Gold-Silver Price: ಚಿನ್ನ ಬೆಳ್ಳಿ ಬೆಲೆಯಲ್ಲಿ ಮತ್ತಷ್ಟು ಏರಿಳಿತ, ಇಂದಿನ ದರ ಹೇಗಿದೆ

Advertisement
ಚಿನ್ನ (Gold) ಎಂಬುದು ಬಹಳ ಮುಖ್ಯ, ಉಳಿತಾಯ ಬಂಡವಾಳದಲ್ಲಿ ಚಿನ್ನವು ಕೂಡ ಪ್ರಮುಖಪಾತ್ರ ವಹಿಸುತ್ತದೆ. ಆದರೆ ಚಿನ್ನ ಖರೀದಿಸುವ ಗ್ರಾಹಕರಿಗೆ ನಿರಾಶೆ ಯಾಗುತ್ತಲೇ ಇದೆ, ದಿನ ದಿಂದ ದಿನಕ್ಕೆ ದರ ಹೆಚ್ಚುತ್ತಲೆ ಇದೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಆಗುತ್ತಿದೆ, ಇದಕ್ಕೆ ಅನುಗುಣವಾಗಿ, ದೇಶೀಯ ಮಾರುಕಟ್ಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ಏರಿಕೆ ಕಂಡುಬಂದಿದೆ. ದೇಶದ ಎಲ್ಲಾ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಹಾಗೂ ಬೆಳ್ಳಿ (Silver) ಬೆಲೆಯಲ್ಲಿ ಏರಿಕೆಯಾಗುತ್ತಲೆ ಇದೆ
ಹೇಗಿದೆ ದರ:
ಚಿನ್ನ ದ ಇದೀಗ ದರದಲ್ಲಿ ಏರುಗತಿಯಾಗುತ್ತಿದೆ. ಆಭರಣ ಪ್ರಿಯರಿಗೆ ದಿನೇ ದಿನೇ ನಿರಾಶೆ ಆಗುತ್ತಿದೆ. ಚಿನ್ನದ ಬೆಲೆಯ ಇಳಿಕೆ ನೀರಿಕ್ಷೆಯಲ್ಲಿರುವವರಿಗೆ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಏರಿಕೆ ಸುದ್ದಿ ಇದೆ, ದೇಶದಲ್ಲಿ 22 ಕ್ಯಾರೆಟ್, ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂಪಾಯಿ ಏರಿಕೆ ಆಗಿದ್ದರೆ, 10 ಗ್ರಾಂ ಬೆಲೆ 500 ರೂಪಾಯಿ ಏರಿಕೆಯಾಗಿದೆ. ಬೆಳ್ಳಿ ದರವೂ ಏರಿಕೆ ಕಂಡು ಬಂದಿದ್ದು , ಬೆಂಗಳೂರಲ್ಲಿ ಗ್ರಾಂ ಗೆ 72.50 ರೂಪಾಯಿ ಇದ್ದು, 10 ಗ್ರಾಂ ಗೆ 727 ರೂಪಾಯಿ ಆಗಿದೆ.
Advertisement
ಬೆಳ್ಳಿ ದರ ಹೇಗಿದೆ:
ಚಿನ್ನ ದಂತೆ ಬೆಳ್ಳಿ ದರದಲ್ಲಿ ಕೂಡ ಹೆಚ್ಚಳವಾಗಿದೆ. ಭಾರತದಲ್ಲಿ ಬೆಳ್ಳಿ ದರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಮೇಲೆ ಹಾಗೂ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿದ್ದು, ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ. ಈ ನಿಟ್ಟಿನಲ್ಲಿ ಬೆಲೆಯ ದರವು ಹೆಚ್ಚಾಗಿದೆ, ಇಂದು ಬೆಳ್ಳಿ ದರದಲ್ಲಿ ಬೆಂಗಳೂರಿನಲ್ಲಿ ಕೆಜಿ ಬೆಳ್ಳಿಗೆ 62,700 ರೂ ಇದೆ. ಮುಂಬೈ 62,700 ರೂ, ಚೆನ್ನೈನಲ್ಲಿ 67,600 ರೂ, ಮಂಗಳೂರು 67,600 ರೂ ಆಗಿದೆ.
ಯಾವ ದಿನದಂದು ಚಿನ್ನದ ಬೆಲೆಗಳು ಏರಿಕೆ, ಇಳಿಕೆ ಹೇಗೆ ಬದಲಾಗುತ್ತೆ ಅಂತ ಹೇಳೋದು ಕಷ್ಟ. ಯಾಕಂದ್ರೆ ಜಾಗತಿಕ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ದೇಶದ ಚಿನ್ನದ ಬೆಲೆಗಳೂ ಬದಲಾಗುತ್ತವೆ
Advertisement