ಆಧಾರ್ ಕಾರ್ಡ್ (Aadhaar) ಎಂಬುದು ಬಹಳ ಪ್ರಮುಖ ದಾಖಲೆ,ಎಲ್ಲೆ ಹೋದರೂ ಮಾಹಿತಿಗಾಗಿ ಆಧಾರ್ ಕೇಳಿಯೇ ಕೇಳ್ತಾರೆ, 2016ರ ಪ್ರಕಾರ ಆಧಾರ್ ಪಡೆದ ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಅತೀ ಮುಖ್ಯವಾಗುತ್ತದೆ, ಹೀಗೆ ಮಾಡುವುದರಿಂದ ಆಧಾರ್ ನಲ್ಲಿ ಏನಾದರೂ ಅಡೆತಡೆ ಉಂಟಾಗಿದ್ದರೆ ಮಾಹಿತಿ ತಿಳಿಯುತ್ತದೆ.
ಆನ್‌ಲೈನ್‌ನಲ್ಲಿ Aadhaar ದಾಖಲೆ ಅಪ್‌ಡೇಟ್ ಮಾಡಿ:
ನೀವು ಆಧಾರ್ ಕೇಂದ್ರಕ್ಕೆ ಹೋಗದೇ ಆನ್ಲೈನ್ನಲ್ಲೇ ಮನೆಯಲ್ಲೇ ದಾಖಲೆಗಳನ್ನು ಅಪ್‌ಡೇಟ್ ಮಾಡಬಹುದು, ಮೈ ಆಧಾರ್ ಪೋರ್ಟಲ್ ವೆಬ್ ಸೈಗ್ ಗೆ ಹೋಗಿ ನಿಮ್ಮ ಆಧಾರ್ ನಂಬರ್ (Aadhaar Numer) ಯೂಸರ್ ನೇಮ್, ಧಾರ್ ಜೊತೆಗೆ ನೊಂದಾಯಿತವಾದ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಆ ಒಟಿಪಿ ಹಾಕಿ ಮೈ ಆಧಾರ್ ಪೋರ್ಟಲ್ಗೆ ಲಾಗಿನ್ ಆಗಿ
Aadhaar Update ಉಚಿತ ಸೌಲಭ್ಯ:
ಭಾರತದ ವಿಶಿಷ್ಠ ಗುರುತಿನ ಪ್ರಾಧಿಕಾರ (ಯುಐಡಿಎಐ) ಆನ್‌ಲೈನ್‌ನಲ್ಲಿ ಆಧಾರ್ ಕಾರ್ಡ್ ಮಾಹಿತಿ ಅಪ್‌ಡೇಟ್ ಮಾಡುವ ಸೌಲಭ್ಯವನ್ನು ಉಚಿತವಾಗಿ ನೀಡಲು ನಿರ್ಧಾರಿಸಲಾಗಿದೆ, ಯಾವುದೇ ಆಧಾರ್ ಕೇಂದ್ರಕ್ಕೆ ಹೋಗದೇ, ಆನ್‌ಲೈನ್‌ಲ್ಲಿಯೇ ಡಾಕ್ಯುಮೆಂಟ್ ಅಪ್‌ಡೇಟ್ ಮಾಡಬಹುದು. 3 ತಿಂಗಳವರೆಗೆ ಈ ಸೇವೆ ಲಭ್ಯವಿರುತ್ತೆ. ಜನರು ಇದರ ಉಪಯೊಗ ಸದುಪಯೋಗ ಪಡೆದು ಕೊಳ್ಳಬಹುದು, ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಕೇಂದ್ರಕ್ಕೆ ಹೋಗಿ ಕಾರ್ಡ್ ವಿವರಗಳನ್ನು ನವೀಕರಿಸಲು ಬಯಸಿದರೆ, ಅವರು 50 ರೂ ಶುಲ್ಕವನ್ನು ಪಾವತಿಸಬೇಕಾಗಿತ್ತು, ಈಗ ಉಚಿತವಾಗಿ ಮಾಡಬಹುದು.