PM Kisan Yojana: ಪಿಎಂ ಕಿಸಾನ್ ಯೋಜನೆಯ ಹಣ ಖಾತೆ ತಲುಪಿಲ್ಲವೇ..?? ಹಾಗದರೆ ಹೀಗೆ ಮಾಡಿ

Advertisement
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂಬ ಯೋಜನೆಯೂ ರೈತ ಸ್ನೇಹಿ ಯೋಜನೆಯಾಗಿದ್ದು, ಈ ಯೋಜನೆಯಡಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೈತರಿಗೆ ವಾರ್ಷಿಕವಾಗಿ 6 ಸಾವಿರ ರೂಪಾಯಿ ಆರ್ಥಿಕ ನೆರವು ನೀಡುತ್ತದೆ.
ಈ ಯೋಜನೆಯ ಅನುಕೂಲ ಪಡೆದುಕೊಳ್ಳಲು ಜನ್ಧನ್ ಯೋಜನೆಯ ಮೂಲಕ ಬ್ಯಾಂಕ್ ಖಾತೆ ತೆರೆಯಲ್ಪಟ್ಟಿದ್ದು, ನೇರವಾಗಿ ಹಣ ರೈತರ ಖಾತೆಗೆ ತಲುಪುತ್ತದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ಅಂದರೆ ವರ್ಷದಲ್ಲಿ ಮೂರು ಕಂತುಗಳ ಮೂಲಕ 2000 ರೂ. ಹಣವನ್ನು ರೈತರ ಖಾತೆಗಳಿಗೆ ಜಮೆ ಮಾಡುತ್ತದೆ. ಕೇಂದ್ರದ ನರೇಂದ್ರ ಮೋದಿ ಸರಕಾರ ರೈತರ ಖಾತೆಗೆ ಇದುವರೆಗೆ 13 ಕಂತುಗಳಲ್ಲಿ ಹಣ ಜಮೆ ಮಾಡಿದೆ. ಪಿಎಂ ಕಿಸಾನ್ ಪೋರ್ಟಲ್’ನಲ್ಲಿ ಇದುವರೆಗೂ 12 ಕೋಟಿಗೂ ಹೆಚ್ಚು ರೈತರು ನೋಂದಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೆ ಕೇಂದ್ರ ಸರ್ಕಾರದ ಹಣ ಕೇವಲ 8.53 ಕೋಟಿ ಫಲಾನುಭವಿಗಳನ್ನು ತಪುಪಿದೆ.
Advertisement
ಆದರೆ ಸುಮಾರು ಮೂರೂವರೆ ಕೋಟಿ ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎನ್ನಲಾಗಿದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಂಚನೆಯನ್ನ ತಡೆಗಟ್ಟುವ ಸಲುವಾಗಿ, ಮೋದಿ ಸರ್ಕಾರವು ಅನೇಕ ರೀತಿಯ ಫೀಚರ್‌ಗಳನ್ನು ತಂದಿದೆ. ಇ-ಕೆವೈಸಿ, ಪರಿಶೀಲನೆಯ ಮೂಲಕವು ನಿಖರತೆ ತಿಳಿಯುವ ಪ್ರಯತ್ನ ನಡೆದಿದೆ. ಆದರೆ ಅನೇಕ ರೈತರ ಇ-ಕೆವೈಸಿ ಪೂರ್ಣಗೊಂಡಿದ್ದರೂ, 13 ನೇ ಕಂತು ಇನ್ನೂ ಬಾಕಿ ಉಳಿದಿದೆ. ಖಾತೆ ಸ್ಥಿತಿಯ ಪರಿಷ್ಕರಣೆಯ ಕಾರಣದಿಂದ ಖಾತೆಗೆ ಹಣ ಜಮೆ ಆಗದಿರಬಹುದು.
ಇನ್ನು ಇ-ಕೆವೈಸಿ ಮಾಡಿದ ನಂತರವೂ ಕಂತುಗಳು ಜಮೆ ಆಗದೇ ಹೋಗಿದ್ದರೆ ಇದ್ದಕ್ಕೆ ಪರಿಹಾರ ಇಲ್ಲಿದೆ, ಸಂಪರ್ಕಿಸಿ.!
- ಪಿಎಂ ಕಿಸಾನ್ ಟೋಲ್ ಫ್ರೀ ಸಂಖ್ಯೆ: 18001155266
- ಪಿಎಂ ಕಿಸಾನ್ ಸಹಾಯವಾಣಿ ಸಂಖ್ಯೆ: 155261
- ಪಿಎಂ ಕಿಸಾನ್ ದೂರವಾಣಿ ಸಂಖ್ಯೆಗಳು: 011-23381092, 23382401
- ಪಿಎಂ ಕಿಸಾನ್ ಹೊಸ ಸಹಾಯವಾಣಿ: 011-24300606 / 0120-6025109
- ಇ-ಮೇಲ್ ಐಡಿ: [email protected]
Advertisement