ಚಿನ್ನ (Gold) ಬೆಳ್ಳಿ (Silver) ದರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ, ಗೋಲ್ಡ್ ಪ್ರೀಯರಿಗೆ ಮತ್ತಷ್ಟು ನಿರಾಸೆ ಯಾಗುತ್ತಲೇ ಇದೆ , ಶುಭ ಸಮಾರಂಭಗಳು ಇಂದು ಹೆಚ್ಚು ನಡೆಯುವುದರಿಂದಲೂ ಆಭರಣ ವಹಿವಾಟು ನಡೆಯುತ್ತಲೇ ಇರುತ್ತದೆ. ಈ ಕಾರಣಕ್ಕಾಗಿ ಪ್ರತಿನಿತ್ಯ ಹಲವರು ಚಿನ್ನ, ಬೆಳ್ಳಿ ದರವನ್ನು ಪರಿಶೀಲಿಸುತ್ತಾರೆ.ಇಂದಿನ ದರ ಹೇಗಿದೆ ಇಲ್ಲಿ ದೆ ಮಾಹಿತಿ.
ಯಾವ ದಿನದಂದು ಚಿನ್ನದ ಬೆಲೆಗಳು ಹೇಗೆ ಪರಿಣಾಮ ಬೀರುತ್ತೇ ಹೇಳೋದು ಕಷ್ಟ. ಯಾಕಂದ್ರೆ ಜಾಗತಿಕ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ನಮ್ಮ ದೇಶದ ಚಿನ್ನದ ಬೆಲೆಗಳೂ ಬದಲಾವಣೆ ಗೊಳ್ಳುತ್ತವೆ , ಅಲ್ಲದೆ, ಇಳುವರಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ, ಹೀಗಾಗಿ ಚಿನ್ನದ ಬೆಲೆ ಸ್ಥಿರವಾಗಿರುವುದಿಲ್ಲ.
ಇಂದು ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ ರೂ. 5,385 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) – ರೂ. 5,874 ಆಗಿದೆ. ಇನ್ನು ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ – ರೂ. 43,080 ಆಗಿದೆ. ಇನ್ನು ಬೆಳ್ಳಿ ದರದತ್ತ ಗಮನಹರಿಸುವುದಾದರೆ, ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 69,800 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ಬೆಲೆ 69,200 ರೂ. ಆಗಿತ್ತು. ಅಂದರೆ ಒಂದು ದಿನದಲ್ಲಿ ಬರೋಬ್ಬರಿ 600 ರೂ. ಏರಿಕೆ ಕಂಡುಬಂದಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರುವುದಕ್ಕೆ ಸಂಶಯವೇ ಇಲ್ಲ, ಹೆಚ್ಚಾಗಿ ನೆಲಸಿರುವ ಅರಬ್ ದೇಶಗಳು, ಅಮೆರಿಕ, ಸಿಂಗಾಪುರ, ಮಲೇಷ್ಯಾ ದೇಶಗಳಲ್ಲಿ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಕಡಿಮೆ ಇದೆ. ಯುಎಇಯ ಭಾಗವಾಗಿರುವ ದುಬೈ, ಅಬುಧಾಬಿ ಮತ್ತು ಶಾರ್ಜಾ ನಗರಗಳಲ್ಲಿ ಬೆಲೆ ತುಸು ಹೆಚ್ಚೇ ಏರಿಕೆ ಕಂಡುಬಂದಿದೆ. ಒಟ್ಟಿನಲ್ಲಿ ಚಿನ್ನ ಬೆಳ್ಳಿ ದರ ಯಾವಾಗ ಕಡಿಮೆ ಯಾಗುತ್ತೆ ಎಂದು ಕಾದು ನೋಡ್ಬೇಕು