ ಅಂದರೆ ರೆಂಟ್ ಗೆ ಮನೆ ಕೊಡುವವರ ಹಾಗೂ ಬಾಡಿಗೆ ತೆಗೆದುಕೊಳ್ಳುವವರ ನಡುವೆ ಒಂದು ಒಪ್ಪಂದ ಮಾಡಿಕೊಳ್ಳಬೇಕು. ಅದನ್ನೇ ರೆಂಟ್ ಅಗ್ರಿಮೆಂಟ್(Rent Agreement) ಎನ್ನುತ್ತಾರೆ.
ರೆಂಟ್ ಅಗ್ರಿಮೆಂಟ್ ನಲ್ಲಿ ಏನಿರುತ್ತೆ?!
ಮನೆಯ ಬಾಡಿಗೆಗೆ ತೆಗೆದುಕೊಳ್ಳುವಾಗ ಬಾಡಿಗೆ ಒಪ್ಪಂದ ಅಥವಾ ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳಬೇಕಾಗುತ್ತದೆ. ಇದರಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುವವರು ಹಾಗೂ ಬಾಡಿಗೆ ಕೊಡುವವರು ಇಬ್ಬರ ಹೆಸರು, ವಿಳಾಸ, ಬಾಡಿಗೆ ಹಣದ ಮೊತ್ತ, ಬಾಡಿಗೆಯ ಅವಧಿ ಈ ಎಲ್ಲಾ ರೀತಿಯ ಷರತ್ತುಗಳನ್ನು ಬರೆಯಲಾಗಿರುತ್ತದೆ. ಸಾಮಾನ್ಯವಾಗಿ ಬಾಡಿಗೆ ಒಪ್ಪಂದವನ್ನು 11 ತಿಂಗಳು ಅವಧಿ ಹೊಂದಿರುತ್ತದೆ. ಆದರೆ 11 ತಿಂಗಳಿಗೆ ಮಾತ್ರ ಯಾಕೆ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ ಎಂಬುದು ನಿಮಗೆ ಗೊತ್ತಾ?
11 ತಿಂಗಳಿಗೆ ಮಾತ್ರ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದರ ಹಿಂದೆ ಒಂದು ಕಾರಣವಿದೆ. ನೋಂದಣಿ ಕಾಯ್ದೆ 1908 ಸೆಕ್ಷನ್ 17ರ ನಿಯಮದ ಪ್ರಕಾರ 11 ತಿಂಗಳಿಗೆ ಬಾಡಿಗೆ ಒಪ್ಪಂದ ಮಾಡಿಕೊಳ್ಳಬೇಕಾಗುತ್ತದೆ. ಒಂದು ವರ್ಷಕ್ಕಿಂತ ಹೆಚ್ಚು ಸಮಯ ಬಾಡಿಗೆ ಮನೆಯಲ್ಲಿ ಇರುವುದಾದರೆ ಒಪ್ಪಂದ ಮಾಡಿಕೊಳ್ಳಬೇಕು. ಇಲ್ಲವಾದರೆ ಈ ಒಪ್ಪಂದದ ನೋಂದಣಿ ಕಡ್ಡಾಯವಲ್ಲ. 12 ತಿಂಗಳಿಗಿಂತ ಕಡಿಮೆ ಅವಧಿ ಬಾಡಿಗೆ ಒಪ್ಪಂದ ಮಾಡಿಕೊಳ್ಳುವುದಾದರೆ ನೋಂದಣಿ ಮಾಡಿಸುವ ಅಗತ್ಯವಿಲ್ಲ ಇದರಿಂದ ನೋಂದಾವಣೆ ಚಾರ್ಜ್ ಉಪ ರಿಜಿಸ್ಟರ್ ಕಚೇರಿಗೆ ಅಲೆಯುವುದು ಎಲ್ಲವೂ ತಪ್ಪುತ್ತದೆ.
ಈ ಕಾರಣಕ್ಕಾಗಿ 11 ತಿಂಗಳ ಒಪ್ಪಂದ ನಡೆಯುತ್ತದೆ
ರೆಂಟ್ ಅಗ್ರಿಮೆಂಟ್ ಮಾಡುವಾಗ ಸ್ಟ್ಯಾಂಪ್ ಪೇಪರ್(Stamp Paper) ಮೇಲೆ ಮುದ್ರಿಸಲಾಗುತ್ತದೆ ಒಂದು ವರ್ಷಕ್ಕಿಂತ ಕಡಿಮೆ ಅವಧಿಯ ರೆಂಟ್ ಅಗ್ರಿಮೆಂಟ್ ಆಗಿದ್ದರೆ ನೀವು ಸ್ಟಾಂಪ್ ಪೇಪರ್ ಗೆ ಹಣ ಕೊಟ್ಟು, ರಿಜಿಸ್ಟರ್(Register) ಮಾಡಿಸುವುದು ಕೂಡ ಉಳಿಸಬಹುದು. ಇಂತಹ ಅನಗತ್ಯ ಖರ್ಚನ್ನು ಉಳಿಸುವ ಸಲುವಾಗಿ ಅಥವಾ ಮನೆ ಮಾಲೀಕರು ಹಾಗೂ ರೆಂಟ್ ಗೆ ಬರುವವರ ಜೊತೆ ಒಪ್ಪಂದ ಮಾಡಿಕೊಂಡು ಒಂದು ವರ್ಷದ ಬದಲಿಗೆ 11 ತಿಂಗಳ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ.
ಅಂದರೆ ರೆಂಟ್ ಅಗ್ರಿಮೆಂಟ್ ಸಲುವಾಗಿ ಹೆಚ್ಚು ಖರ್ಚು ಮಾಡುವುದು ಹಾಗೂ ಉಳಿದ ಕಾನೂನು ಪ್ರಕ್ರಿಯೆಗಾಗಿ ಅಥವಾ ರಿಜಿಸ್ಟ್ರೇಷನ್ ಗಾಗಿ ಅಲೆದಾಡುವುದು ತಪ್ಪುತ್ತದೆ. ಈ ಕಾರಣಕ್ಕಾಗಿ 12 ತಿಂಗಳ ಬದಲು 11 ತಿಂಗಳ ರೆಂಟ್ ಅಗ್ರಿಮೆಂಟ್ ಮಾಡಿಕೊಳ್ಳಲಾಗುತ್ತದೆ.
ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳುವುದು ಹೇಗೆ
11 ತಿಂಗಳಿಗಿಂತ ಹೆಚ್ಚು ಅಥವಾ ಕಡಿಮೆ ಅವಧಿಗೂ ಕೂಡ ಒಪ್ಪಂದ ಮಾಡಿಕೊಳ್ಳಬಹುದು. ವ್ಯಕ್ತಿ ಎಷ್ಟು ಬಾಡಿಗೆ ಕೊಡುತ್ತಾನೆ ಹಾಗೂ ಆ ಒಪ್ಪಂದ ಎಷ್ಟು ಅವಧಿಯದಾಗಿರುತ್ತದೆ ಎಂಬುದರ ಆಧಾರದ ಮೇಲೆ ಮುದ್ರಾಂಕ ಶುಲ್ಕ ನಿಗದಿಪಡಿಸಲಾಗುತ್ತದೆ. ದೀರ್ಘಾವಧಿಯ ಬಾಡಿಗೆ ಅಗ್ರಿಮೆಂಟ್ ಗಳಿಗೆ ಹೆಚ್ಚಿನ ಮುದ್ರಾಂಕ ಶುಲ್ಕ ಇರುತ್ತದೆ.
ಹೆಚ್ಚಿನ ಸಮಯದ ಒಪ್ಪಂದ ಮಾಡಿಕೊಳ್ಳುವುದಾದರೆ ಅದಕ್ಕೆ ರಿಜಿಸ್ಟರ್ ಮಾಡಿಸುವುದಕ್ಕಾಗಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಅದೇ ನೀವು 11 ತಿಂಗಳು ಅಥವಾ ಅದಕ್ಕಿಂತ ಕಡಿಮೆ ತಿಂಗಳ ಅವಧಿಯ ಒಪ್ಪಂದ ಮಾಡಿಕೊಂಡರೆ ಯಾವುದೇ ಹೆಚ್ಚುವರಿ ಶುಲ್ಕಭರಿಸಬೇಕಾಗಿಲ್ಲ. ಸುಮ್ಮನೆ ರಿಜಿಸ್ಟ್ರೇಷನ್ ಗಾಗಿ ಹೆಚ್ಚು ಖರ್ಚು ಮಾಡುವ ಬದಲು 11 ತಿಂಗಳ ಅಗ್ರಿಮೆಂಟ್ ಮಾಡಿಕೊಳ್ಳುವುದೇ ಉತ್ತಮ ಅಲ್ಲವೇ!